ಗುರುವಾರ , ಮಾರ್ಚ್ 4, 2021
29 °C

‘ಕೌಶಲಾಭಿವೃದ್ಧಿ ಕಡೆಗಣಿಸುವಂತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೌಶಲಾಭಿವೃದ್ಧಿ ಕಡೆಗಣಿಸುವಂತಿಲ್ಲ’

ಬೈಂದೂರು: ಪದವಿ ಶಿಕ್ಷಣವು ವಿದ್ಯಾರ್ಥಿಗಳ ಬೌದ್ಧಿಕ ವ್ಯಕ್ತಿತ್ವವನ್ನು ರೂಪಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಂತದಲ್ಲಿ ಅವರು ಪಠ್ಯವಸ್ತು ಕಲಿಕೆಯ ಜತೆಗೆ ಉದ್ಯೋಗ ಮತ್ತು ಬದುಕಿಗೆ ಅಗತ್ಯವೆನಿಸುವ ಕೌಶಲ ಗಳ ಗಳಿಕೆಯನ್ನು ಕಡೆಗಣಿಸಬಾರದು ಎಂದು ಶಿರ್ವದ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಕರುಣಾಕರ ನಾಯಕ್ ಹೇಳಿದರು.ಬಸ್ರೂರು ಶಾರದಾ ಕಾಲೇಜಿನ ಪ್ರಸಕ್ತ ವರ್ಷದ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಅವರು ಈಚೆಗೆ ಉದ್ಘಾಟಿಸಿ ಮಾತನಾಡಿದರು. ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾ ರ್ಥಿಗಳು ಸಾಮಾಜಿಕ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತಾರೆ. ನಾಯಕತ್ವ ಗುಣ ಗಳನ್ನು ವೃದ್ಧಿಸಿಕೊಳ್ಳಲು, ಸಂಘಟನಾ ತ್ಮಕ ನೆಲೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಕೂಡ ಅದು ಸಕಾಲ.ಆದರೆ, ಎಳೆಯ ತಲೆಮಾರನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಮುದಾಯ ಸಾಮಾಜಿಕ ಜಾಲತಾಣ ಗಳಿಂದ ಅತಿಯಾಗಿ ಆಕರ್ಷಿತವಾದರೆ ಅಧ್ಯಯನದ ಆಸಕ್ತಿ ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಆದುದರಿಂದ ಕಾಲೇಜು ಅವರನ್ನು ಭಾವನಾತ್ಮಕವಾಗಿ ರೂಪಿಸಬೇಕು ಮತ್ತು ಸಾಮಾಜಿಕ ಸಂವಹನದ ಅವಕಾಶಗಳನ್ನು ತೆರೆದಿಡಬೇಕು. ಅವರು ಬೌದ್ಧಿಕವಾಗಿ, ವೈಚಾರಿಕವಾಗಿ ಬೆಳೆಯಲು ಅಗತ್ಯ ವಾತಾವರಣವನ್ನು ಸೃಜಿಸಬೇಕು ಎಂದು ಅವರು ಸಲಹೆಯಿತ್ತರು. ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಸಂಚಾಲಕ ಬಿ. ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎಂ. ದಿನೇಶ ಹೆಗ್ಡೆ ವಂದಿಸಿದರು. ಕನ್ನಡ ಉಪನ್ಯಾಸಕ ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.