ಬೆಂಗಳೂರು: ಭಾರತದ ಪಿ.ವಿ. ಸಿಂಧು ಒಲಿಂಪಿಕ್ಸ್ನಲ್ಲಿ ಬೆಳ್ಳಿಗೆದ್ದು ಇತಿಹಾಸ ಬರೆದ ಹೊತ್ತಲ್ಲೇ ಭಾರತದ ಮಾಧ್ಯಮ ರಂಗದ ಪ್ರಮಾದಗಳ ಇತಿಹಾಸಕ್ಕೆ ಹೊಸತೊಂದು ಘಟನೆಯೂ ಸೇರಿಕೊಂಡಿತು. ಚಿನ್ನಕ್ಕಾಗಿ ನಡೆಸಿದ ಹೊರಾಟದಲ್ಲಿ ಕೆರೊಲಿನಾ ಮರೀನ್ ಎದುರು ಸಿಂಧು ಸೋಲೊಪ್ಪಿಕೊಂಡ ಕ್ಷಣದಲ್ಲಿ ಎನ್ಡಿಟಿವಿಯ ಜಾಲತಾಣದಲ್ಲಿ ‘PV Sindhu Upsets Carolina Marin to Clinch Historic Badminton Gold in Rio Olympics’ ಎಂಬ ಶೀರ್ಷಿಕೆಯೊಂದಿಗೆ ವಿವರವಾದ ಸುದ್ದಿ ಪ್ರಕಟವಾಯಿತು.

ಇದನ್ನು ನೋಡಿದಾಕ್ಷಣವೇ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಟಕಿಯಾಡಿದರು. ಬಹುಬೇಗ ಓದುಗರನ್ನು ತಲುಪುವ ಆತುರದಲ್ಲಿ ಈ ಸುದ್ದಿ ಪ್ರಕಟವಾಗಿರುವುದು ಓದಿದ ಎಲ್ಲರಿಗೂ ಅರ್ಥವಾಗುವಂತೆ ಇತ್ತು. ಪಂದ್ಯ ಮುಗಿದ ತಕ್ಷಣ ಪ್ರಕಟಿಸುವುದಕ್ಕೆಂದು ಸುದ್ದಿಯ ಎರಡು ಆವೃತ್ತಿಗಳನ್ನು ಬರೆದಿಟ್ಟುಕೊಳ್ಳಲಾಗಿತ್ತು ಎನಿಸುತ್ತದೆ. ಹಾಗಾಗಿಯೇ ಕೊನೆಯ ಸೆಟ್ನ ಸ್ಕೋರ್ ವಿವರಗಳಿರುವಲ್ಲಿ ಬರೇ X ಗಳಷ್ಟೇ ಇವೆ.

ಎರಡನೇ ಸೆಟ್ನ ಆಟ ಮುಗಿಯುವ ಹೊತ್ತಿಗೆ ಸುದ್ದಿಯನ್ನು ಸಿದ್ಧಪಡಿಸಿಟ್ಟುಕೊಂಡು ಕೊನೆಯ ಸೆಟ್ನ ಸ್ಕೋರ್ ಸೇರಿಸಿಕೊಂಡು ಪ್ರಕಟಿಸುವ ಈ ತಂತ್ರ ಕೊನೆಯ ಕ್ಷಣದಲ್ಲಿ ಕೈಕೊಟ್ಟದ್ದು ಸ್ಪಷ್ಟವಾಗಿತ್ತು. ಕೆರೋಲಿನಾ ಮರಿನ್ ಅವರು ಗೆದ್ದ ಸುದ್ದಿ ಪ್ರಕಟವಾಗುವ ಬದಲಿಗೆ ‘ಸಿಂಧು ಚಿನ್ನ ಗೆದ್ದ’ ಸುದ್ದಿ ಪ್ರಕಟವಾಯಿತು.

