ಗುರುವಾರ , ಮೇ 6, 2021
23 °C

ಹೋಟೆಲ್ ತಿಂಡಿ ಬೆಲೆ ಇಳಿಯಲಿ

ಎನ್.ಎನ್. ನಾಯಕ್,ಮೈಸೂರು Updated:

ಅಕ್ಷರ ಗಾತ್ರ : | |

ಹೋಟೆಲ್ ತಿಂಡಿ ತಿನಿಸುಗಳ ದರಗಳು ಇತ್ತೀಚೆಗೆ ಎಗ್ಗಿಲ್ಲದೆ ಏರಿಕೆಯಾಗುತ್ತಿವೆ. ಮನೆಯಿಂದ ಆಚೆ ಇರುವವರಿಗೆ, ನಗರಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಹೋಟೆಲ್ ಊಟ, ತಿಂಡಿ ಅನಿವಾರ್ಯ. ಒಂದು ಇಡ್ಲಿಗೆ ರೂ. 5 ರಿಂದ 30 ರವರೆಗೆ ವಸೂಲಿ ಮಾಡುತ್ತಾರೆ. ಇದು ಹಗಲು ದರೋಡೆಯೇ ಸರಿ.ಈರುಳ್ಳಿ ದರ ಕಿಲೋಗೆ ರೂ. 5 ಏರಿಕೆಯಾದರೂ ಈ ಹೋಟೆಲ್‌ಗಳಲ್ಲಿ ಒಂದು ಮಸಾಲೆ ದೋಸೆಗೆ ರೂ. 2 ಹೆಚ್ಚಿಸುತ್ತಾರೆ. ಆದರೆ ಈರುಳ್ಳಿ ದರ ನೆಲ ಕಚ್ಚಿದರೆ ಇವರಿಗೆ ದೋಸೆ ದರ ಇಳಿಸುವ ಸೌಜನ್ಯ ಇಲ್ಲ. ತಿಂಗಳು, ಎರಡು ತಿಂಗಳಿಗೊಮ್ಮೆ ದರ ಹೆಚ್ಚಿಸುತ್ತಾರೆ. ಉಪಯೋಗಿಸುವ ತರಕಾರಿಗಳು ಕೂಡ ಅತ್ಯಂತ ಕಳಪೆ, ಹಿಂದಿನ ದಿನ ಮಿಕ್ಕುಳಿದ ತಿಂಡಿ, ಸಾರು, ಚಟ್ನಿಗಳನ್ನು ಪೋಲು ಮಾಡುವುದಿಲ್ಲ.1977ನೇ ಇಸವಿಯಲ್ಲಿ ಆಗಿನ ಸರ್ಕಾರದಲ್ಲಿದ್ದ ಶ್ರೀರಾಮುಲು ಎಂಬ ಆಹಾರ ಮಂತ್ರಿಗಳು ಒಂದು ದಿಟ್ಟ ಹೆಜ್ಜೆ ಇಟ್ಟು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಆ ಕಾಲದಲ್ಲಿ ರಾಜ್ಯದಲ್ಲಿದ್ದ ಎಲ್ಲ ಹೋಟೆಲ್‌ಗಳನ್ನು (ಪಂಚತಾರಾ ಹೋಟೆಲ್ ಹೊರತುಪಡಿಸಿ) ಮೂರು ದರ್ಜೆಯಾಗಿ ವಿಂಗಡಿಸಿ, ಪ್ರತಿ ದರ್ಜೆಯ ಹೋಟೆಲ್‌ನಲ್ಲಿ ತಿಂಡಿ ತಿನಿಸುಗಳ ತೂಕ ಆಕಾರ ಇಷ್ಟೇ ಇರಬೇಕು. ಗುಣಮಟ್ಟ ಉತ್ತಮವಾಗಿರಬೇಕು ಎಂದು ಆಜ್ಞೆ ಹೊರಡಿಸಿ 3-4 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಅಂತೆಯೇ, ಎಲ್ಲ ಹೋಟೆಲ್‌ಗಳ ಮುಂಭಾಗದಲ್ಲಿ ದರಪಟ್ಟಿಯ ಫಲಕ ತೂಗಿಡಬೇಕು ಎಂಬುದನ್ನೂ ಕಡ್ಡಾಯಗೊಳಿಸಿದ್ದರು. ಈಗ ಫಲಕ ಮಾತ್ರ ಇವೆ, ದರಗಳಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.