ಭಾನುವಾರ, ಜೂನ್ 13, 2021
23 °C

‘ಕೆಜೆಪಿಯಿಂದ ವ್ಯಕ್ತಿಗೆ ಬೆಂಬಲ, ಪಕ್ಷಕ್ಕೆ ಅಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ‘ಕೆಜೆಪಿ ಪಕ್ಷವು  ರಾಯ­ಚೂರು ಲೋಕಸಭೆಯ ಅಭ್ಯರ್ಥಿ ಕೆ.ಶಿವಣ್ಣಗೌಡ ನಾಯಕ ಅವರಿಗೆ ಬಾಹ್ಯ ಬೆಂಬಲ ನೀಡಲಾಗವುದು. ಬಿಜೆಪಿ ಪಕ್ಷಕ್ಕೆ ಅಲ್ಲ’ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಸ್ಪಷ್ಟಪಡಿಸಿದರು.ಪಟ್ಟಣದ ಚರಬಸವೇಶ್ವರ ಗದ್ದು­ಗೆಯ ಕಲ್ಯಾಣ ಮಂಟಪದಲ್ಲಿ ಶುಕ್ರ­ವಾರ  ಕೆಜೆಪಿ ಕಾರ್ಯಕರ್ತರ ಸಭೆ­ಯಲ್ಲಿ ಮಾತನಾಡಿದ ಅವರು, ಇದು ಕಾರ್ಯಕರ್ತರ ಒಮ್ಮತದ ನಿರ್ಧಾರ­ವಾಗಿದೆ. ನಮಗೆ ವಿಷಯಾಧಾರಿತ ವ್ಯಕ್ತಿಗೆ ನಮ್ಮ ಪಕ್ಷವು ಬೆಂಬಲಿಸಲಿದೆ. ಬಿಜೆಪಿ ಪಕ್ಷಕ್ಕೆ ಅಲ್ಲ ಅನಾವಶ್ಯಕವಾಗಿ ಗೊಂದಲ ಉಂಟು ಮಾಡಿ ಬಿಜೆಪಿ­ಯಲ್ಲಿ ಸೇರ್ಪಡೆ ಎಂಬುವುದು ಸರಿ­ಯಲ್ಲ ಎಂದು ಅವರು ತಿಳಿಸಿದರು.ಹಿಂದೆ ನಮ್ಮ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದರು ಅವರ ನಿರ್ಧಾರ­ದಂತೆ ಪಕ್ಷ ತೊರೆದು ಸ್ವತಂತ್ರವಾಗಿ ಪುರಸಭೆ ಚುನಾವಣೆ ಎದುರಿಸಿದೆವು. ನಂತರ ವಿಧಾನಸಭಾ ಚುನಾವಣೆ­ಯಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಇತಿಹಾಸ ನಿರ್ಮಿಸಿದೆವು. ರಾಜಕೀಯ ಬದಲಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೆಜೆಪಿ ಮುಖಂಡರು ಸೇರ್ಪಡೆ­ಯಾದರು ನಾವು ಮಾತ್ರ ಕೆಜೆಪಿಯಲ್ಲಿ ಉಳಿದುಕೊಂಡಿದ್ದೇವೆ. ಕಾರ್ಯಕರ್ತರ ನಿರ್ಧಾರ ನಮ್ಮ ಅಂತಿಮ ನಿರ್ಧಾರ­ವಾಗಿದೆ ಎಂದು ಹೇಳಿದರು.ಕೆಜೆಪಿ ಪಕ್ಷದ ಮುಖಂಡರಾದ ಭೀಮಯ್ಯಗೌಡ ಕಟ್ಟಿಮನಿ, ಮಲ್ಲಣ್ಣ ಮಡ್ಡಿ ಸಾಹು, ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ರಾಮ­ಚಂದ್ರ ಕಾಶಿರಾಜ, ತಾಹೇರಪಾಶ ಕೆಂಭಾವಿ, ಮೋನಯ್ಯ ಹೊಸ್ಮನಿ, ಪುರಸಭೆ ಸದಸ್ಯರಾದ ವಸಂತ ಸುರ­ಪುರ­ಕರ್‌, ಬಸವರಾಜ ಆನೇಗುಂದಿ, ದೊಡ್ಡ ಮಾನಯ್ಯ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.