ಭಾನುವಾರ, ಜನವರಿ 26, 2020
21 °C

‘ಅಭಿವೃದ್ಧಿಗೆ ಮಹತ್ವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇರದಾಳ(ಬನಹಟ್ಟಿ):  ಪಟ್ಟಣದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಅದರಲ್ಲೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಸ್ಥಳೀಯ ಪುರಸಭೆ ಅಧ್ಯಕ್ಷ ಹನಮಂತ ರೋಡನ್ನವರ ತಿಳಿಸಿದರು. ಬುಧವಾರ ಸ್ಥಳೀಯ ಅಲ್ಲಮಪ್ರಭು ದೇವಸ್ಥಾನದ ಹತ್ತಿರ ಪುರಸಭೆ ವತಿಯಿಂದ ಕೊಳವೆ ಬಾವಿ ತೆಗೆಸುವ ಸಂದರ್ಭದಲ್ಲಿ ಪೂಜೆ ನೆರವೇರಿಸಿ  ಅವರು ಮಾತನಾಡಿದರು.ಪಟ್ಟಣದ ಅಭಿವೃದ್ಧಿಗಾಗಿ ಹಂತ ಹಂತವಾಗಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅರುಣಕುಮಾರ, ಸದಸ್ಯರಾದ ಶ್ರೀಶೈಲ ತೆಳಗಿನಮನಿ, ರಾಜೇಸಾಬ ನಗಾರ್ಜಿ, ಸುರೇಶ ಕಬಾಡಗಿ, ಎಂ.ಸಿ. ತೆಳಗಿನಮನಿ, ಅಲ್ಲಯ್ಯ ದೊಡಮನಿ, ಬಸಪ್ಪ ಮುಕರಿ, ಸುರೇಶ ಮರಡಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)