ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಅನುತ್ತೀರ್ಣ ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ‘ಕೃಪಾಂಕ’ ನೀಡುವ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ತಿಮ್ಮೇಗೌಡ ಮಾತನಾಡಿ, ‘ಒಂದು ಅಥವಾ ಎರಡು ವಿಷಯಗಳಲ್ಲಿ ಮಾತ್ರ ಕೃಪಾಂಕ ನೀಡಲಾಗುವುದು. ಶೇ 2 ರಷ್ಟು ಕೃಪಾಂಕ ನೀಡಲಾಗುವುದು. ವಿದ್ಯಾರ್ಥಿಯ ಉಳಿದ ಪತ್ರಿಕೆಗಳಿಂದ ಅಂಕಗಳನ್ನು ಕಡಿತ ಮಾಡಿ ಈ ಕೃಪಾಂಕ ನೀಡಲಾಗುವುದು. ಇದರಿಂದ ವಿಶ್ವವಿದ್ಯಾಲಯದ ಸಮಯ ಹಾಗೂ ಶ್ರಮ ಉಳಿತಾಯ ಆಗಲಿದೆ’ ಎಂದು ಅವರು ಹೇಳಿದರು.

‘ವಿವಿಯಲ್ಲಿ 1974ರಿಂದ 2010ರ ವರೆಗೆ ಕೃಪಾಂಕ ನೀಡುವ ವ್ಯವಸ್ಥೆ ಇತ್ತು. ಆಂತರಿಕ ಮೌಲ್ಯಮಾಪನದ ಅಂಕ ನೀಡುವ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕೃಪಾಂಕ ವ್ಯವಸ್ಥೆಯನ್ನು ಕೈಬಿಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಒಂದೆರಡು ಅಂಕಗಳ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣ ಆಗುತ್ತಿದ್ದಾರೆ. ಈ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಮಧ್ಯವರ್ತಿಗಳ ನೆರವಿನಿಂದ ಅಕ್ರಮ ನಡೆಸುತ್ತಿದ್ದರು. ಇದನ್ನು ತಡೆಯಲು ಕೃಪಾಂಕ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ’ ಎಂದರು.

‘ಕೃಪಾಂಕ ನೀಡುವ ವ್ಯವಸ್ಥೆ ಜೂನ್ನಲ್ಲಿ ನಡೆಯುವ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ. ಹಾಗೆಯೇ ಪ್ರಥಮ ಹಾಗೂ ದ್ವಿತೀಯದರ್ಜೆಯಲ್ಲಿ ಉತ್ತೀರ್ಣರಾಗಲು ಶೇ 0.5ರಷ್ಟು ಅಂಕಗಳ ಕೊರತೆ ಅನುಭವಿಸುವ ವಿದ್ಯಾರ್ಥಿಗಳಿಗೂ ಕೃಪಾಂಕ ನೀಡಲಾಗುವುದು’ ಎಂದು ಅವರು ತಿಳಿಸಿದರು.

4 ವರ್ಷದ ಪದವಿಗೆ ಒಪ್ಪಿಗೆ: ವಿವಿಯಲ್ಲಿ 2014–15ನೇ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

‘ಈ ಪದವಿ ಮೂರು ಹಂತಗಳನ್ನು ಹೊಂದಿರಲಿದೆ. ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಡಿಪ್ಲೊಮಾ ಅಥವಾ ಅಸೋಸಿಯೇಟ್ ಪದವಿ ಪಡೆದು ಹೊರ ಹೋಗಬಹುದು. ಮೂರು ವರ್ಷ ಅಧ್ಯಯನ ನಡೆಸಿದರೆ ಪದವಿ ನೀಡಲಾಗುವುದು. ನಾಲ್ಕು ವರ್ಷ ವ್ಯಾಸಂಗ ನಡೆಸಿದರೆ ಆನರ್ಸ್ ಪದವಿ ನೀಡಲಾಗುತ್ತದೆ. ಇದಾದ ಬಳಿಕ ವಿದ್ಯಾರ್ಥಿಗಳು ಒಂದು ವರ್ಷ ಅಧ್ಯಯನ ನಡೆಸಿ ಸ್ನಾತಕೋತ್ತರ ಪದವಿ ಪಡೆಯಬಹುದು. ಇದನ್ನು ಕ್ರೆಡಿಟ್ ಆಧಾರಿತ ಪದವಿ ವ್ಯವಸ್ಥೆ ಎನ್ನಲಾಗುತ್ತದೆ’ ಎಂದು ಅವರು ತಿಳಿಸಿದರು.

‘ಈಗಿನ ಕೋರ್ಸ್ಗಳಿಗೆ ಹೊಸ ರೂಪ ಕೊಡಲು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಲ್ಕು ವರ್ಷದ ಪದವಿ ಪಡೆಯಬೇಕು ಎಂಬುದು ಕಡ್ಡಾಯ ಇಲ್ಲ. ವಿದ್ಯಾರ್ಥಿಗಳು ಮೂರು ವರ್ಷದ ಪದವಿ ಪಡೆದ ಬಳಿಕ ವಿವಿಯಲ್ಲಿ ಅಥವಾ ಸ್ನಾತಕೋತ್ತರ ವಿಭಾಗ ಇರುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳಬಹುದು. ಅಲ್ಲಿಯೂ ಒಂದು ವರ್ಷ ಕಲಿತ ವೇಳೆ ಸ್ನಾತಕೋತ್ತರ ಪದವಿ ಮುಂದುವರಿಸಲು ಇಷ್ಟ ಪಡದಿದ್ದರೆ ಆನರ್ಸ್ ಪದವಿ ನೀಡಲಾಗುವುದು’ ಎಂದು ಅವರು ಹೇಳಿದರು.

‘ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಕ್ರೆಡಿಟ್ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗವು ಎಲ್ಲ ವಿವಿಗಳಿಗೆ ಸೂಚಿಸಿದೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್ ಈ ಸಂಬಂಧ ಮಾರ್ಗಸೂಚಿಗಳನ್ನು ನೀಡಿದೆ’ ಎಂದರು.

ಪರೀಕ್ಷೆಯಲ್ಲಿ ಅವ್ಯವಹಾರ: ದೂರಶಿಕ್ಷಣ ಫಲಿತಾಂಶ ತಡ
ವಿವಿಯ ಅಂಚೆ ತೆರಪು ಹಾಗೂ ದೂರಶಿಕ್ಷಣ ಪದವಿಯ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಪೂರ್ಣಗೊಳ್ಳುವ ವರೆಗೆ ದೂರಶಿಕ್ಷಣ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಫಲಿತಾಂಶ ತಡೆ ಹಿಡಿಯಲು ತೀರ್ಮಾನಿಸಲಾಗಿದೆ.

‘ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಲಸೂರು ಠಾಣೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ, ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತನಿಖೆ ಪೂರ್ಣಗೊಂಡ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು’ ಎಂದರು.

‘ಅಂದಾಜು 45,000 ದೂರಶಿಕ್ಷಣ ಪದವಿ ವಿದ್ಯಾರ್ಥಿಗಳು ಇದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಗೃಹ ಇಲಾಖೆಯ ಕಾರ್ಯದರ್ಶಿ ಅವರು ಆಂತರಿಕ ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದಾರೆ. 2–3 ದಿನಗಳಲ್ಲಿ ಸಮಿತಿಯನ್ನು ರಚಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.