ಬಾಲಿವುಡ್ ಬಾದ್ಷಾ ಶಾರುಖ್ ಖಾನ್ಗೆ ಗ್ಲಾಮರ್ ಬಗ್ಗೆ ಕಲ್ಪನೆಯೇ ಇಲ್ಲವಂತೆ. ಹೌದು ಅವರೇ ಹೇಳಿರುವಂತೆ ‘ನಾನು ಫೋಟೊಜೆನಿಕ್ ಆದರೆ ಗ್ಲಾಮರ್ ಬಗ್ಗೆ ನನಗೆ ಯಾವ ಕಲ್ಪನೆಯೂ ಇಲ್ಲ’ ಎಂದು 2016ರ ಕ್ಯಾಲೆಂಡರ್ ಬಿಡುಗಡೆ ವೇಳೆ ವರದಿಗಾರರಿಗೆ ಹೇಳಿದ್ದಾರೆ.

ಫ್ಯಾಷನ್ ಛಾಯಾಗ್ರಾಹಕ ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್ನಲ್ಲಿ ಶಾರುಖ್ ಬಿಳಿ ಅಂಗಿ, ಜೀನ್ಸ್ ಪ್ಯಾಂಟ್ ಹಾಗೂ ಜರ್ಕಿನ್ನೊಂದಿಗೆ ಒದ್ದೆಯಾಗಿ ಕಾಣಿಸಿಕೊಂಡಿದ್ದಾರೆ. ‘ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡ ಭಂಗಿಯಂತೆ ನಿಲ್ಲುಲು ಹೇಳಿದ್ದು ಡಬ್ಬೂ ಅವರ ಹೆಂಡತಿ ಮನಿಶಾ, ನನಗೆ ಗ್ಲಾಮರ್ ಫೋಟೊಗಳು ಅರ್ಥವಾಗುವುದಿಲ್ಲ. ಅಲ್ಲದೇ ಗ್ಲಾಮರ್ ಬಗ್ಗೆ ಯಾವ ಐಡಿಯಾವೂ ಇಲ್ಲ’ ಎಂದು ತಿಳಿಸಿದ್ದಾರೆ ಶಾರುಖ್.

ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ವರುಣ್ ಧವನ್, ಕೃತಿ ಸನೂನ್, ರಣವೀರ್ ಸಿಂಗ್, ಸೋನಾಕ್ಷಿ ಸಿನ್ಹಾ, ಪರಿಣಿತಿ ಚೋಪ್ರಾ, ಆಲಿಯಾ ಭಟ್ ಸೇರಿದಂತೆ ಬಾಲಿವುಡ್ನ ಹೆಸರಾಂತ ನಟ, ನಟಿಯರು ಡಬ್ಬೂ ಅವರ ಕ್ಯಾಲೆಂಡರ್ಗೆ ಫೋಸ್ ಕೊಟ್ಟಿದ್ದಾರೆ. ‘ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡ ಎಲ್ಲರೂ ಅದ್ಭುತವಾಗಿದ್ದಾರೆ, ಕ್ಯಾಲೆಂಡರ್ ಸಹ ಚೆನ್ನಾಗಿದೆ’ ಎಂದು ಹೊಗಳುತ್ತಾರೆ ಶಾರುಖ್.

ಪ್ರತಿ ವರ್ಷ ಜನವರಿಯಲ್ಲಿ ಹೊರತರುವ ಡಬ್ಬೂ ಅವರ ಕ್ಯಾಲೆಂಡರ್ನಲ್ಲಿ ಬಾಲಿವುಡ್ನ ಸ್ಟಾರ್ಗಳು ವಿಭಿನ್ನ ಭಂಗಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.