ಮಂಗಳವಾರ, ಜೂನ್ 22, 2021
29 °C

‘ಕಾರ್ಖಾನೆ ಲಾಭದಲ್ಲಿದೆ; ವದಂತಿಗೆ ಕಿವಿಗೊಡಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಕ್ಕೇರಿ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಲಾಭದಲ್ಲಿದ್ದು, ವದಂತಿಗಳಿಗೆ ಕಿವಿಗೊಡಬಾರದು ಎಂದು ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ ರೈತರಲ್ಲಿ ವಿನಂತಿಸಿದರು.ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರಿಗೆ ಉಚಿತ ಸಕ್ಕರೆ ವಿತರಣೆ ಮಾಡಿ ಮಾತನಾಡಿದರು.ಕಾರ್ಖಾನೆಯನ್ನು ೩೦ವರ್ಷಗಳ ಅವಧಿಗೆ ₨ ೧೦೭ಕೋಟಿಗೆ ಲೀಸ್ ನೀಡಲಾಗಿದೆ. ₨ ೪ ಕೋಟಿ ಲಾಭಾಂಶದಲ್ಲಿದೆ. ಕಾರ್ಖಾನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಚರ-ಸ್ಥಿರಾಸ್ತಿ ಇದ್ದು, ಎಲ್ಲವು ಕಾನೂನು ಬದ್ಧವಾಗಿದೆ. ಷೇರುದಾರರಿಗೆ ಪ್ರಪ್ರಥಮವಾಗಿ ಶ್ರೇಷ್ಟ ಗುಣಮಟ್ಟದ ಎಂ೩ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿರುವ ರಾಜ್ಯದಲ್ಲಿನ ಏಕೈಕ ಕಾರ್ಖಾನೆ ಇದು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಅವರು ಹೇಳಿದರು.ತಾಲ್ಲೂಕಿನ ಶಾಸಕ ಕೆ.ಸಿ. ನಾರಾಯಣಗೌಡ ಮಾತನಾಡಿ, ಕೋರಮಂಡಲ್ ಹಾಗೂ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗಳು ರೈತರ ಕಣ್ಣಾಗಿದ್ದು, ಯಾವುದೇ ಸಮಸ್ಯೆ ಬಂದರೂ ಬಗೆಹರಿಸುವುದಾಗಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಕಾರ್ಖಾನೆ ಅಧ್ಯಕ್ಷ ಬಿ.ಸಿ. ಮಂಜುನಾಥ್, ನಿರ್ದೇಶಕ ತೇಜಸ್ವಿ ಕಿರಣ್, ಆನೆಗೂಳ ಎ.ಆರ್. ಮಂಜುನಾಥ್, ಕಾಯಿ ಮಂಜೇಗೌಡ, ಕೆ.ಜಿ. ಅಣ್ಣಯ್ಯ, ಜಿಲ್ಲಾ ಸಹಕಾರ ಅಧ್ಯಕ್ಷ ಕೆ.ಜಿ. ತಮ್ಮಣ್ಣ, ಮಹದೇವು ಮೊದಲಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.