ಶುಕ್ರವಾರ, ಜನವರಿ 24, 2020
17 °C

‘ಕಾವ್ಯ ಲಯ ಕಳೆದುಕೊಂಡಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾವ್ಯ ಇಂದು ತನ್ನ ಲಯ ವನ್ನು ಕಳೆದುಕೊಂಡಿದೆ. ಕಾವ್ಯದಲ್ಲಿ ಇಂದು ಅನುಕರಣೆಯೇ ಹೆಚ್ಚಾಗಿದೆ.  ಕಾವ್ಯ ಇಂದು ನಿನ್ನೆಯ ಕಥೆಗಳನ್ನು ನಿರೂಪಿಸುವ ಕಲೆಯಂತಾಗಿದೆ’ ಎಂದು  ಸಾಹಿತಿ ಚಂದ್ರಶೇಖರ ಕಂಬಾರ ಅವರು ವಿಷಾದಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿಯು ಶನಿವಾರ ಜೈನ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಈಶಾನ್ಯ ಮತ್ತು ದಕ್ಷಿಣ ಭಾರತೀಯ ಕಾವ್ಯೋತ್ಸವ’ ಕಾರ್ಯಕ್ರಮದಲ್ಲಿ  ಮಾತನಾಡಿದರು.‘ಸಾಹಿತ್ಯವು ಎದುರಿಸುತ್ತಿರುವ ಸಮ ಸ್ಯೆಗಳ ಕುರಿತು ಸಮಗ್ರ ಚರ್ಚೆ ಮಾಡಲು ಇದು ಸಕಾಲವಾಗಿದೆ. ಸಾಹಿತ್ಯವು ಸಾಮಾನ್ಯ ಜನರಿಗೆ ತಲುಪು ವಂತಾಗಬೇಕು. ಓದುಗರಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುವುದು ಇಂದಿನ ಲೇಖಕರು ಮತ್ತು ಕವಿಗಳಿಗೆ ಸವಾಲಾಗಿದೆ’ ‘ನಾನು ಕೂಡ ಒಬ್ಬ ಲೇಖಕನಾಗಿ ನನ್ನ ಅನುಭವಗಳನ್ನು ಸಮಕಾ ಲೀನ ತೆಯ ಮೂಸೆಯಲ್ಲಿ ನೋಡಿ ತರ್ಕ, ಕಾರಣ ಮತ್ತು ವ್ಯಂಗ್ಯದ ಆಧಾರದಲ್ಲಿ ಬರೆದಿದ್ದೇನೆ. ನಾನು ಕ್ರಿಯಾಶೀಲತೆ ಮತ್ತು ಪ್ರೀತಿಯನ್ನು ನೆಚ್ಚಿಕೊಂಡು ಬರವಣಿಗೆಯಲ್ಲಿ ತೊಡಗಿ ಸಿಕೊಂಡಿ ದ್ದೇನೆ’ ಎಂದು ಹೇಳಿದರು.‘ಮರೆತೆನೆಂದರೆ ಮರೆಯಲಿ ಹ್ಯಾಂಗ್... ಮಾವೊತ್ಸೆ ತುಂಗಾ’ ಕವನ ವಾಚನ ಮಾಡಿದರು. ಕವಿ ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ ಮಾತನಾಡಿ, ‘ಕವನಗಳು ಬೇರೆ–ಬೇರೆ ಭಾಷೆಗಳಲ್ಲಿ ರಚಿತವಾದರೂ ಅವುಗಳಲ್ಲಿನ ಹೊಳಹುಗಳು ಪರಸ್ಪರ ಪೂರಕವಾಗಿವೆ. ಭಾರತದ ಸಮಗ್ರ ಕಾವ್ಯ ಸಂಪತ್ತನ್ನು ಗ್ರಹಿಸಲು ಇಂತಹ ಕಾವ್ಯೋತ್ಸವಗಳು ಸಹಕಾರಿಯಾಗುತ್ತವೆ’ ಎಂದರು.ಮಡೆ ಮಡೆ ಸ್ನಾನ ಅಸಹ್ಯವಾದ ಆಚರಣೆ

ಮಡೆ ಮಡೆ ಸ್ನಾನ ಒಂದು  ಒಂದು ಕೆಟ್ಟ ಹಾಗೂ ಅಸಹ್ಯಕರವಾದ ಆಚರಣೆ. ಕೂಡಲೇ ಈ ಆಚರಣೆಯನ್ನು ನಿಲ್ಲಿಸಬೇಕು.ಇದನ್ನು ಬುದ್ಧಿವಂತರೆಲ್ಲರೂ ವಿರೋಧಿಸಬೇಕು’

–ಸಾಹಿತಿ ಚಂದ್ರಶೇಖರ ಕಂಬಾರ

ಪ್ರತಿಕ್ರಿಯಿಸಿ (+)