ಶುಕ್ರವಾರ, ಮಾರ್ಚ್ 5, 2021
27 °C
ಮೂವರು ಸಾಧಕರು, ಮೂರು ಸಂಸ್ಥೆಗಳಿಗೆ ಮುಖ್ಯಮಂತ್ರಿಗಳಿಂದ ಪರಿಸರ ಪ್ರಶಸ್ತಿ ಪ್ರದಾನ

‘ಕೆರೆ ಸಂರಕ್ಷಣಾ ಕಾಯ್ದೆ ಜಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೆರೆ ಸಂರಕ್ಷಣಾ ಕಾಯ್ದೆ ಜಾರಿ’

ಬೆಂಗಳೂರು: ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ – 2014  ಶುಕ್ರವಾರದಿಂದ ಜಾರಿಗೆ ಬರಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅರಣ್ಯ ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಹಾಗೂ  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ, ಪರಿಸರ ಹಬ್ಬ, ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಅನೇಕ ಕಡೆಗಳಲ್ಲಿ ಕೆರೆಗಳ ಸುತ್ತಮುತ್ತಲಿನ ನೀರು ಬಸಿಯುವ ಜಾಗಗಳೆಲ್ಲ ಒತ್ತುವರಿ ಆಗಿವೆ. ಒತ್ತುವರಿಗಳನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸುವ ಉದ್ದೇಶ ನಮ್ಮದು. ಈ ಕಾರ್ಯಕ್ಕೆ ಹೊಸ ಕಾಯ್ದೆ ನೆರವಾಗಲಿದೆ’ ಎಂದರು.‘ಮನೆಯ ಕಸವನ್ನು ತೊಟ್ಟಿಗೆ ಸುರಿಯುವಷ್ಟೂ ವ್ಯವಧಾನ ಕೆಲವರಿಗೆ ಇಲ್ಲ. ತೊಟ್ಟಿಯ ಹೊರಗೇ ಕಸವನ್ನು ಚೆಲ್ಲುತ್ತಾರೆ.  ಸೇದಿದ ಬೀಡಿಯನ್ನು, ಬಾಳೆ ಹಣ್ಣಿನ ಸಿಪ್ಪೆಯನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವವರಿದ್ದಾರೆ. ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡಬೇಕೆಂದರೂ ಜನ ಪಾಲಿಸುವುದಿಲ್ಲ. ಸೌರಶಕ್ತಿ ಬಳಕೆ ಉತ್ತೇಜಿಸುವ ಕಾರ್ಯಕ್ರಮಗಳ ಬಗ್ಗೆಯೂ ಆಸಕ್ತಿ ತೋರಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.‘ಬಿಬಿಎಂಪಿ ವ್ಯಾಪ್ತಿಯಲ್ಲಿ ಆರು ಘನ ತ್ಯಾಜ್ಯ ಸಂಸ್ಕರಣಾ ಘಟಕಗಳು ಮೂರು ತಿಂಗಳ ಒಳಗೆ ಕಾರ್ಯಾರಂಭ ಮಾಡಲಿವೆ.  ನಾಲ್ಕು ಘಟಕಗಳನ್ನು ಈ ತಿಂಗಳಿನಲ್ಲೇ ಉದ್ಘಾಟಿಸುತ್ತೇವೆ’ ಎಂದರು.ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ  ಮಾತನಾಡಿ, ‘ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸುವ ಸಲುವಾಗಿ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ ಮಸೂದೆಯೊಂದನ್ನು ರೂಪಿಸುತ್ತಿದೆ’ ಎಂದರು.

ವಾರ್ತಾ ಸಚಿವ ರೋಷನ್‌ ಬೇಗ್‌ ಅಧ್ಯಕ್ಷತೆ ವಹಿಸಿದ್ದರು.ಸಚಿವ ಬಿ.ರಮಾನಾಥ ರೈ ಅವರು ಪರಿಸರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಸ್ತುಪ್ರದರ್ಶನ ಮಳಿಗೆಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.  ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ ಉಪಸ್ಥಿತರಿದ್ದರು.ಕೇಂದ್ರ ಸರ್ಕಾರದ ಸ್ವಚ್ಛತಾ  ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕರ್ನಾಟಕ  ಮುಂಚೂಣಿಯಲ್ಲಿದೆ.  ಇದಕ್ಕೆ ಸಹಕರಿಸುತ್ತಿರುವ  ಸಿದ್ದರಾಮಯ್ಯರನ್ನು ಅಭಿನಂದಿಸುತ್ತೇನೆ

ಡಿ.ವಿ.ಸದಾನಂದ ಗೌಡ, 
ಕೇಂದ್ರ ಕಾನೂನು ಸಚಿವಪರಿಸರ ಪ್ರಶಸ್ತಿ ವಿಜೇತ ಸಂಸ್ಥೆಗಳು

ಘನತ್ಯಾಜ್ಯ ನಿರ್ವಹಣೆ ಕ್ಷೇತ್ರದ ಸೇವೆಗಾಗಿ ಬೆಂಗಳೂರಿನ ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ರೌಂಡ್‌ ಟೇಬಲ್‌ ಸಂಸ್ಥೆಗೆ, ನೆಡುತೋಪು  ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಧೋಳ ವಲಯದ ಬಂಟನೂರು ಗ್ರಾಮ ಅರಣ್ಯ ಸಮಿತಿಗೆ ಹಾಗೂ ದಾಂಡೇಲಿ ವನ್ಯಜೀವಿ ಧಾಮ ಪ್ರದೇಶದಲ್ಲಿ ಪರಿಸರ ಸ್ನೇಹಿ ಚಟುವಟಿಕೆ ಹಮ್ಮಿಕೊಂಡಿದ್ದಕ್ಕಾಗಿ ಅವುರಾಲಿ ಇಕೋ ಡೆವಲಪ್‌ಮೆಂಟ್‌ ಕಮಿಟಿಗೆ ಪರಿಸರ ಪ್ರಶಸ್ತಿ ವಿತರಿಸಲಾಯಿತು.*‘ನಗರದಲ್ಲಿ ಬೆರಳೆಣಿಕೆಯಷ್ಟು ಕೆರೆ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.