ಶನಿವಾರ, ಫೆಬ್ರವರಿ 27, 2021
20 °C
ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಎಂ ಕಿವಿಮಾತು

‘ಅಶ್ಲೀಲ ಸಿನಿಮಾಗಳಿಗೆ ಕಡಿವಾಣ ಹಾಕಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಶ್ಲೀಲ ಸಿನಿಮಾಗಳಿಗೆ ಕಡಿವಾಣ ಹಾಕಿ’

ಧಾರವಾಡ: ‘ಅಶ್ಲೀಲ, ದ್ವಂದ್ವಾರ್ಥದ ಸಂಭಾಷಣೆಗಳುಳ್ಳ ಸಿನಿಮಾಗಳಿಗೆ ಕಡಿ­ವಾಣ ಹಾಕಬೇಕು. ಇವುಗಳ ಬದಲು ಸಮಾಜ ಬದಲಾಯಿಸುವ, ಜನರನ್ನು ಒಳ್ಳೆಯ ದಾರಿಯತ್ತ ಕೊಂಡೊಯ್ಯುವ ಸಿನಿಮಾಗಳು ಹೆಚ್ಚು ಬರಬೇಕು’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.ಇಲ್ಲಿಯ ಕರ್ನಾಟಕ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪ­ಡಿ­ಸಿದ್ದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯ ಸರ್ಕಾರದ 2010 ಹಾಗೂ 2011ನೇ ಸಾಲಿನ ಚಲನಚಿತ್ರ ಪ್ರಶಸ್ತಿ­ಗ­ಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.‘ಕ್ರೌರ್ಯವನ್ನು ವೈಭವೀಕರಿಸುವ ಚಿತ್ರ­­ಗಳೂ ಸೇರಿದಂತೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಸಿನಿಮಾಗಳೂ ಬೇಡ. ಸಮಾಜವನ್ನು ಬದಲಾಯಿಸುವ ಕಥಾ­ವಸ್ತುವುಳ್ಳ ಸಿನಿಮಾಗಳು ಹೆಚ್ಚು ಸಂಖ್ಯೆ­ಯಲ್ಲಿ ಬರಬೇಕು.ಇಂಥ ಚಿತ್ರ­ಗಳಿಗೆ ನಮ್ಮ ಸರ್ಕಾರ ಹೆಚ್ಚು ಉತ್ತೇ­ಜನ ನೀಡುತ್ತದೆ. ನಮ್ಮ ಬದುಕು, ಸಂಸ್ಕೃತಿ ಇತಿಹಾಸ, ಮೌಲ್ಯಗಳನ್ನು ಹಿಡಿದಿಡುವ ಸಿನಿಮಾ­ಗಳು ಬೇಕು. ಏಕೆಂದರೆ ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮ­ವಾಗಿದೆ’ ಎಂದರು.‘ನಮ್ಮ ಸರ್ಕಾರ ಬಂದ ಮೇಲೆ 100 ಸಿನಿಮಾಗಳಿಗೆ ತಲಾ ₨ 10 ಲಕ್ಷ ಸಹಾಯ­ಧನವನ್ನು ನೀಡಲು ನಿರ್ಧರಿ­ಸ­ಲಾ­ಗಿದೆ. ಇದಕ್ಕೂ ಮುನ್ನ 75 ಸಿನಿಮಾ­ಗಳಿಗೆ ಸಹಾಯ ಧನ ನೀಡಲಾಗುತ್ತಿತ್ತು. ಚಿತ್ರೋದ್ಯಮಕ್ಕೆ ಅಗತ್ಯವಿರುವ ಎಲ್ಲ ಬಗೆಯ ಸಹಾಯವನ್ನು ನೀಡಲು ಸರ್ಕಾರ ಸಿದ್ಧವಿದೆ’ ಎಂದರು.ಪ್ರೀತಿ ಮರೆಯಲಾಗದು; ಪುನೀತ್

2010ನೇ ಸಾಲಿನ ಅತ್ಯುತ್ತಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುನಿತ್‌ ರಾಜ­ಕುಮಾರ್‌, ‘ನನಗೆ ಅತ್ಯಂತ ದೊಡ್ಡ ಪ್ರಶಸ್ತಿ ನೀಡಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ. ನೀವು ಕನ್ನಡ ಚಿತ್ರರಂಗದ ಮೇಲೆ ಇಟ್ಟ ಪ್ರೀತಿ ವಿಶ್ವಾಸವನ್ನು ಮರೆಯಲಾಗುವುದಿಲ್ಲ’ ಎಂದು ಭಾವುಕರಾಗಿ ನುಡಿದರು.2010ನೇ ಸಾಲಿನ ಡಾ.ರಾಜಕುಮಾರ್‌ ಪ್ರಶಸ್ತಿಯನ್ನು ಎಸ್‌.ಶಿವರಾಂ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಭಾರ್ಗವ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ, ಸಂಸದೆ ರಮ್ಯಾ ಸ್ವೀಕರಿಸಿದರು. ಡಾ.ವಿಷ್ಣುವರ್ಧನ್‌ ಪ್ರಶಸ್ತಿ  ಸ್ವೀಕರಿಸಬೇಕಿದ್ದ ಅಂಬರೀಷ್‌ ಗೈರುಹಾಜರಾಗಿದ್ದರು.

2011ನೇ ಸಾಲಿನ ಡಾ.ರಾಜಕುಮಾರ್‌ ಪ್ರಶಸ್ತಿಯನ್ನು ಹಂಸಲೇಖ, ಡಾ.ವಿಷ್ಣು­ವರ್ಧನ್‌ ಪ್ರಶಸ್ತಿಯನ್ನು ಅನಂತನಾಗ್‌, ಅತ್ಯುತ್ತಮ ನಟ ಪ್ರಶಸ್ತಿಯನ್ನು ಅರ್ಜುನ್‌ ಸರ್ಜಾ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಭಾವನಾ ಸ್ವೀಕರಿಸಿದರು.ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದ ಡಿ.ರಾಜೇಂದ್ರ ಬಾಬು ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಿತ್ರಾ ಪ್ರಶಸ್ತಿ ಸ್ವೀಕರಿಸಿದರು. ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿ ಸ್ವೀಕರಿಸಬೇಕಿದ್ದ ಡಾ.ಬರಗೂರು ರಾಮಚಂದ್ರಪ್ಪ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಆಯ್ಕೆಯಾಗಿದ್ದ ಅಗ್ನಿ ಶ್ರೀಧರ್‌ ಗೈರು ಹಾಜರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.