ಶನಿವಾರ, ಜೂನ್ 12, 2021
28 °C

‘ಕೋಮುವಾದಿಗಳಿಗೆ, ನಾಸ್ತಿಕರಿಗೆ ಮತ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಶೂರ್(ಪಿಟಿಐ): ಕೇರಳದಲ್ಲಿ ಏಪ್ರಿಲ್‌ 10ರಂದು ನಡೆಯುವ ಚುನಾವಣೆಯಲ್ಲಿ ನಾಸ್ತಿಕರಿಗೆ ಮತ್ತು ಕೋಮುವಾದಕ್ಕೆ ಉತ್ತೇಜನ ನೀಡುವವರಿಗೆ ಧಾರ್ಮಿಕ ಶ್ರದ್ಧೆ ಇರುವವರು ಮತ ಹಾಕಬಾರದು ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್ಪರ ಸಮಿತಿ (ಕೆಸಿಬಿಸಿ) ಕರೆ ನೀಡಿದೆ.ಮತದಾನಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ವಿವರಿಸುವ ಪತ್ರವನ್ನು ಕೆಸಿಬಿಸಿ ವ್ಯಾಪ್ತಿಯ ಎಲ್ಲ ಚರ್ಚುಗಳಿಗೆ ಕಳುಹಿಸಿ, ಅಲ್ಲಿ ಓದಿ ಹೇಳಲಾಗಿದೆ.ಮತದಾನ ಮಾಡುವುದು ರಾಷ್ಟ್ರ ನಿರ್ಮಾಣದ ಕೆಲಸವಾದ್ದರಿಂದ ಮತದಾನದ ಹಕ್ಕು ಇರುವ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಪತ್ರ ಒತ್ತಾಯಿಸಿದೆ. ಕ್ಯಾಥೊಲಿಕ್‌ ಬಿಷಪ್ಸ್‌ ಕಾನ್ಫರೆನ್ಸ್‌ ಆಫ್‌ ಇಂಡಿಯ ಕೂಡ ಇತ್ತೀಚೆಗೆ ತನ್ನ ಅಧೀನದ ಚರ್ಚ್‌ಗಳಿಗೆ ಇಂತಹುದೇ ಪತ್ರ ಬರೆದಿತ್ತು. ಚರ್ಚ್‌ ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ ಎಂಬುದನ್ನು ಎರಡೂ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.