ಮಂಡ್ಯ: ದಕ್ಷಿಣ ಕನ್ನಡ ಸಂಪದ್ಭರಿತವಾಗಲು ದೇಶ–ವಿದೇಶಕ್ಕೆ ವಲಸೆ ಹೋದ ದಕ್ಷಿಣ ಕನ್ನಡಿಗರೂ ಕಾರಣ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ವಿ. ನಾವಡ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವಾರ್ಷಿಕೋತ್ಸವ ಉದ್ಘಾಟನೆ ಮಾಡಿ ಮಾತನಾಡಿದರು.

ವಿವಿಧ ಕಾರಣಗಳಿಗಾಗಿ ದಕ್ಷಿಣ ಕನ್ನಡದಿಂದ ವಲಸೆ ಹೋದವರು, ಜಿಲ್ಲೆಯಲ್ಲಿ ಶಾಲಾ–ಕಾಲೇಜು ತೆರೆಯಲು, ದೇವಸ್ಥಾನಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ ಎಂದರು.

ಮಂಡ್ಯದ ಜನರೊಂದಿಗೆ ಬೆರೆತಿರುವ ಕರಾವಳಿಯ ಜನರು, ಪ್ರತಿಭಾ ಪುರಸ್ಕಾರ, ಭರತನಾಟ್ಯ, ಯಕ್ಷಗಾನ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.

ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ ಅಧ್ಯಕ್ಷ ಜಗನ್ನಾಥ ಎಸ್. ಶೆಟ್ಟಿ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಡಾ.ವಿ.ಎಲ್.ನಂದೀಶ್, ನಿವೃತ್ತ ಅಧಿಕಾರಿ ಗೋಪಾಲಕೃಷ್ಣೇಗೌಡ ಇದ್ದರು.

ಬೀರೇಶ್ವರಸ್ವಾಮಿ ದೊಡ್ಡ ಹಬ್ಬ
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ‘ಅರುವನಹಳ್ಳಿ ಬೀರೇಶ್ವರಸ್ವಾಮಿ ದೇವರ ದೊಡ್ಡ ಹಬ್ಬ’ವು ಮಾ.4 ಮಧ್ಯಾಹ್ನ 12.30ಕ್ಕೆ ಅರುವನಹಳ್ಳಿಯಲ್ಲಿ ನಡೆಯಲಿದೆ. ಕಾಳಿಕಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.