ಮಂಗಳವಾರ, ಜೂನ್ 22, 2021
22 °C

‘ಗುಲಾಬ್‌ ಗ್ಯಾಂಗ್‌’ ತಡೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಗುಲಾಬ್‌ ಗ್ಯಾಂಗ್‌ ಸಿನಿಮಾ ಬಿಡುಗಡೆಗೆ ಹೇರಿದ್ದ ತಡೆಯಾ­­ಜ್ಞೆ­­ಯನ್ನು ದೆಹಲಿ ಹೈಕೋರ್ಟ್‌ ಗುರುವಾರ ತೆರವುಗೊಳಿಸಿದೆ.

ಪ್ರಭಾರ ಮುಖ್ಯ ನ್ಯಾಯ­ಮೂರ್ತಿ ಬಿ.ಡಿ. ಅಹಮದ್‌ ಅವರನ್ನೊಳ­ಗೊಂಡ ವಿಭಾಗೀಯ ಪೀಠ ಸಿನಿಮಾ ಬಿಡು­ಗಡೆಗೆ ಹಸಿರು ನಿಶಾನೆ ತೋರಿದೆ. ಈ ಸಿನಿಮಾ ‘ಗುಲಾಬಿ ಗ್ಯಾಂಗ್‌’ ಸ್ಥಾಪಕಿ ಸಂಪತ್‌ ಪಾಲ್‌ ಅವರಿಗೆ ಸಂಬಂಧಪಟ್ಟಿಲ್ಲ ಎಂದು ಸಿನಿಮಾದ ಮುನ್ನ ಪ್ರಕಟಿಸಲಿದೆ ಎಂದು ಪೀಠ ಸಂಪತ್‌ ಪಾಲ್‌ ಅವರಿಗೆ ಭರವಸೆ ನೀಡಿ, ತಡೆಯನ್ನು ತೆರವುಗೊಳಿಸಿದೆ. 



ಉತ್ತರ ಪ್ರದೇಶದಲ್ಲಿನ ಮಹಿಳಾ ಗುಂಪಾದ ‘ಗುಲಾಬಿ ಗ್ಯಾಂಗ್‌’ ಸ್ಥಾಪಕಿ ಸಂಪತ್‌ ಪಾಲ್‌ ಅವರ ಜೀವನ ಕುರಿತ ಚಿತ್ರ ಇದಾಗಿದೆ ಎಂದು, ಸಿನಿಮಾ ಬಿಡುಗಡೆ ವಿರುದ್ಧ ಪಾಲ್‌ ಕೋರ್ಟ್‌ ಮೆಟ್ಟಿಲೇರಿ­ದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು.

ಆದರೆ ಚಿತ್ರತಂಡ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿ, ನಿಗದಿಯಂತೆ ಶುಕ್ರವಾರ  ಸಿನಿಮಾ ಬಿಡುಗಡೆಗೆ ಅವಕಾಶ ನೀಡ­ಬೇಕೆಂದು ಕೋರಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.