ಗುರುವಾರ , ಜನವರಿ 23, 2020
19 °C
ವೀರಗಂಗಾಧರ ಸ್ವಾಮೀಜಿ ಅವರ ಲಿಂಗೈಕ್ಯ ದಿನಾಚರಣೆ

‘ಒಳಪಂಗಡ ಹಾವಳಿಯಿಂದ ಸಮಾಜ ಛಿದ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಒಳಪಂಗಡಗಳ ಹಾವಳಿಯಿಂದ ವೀರಶೈವ ಲಿಂಗಾಯತ ಸಮಾಜ ಛಿದ್ರವಾಗುತ್ತಿದೆ’ ಎಂದು ಎಂದು ಹರಿಹರದ ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಕಟ್ಟರು.ರೇಣುಕಾ ಮಂದಿರದಲ್ಲಿ ಶುಕ್ರವಾರ ರೇಣುಕ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರಗಂಗಾಧರ ಸ್ವಾಮೀಜಿ ಅವರ 31ನೇ ವರ್ಷದ ಲಿಂಗೈಕ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.‘ವೀರಶೈವ ಲಿಂಗಾಯತ ಸಮಾಜ ಮರ ಇದ್ದಂತೆ. ಒಳಪಂಗಡಗಳು ಮರದ ಕೊಂಬೆಗಳಿದ್ದಂತೆ. ಆದರೆ, ಮರದ ಬುಡಕ್ಕೆ ಕೊಡಲಿಪೆಟ್ಟು ಬಿದ್ದಾಗ ಎಲ್ಲರೂ ಸಂಘಟಿತರಾಗಬೇಕು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಧಾರ್ಮಿಕ ನಿರಾಸಕ್ತಿ ಹೆಚ್ಚುತ್ತಿದೆ. ಪರಿಣಾಮವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ವಿರಳವಾಗುತ್ತಿವೆ. ತಿಂಗಳ ಕಾಲ ನಡೆಯುತ್ತಿದ್ದ ಆಷಾಢಮಾಸ ಪೂಜೆಯ ವೈಭವ ಕಣ್ಮರೆಯಾಗಿದೆ.ಮಕ್ಕಳಿಗೆ ಸಂಸ್ಕಾರ ಕೊಡಿಸುವ ಕಾರ್ಯ ಪೋಷಕರಿಂದ ಆಗುತ್ತಿಲ್ಲ. ಮಕ್ಕಳು ಮಾಡುವ ಸಂಸ್ಕಾರ ರಹಿತ ಕಾರ್ಯವನ್ನೇ ಪೋಷಕರು ಪ್ರೋತ್ಸಾಹಿಸುತ್ತಿರುವಂತಹ ದುರಂತ ಕಾಣುತ್ತಿದ್ದೇವೆ’ ಎಂದರು.ರಂಭಾಪುರಿ ಪೀಠಾಧ್ಯಕ್ಷ ಪ್ರಸನ್ನ ರೇಣುಕ ರಾಜದೇಶಿಕೇಂದ್ರ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ  ಆಶೀರ್ವಚನ ನೀಡಿದರು.

ರೇಣುಕ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಬಸವರಾಜಯ್ಯ, ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಕ್ಕಳ ತಜ್ಞವೈದ್ಯ ಡಾ.ಎನ್.ಕೆ. ಕಾಳಪ್ಪನವರ್ ಅವರನ್ನು ಸನ್ಮಾನಿಸಲಾಯಿತು.ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವರಮನಿ ಶಿವಕುಮಾರ್, ಕೆ.ತಿಪ್ಪಣ್ಣ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)