ಮಂಗಳವಾರ, ಜೂನ್ 15, 2021
21 °C

‘ಆತ್ಮವಿಶ್ವಾಸದಿಂದ ಮುನ್ನಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಿಳೆಯರು ಇಂದು ಆತ್ಮವಿಶ್ವಾಸ ಮತ್ತು ಧನಾತ್ಮಕ ಯೋಚ­ನೆ­ಯಿಂದ ಸಾಧನೆಯತ್ತ ಮುನ್ನಡೆ­ಯ­ಬೇಕು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಪ್ರಾದೇ­ಶಿಕ ನಿರ್ದೇಶಕಿ ಉಮಾ ಶಂಕರ್‌ ಹೇಳಿದರು.ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಹಿಳಾ ಲೆಕ್ಕ ಪರಿಶೋಧಕರ ಸಮಾವೇಶ’ದಲ್ಲಿ ಭಾಗ­ವಹಿಸಿ ಅವರು ಮಾತನಾಡಿದರು.‘ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದು ಸರಿ­ಯಲ್ಲ. ದಿನ ನಿತ್ಯವೂ ಅವಳಿಗೆ ಗೌರವವನ್ನು ನೀಡುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸ­ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.ಕೆನರಾ ಬ್ಯಾಂಕ್ ಪ್ರಧಾನ ವ್ಯವ­ಸ್ಥಾಪಕಿ ಪಿ.ವಿ.ಭಾರತಿ ಮಾತನಾಡಿ, ‘ಇಂದು ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸು­ತ್ತಿ­ದ್ದಾರೆ. ಬ್ಯಾಂಕಿಂಗ್‌, ಹಣಕಾಸು ಕ್ಷೇತ್ರ­ಗಳಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಸಾಧಿ­ಸು­ತ್ತಿದ್ದಾರೆ. ಲೆಕ್ಕ ಪರಿಶೋಧಕರ ಹುದ್ದೆ­ಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ­ಯಿತ್ತು. ಆದರೆ, ಈಗ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2013 ರಲ್ಲಿ ಮಹಿಳಾ ಲೆಕ್ಕ ಪರಿಶೋಧಕರ ಸಂಖ್ಯೆ ಶೇ 22 ರಷ್ಟಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.