ಭಾನುವಾರ, ಜೂನ್ 13, 2021
22 °C
ಕೋಳೆರ ಝರು ಗಣಪತಿ

‘ಎಎಪಿ’ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ‘ಕೊಡಗು ಜಿಲ್ಲೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಜಿಲ್ಲೆಯಲ್ಲಿ ಸುಮಾರು 14 ಸಾವಿರ ಮಂದಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಯುವಜನತೆ ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ದುಡಿಯಲು ಮುಂದೆ ಬರುತ್ತಿರುವುದು ಸಂತೋಷ ತಂದಿದೆ’ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಕೋಳೆರ ಝರು ಗಣಪತಿ ತಿಳಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿ, ಭ್ರಷ್ಟಾಚಾರ­ವನ್ನು ನಿರ್ಮೂಲನೆ ಮಾಡಲು ಉದ್ದೇಶದಿಂದ ಆಮ್‌ ಆದ್ಮಿ ಪಕ್ಷವನ್ನು ಕಟ್ಟಲಾಗಿದೆ. ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಬೃಹತ್‌ ಸಮ್ಮೆಳನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಮುಂದಿನ ದಿನಗಳಲ್ಲಿ ಆಮ್‌ ಆದ್ಮಿ ಪಕ್ಷವು  ಅರವಿಂದ್‌ ಕೆಜ್ರಿವಾಲ್‌ ನಾಯಕತ್ವದಲ್ಲಿ ಬಲಿಷ್ಠವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿರಾಜಪೇಟೆ ತಾಲ್ಲೂಕು ಸಂಚಾಲಕ ಪಿ. ಕಿರಣ್‌ ಪೊನ್ನಪ್ಪ ಮಾತನಾಡಿ, ಈಗಾಗಲೇ ವಿರಾಜಪೇಟೆ ಪಟ್ಟಣದಲ್ಲಿ ನಗರ ಸಮಿತಿಯನ್ನು ರಚಿಸಲಾಗಿದೆ. ಅದರ ಅಧ್ಯಕ್ಷರಾಗಿ ಹಬಿಬುಲ್ಲಾ, ಕಾರ್ಯದರ್ಶಿಯಾಗಿ ಸತ್ಯ, ಪದಾಧಿಕಾರಿಗಳಾಗಿ ಎಸ್‌. ಮನೋಹರ್‌, ಮೊಹಮ್ಮದ್‌ ಶಫಿ ಎ. ಕಾಳಪ್ಪ, ಮೊಹಮ್ಮದ್‌ ಅಯೂಬ್‌ ಹಾಗೂ ರುಮಾನ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.