ನವದೆಹಲಿ(ಪಿಟಿಐ): ‘ಸಬ್ಸಿಡಿ ಹೊರೆ ಹೆಚ್ಚಿದರೂ ಪರವಾಗಿಲ್ಲ, ಬಡವರಿಗಾಗಿ ಜಾರಿಗೊಳಿಸಿರುವ ಆಹಾರ ಭದ್ರತಾ ಮಸೂದೆ ಜತೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ ಹೇಳಿದ್ದಾರೆ.

ಇನ್ನು ನಾಲ್ಕು ದಿನಗಳಲ್ಲಿ ಬಾಲಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆ ಸಭೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶರ್ಮಾ ಮಾತನಾಡಿದರು. ‘ಡಬ್ಲ್ಯುಟಿಒ’ ಸಭೆಯಲ್ಲಿ ಸಕಾ ರಾತ್ಮಕ ಅಭಿಪ್ರಾಯ ಮೂಡುವ ವಿಶ್ವಾ ಸವಿದೆ. ಆದರೆ, ಬಡವರಿಗಾಗಿ ಜಾರಿಗೊ ಳಿಸಿರುವ ಆಹಾರ ಭದ್ರತಾ ಮಸೂದೆ ಜತೆ ಯಾವುದೇ ರಾಜಿ ಮಾಡಿಕೊಳ್ಳಲು ಭಾರತ ಸಿದ್ಧವಿಲ್ಲ’ ಎಂದು ಅವರು ಸ್ಪಷ್ಟ ಪಡಿಸಿದರು.

ಅಮೆರಿಕ, ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳು ಭಾರತದ ಆಹಾರ ಭದ್ರತಾ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದು ‘ಡಬ್ಲ್ಯುಟಿಒ’ ಕೃಷಿ ಒಪ್ಪಂದದ (ಎಒಎ) ಉಲ್ಲಂಘನೆ ಎಂದು ಹೇಳಿವೆ. ಇದರ ಬದಲಿಗೆ ನಾಲ್ಕು ವರ್ಷ ಗಳ ಅವಧಿಯ ಮಧ್ಯಂತರ ಪರಿಹಾರ ವೊಂದನ್ನು ಸೂಚಿಸಿದೆ. ಆದರೆ, ಭಾರತ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ 46 ದೇಶಗಳು (ಜಿ33) ಈ ಪ್ರಸ್ತ ಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

1986–88ರ ‘ಡಬ್ಲ್ಯುಟಿಒ’ ಕೃಷಿ ಒಪ್ಪಂದಕ್ಕೂ (ಎಒಎ) ಈಗಿನ ಆಹಾರ ಧಾನ್ಯಗಳ ಬೆಲೆಗೂ ಸಾಕಷ್ಟು ವ್ಯತ್ಯಾಸ ವಿದೆ. ಆಹಾರ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಇತ್ತೀಚಿನ ವರ್ಷಗ ಳಲ್ಲಿ ಹಲವು ಪಟ್ಟು ಹೆಚ್ಚಿದೆ.

ಹೀಗಾಗಿ ಅಭಿವೃದ್ಧಿ ಹೊಂದಿದ ದೇಶಗಳು ಮುಂದಿ ಟ್ಟಿರುವ ಮಧ್ಯಂತರ ಪರಿಹಾರವನ್ನು ಭಾರತ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.