ಮಂಗಳವಾರ, ಮೇ 18, 2021
28 °C

ಹೌರಾ- ಮೈಸೂರು ವಿಶೇಷ ರೈಲು ಸಂಚಾರ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಹೌರಾ- ಮೈಸೂರು- ಹೌರಾ (ನಂ. 08003/08004) ಸೂಪರ್‌ಫಾಸ್ಟ್ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮುಂದುವರಿಸಲಾಗಿದೆ.ಇದೇ 16ರಿಂದ ನ. 18ರವರೆಗೆ ಪ್ರತಿ ಶುಕ್ರವಾರ ಸಂಜೆ 4.10ಕ್ಕೆ ಹೌರಾದಿಂದ ಹೊರಡುವ ಈ ರೈಲು, ಭಾನುವಾರ ಬೆಳಿಗ್ಗೆ 5ಕ್ಕೆ ಮೈಸೂರು ತಲುಪಲಿದೆ. ಖರಗ್‌ಪುರ, ಭದ್ರಕ್, ಕಟಕ್, ಭುವನೇಶ್ವರ, ಬ್ರಹ್ಮಪುರ, ವಿಜಯನಗರ, ವಿಶಾಖಪಟ್ಟಣ, ರಾಜಮುಂಡ್ರಿ, ವಿಜಯವಾಡ, ಬಂಗಾರಪೇಟೆ, ಕೃಷ್ಣರಾಜಪುರ, ಬೆಂಗಳೂರು ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಇದೇ 19ರಿಂದ ನ. 21ರವರೆಗೆ ಮೈಸೂರಿನಿಂದ ಪ್ರತಿ ಭಾನುವಾರ ಮಧ್ಯರಾತ್ರಿ 12.30ಕ್ಕೆ ಹೊರಡುವ ರೈಲು ಮಂಗಳವಾರ ಮಧ್ಯಾಹ್ನ 2.50ಕ್ಕೆ ಹೌರಾ ನಿಲ್ದಾಣ ತಲುಪಲಿದೆ. ಒಟ್ಟಾರೆ ಹತ್ತು ಸಲ ಈ ರೈಲು ಸಂಚರಿಸಲಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.