ಈ ಅನಾಹುತವನ್ನು ತಕ್ಷಣವೇ ಎನ್ಡಿಟಿವಿಯ ಜಾಲತಾಣ ನಿರ್ವಾಹಕರು ಗಮನಿಸಿ ಸುದ್ದಿಯನ್ನು ಸರಿಪಡಿಸಿದರಷ್ಟೇ ಅಲ್ಲದೆ ತಪ್ಪೊಪ್ಪಿಕೊಂಡು ವಿಷಾದ ವ್ಯಕ್ತಪಡಿಸುವ ಸಂದೇಶವೊಂದನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದರು.ಈ ಹೊತ್ತಿಗಾಗಲೇ ಇದು ಲಕ್ಷಾಂತರ ಮಂದಿಯನ್ನು ತಲುಪಿತ್ತು. ಇದಕ್ಕಿಂತ ದೊಡ್ಡ ದುರಂತವೆಂದರೆ ಮೊಬೈಲ್ ಓದುಗರಿಗೆ ಸುದ್ದಿಯನ್ನು ಸುಲಭದಲ್ಲಿ ಓದಲು ಅನುಕೂಲವಾಗುವಂತೆ ಮಾಡುವ ಗೂಗಲ್ನ ಅಕ್ಸಲರೇಟೆಡ್ ಮೊಬೈಲ್ ಪೇಜಸ್ (ಎಎಂಪಿ) ಮತ್ತು ಫೇಸ್ಬುಕ್ನ ಇನ್ಸ್ಟಂಟ್ ಆರ್ಟಿಕಲ್ಸ್ ವೇದಿಕೆಗಳಲ್ಲಿ ಈ ಸುದ್ದಿ ರಾತ್ರಿ 11ರ ತನಕವೂ ಲಭ್ಯವಿತ್ತು.

ಮಾಧ್ಯಮಗಳಲ್ಲಿ ಈ ಬಗೆಯ ಅಚಾತುರ್ಯಗಳು ಸಂಭವಿಸುವುದು ಇದು ಮೊದಲೇನೂ ಅಲ್ಲ. ಇಂಥ ಪ್ರಮಾದಗಳಲ್ಲಿ ಬಹಳ ಪ್ರಖ್ಯಾತವಾದುದು

1948ರ ನವೆಂಬರ್ 3ರ ಸಂಚಿಕೆಯಲ್ಲಿ ‘ಷಿಕಾಗೋ ಡೈಲಿ ಟ್ರಿಬ್ಯೂನ್’ ಪತ್ರಿಕೆ ಪ್ರಕಟಿಸಿದ ಸುದ್ದಿ. ಅಮೆರಿಕದ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಹೆನ್ರಿ ಎಸ್ ಟ್ರೂಮನ್ ಅವರನ್ನು ಥಾಮಸ್ ಇ. ದಿವೇ ಅವರು ಸೋಲಿಸದರೆಂದು ಪತ್ರಿಕೆ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಪ್ರಕಟಿಸಿಬಿಟ್ಟಿತ್ತು. ಆದರೆ ಈ ಚುನಾವಣೆಯಲ್ಲಿ ಟ್ರೂಮನ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ‘ಷಿಕಾಗೊ ಡೈಲಿ ಟ್ರಿಬ್ಯೂನ್’ನ ಈ ಅಚಾತುರ್ಯಕ್ಕೆ ಹೆಚ್ಚು ಪ್ರಚಾರ ದೊರೆತದ್ದು ತಾವು ಸೋತ ಸುದ್ದಿಯಿದ್ದ ಪತ್ರಿಕೆಯನ್ನು ಹಿಡಿದುಕೊಂಡು ನಗುತ್ತಿದ್ದ ಹೆನ್ರಿ ಟ್ರೂಮನ್ ಅವರು ಚಿತ್ರದಿಂದಾಗಿ.

ಮುದ್ರಣ ಮಾಧ್ಯಮದ ದೊಡ್ಡ ಮಿತಿಯೆಂದರೆ ಒಮ್ಮೆ ಪ್ರಕಟವಾದುದನ್ನು ತಿದ್ದಲು ಅದಕ್ಕೆ ಸಾಧ್ಯವೇ ಇಲ್ಲ. ಡಿಜಿಟಲ್ ಮಾಧ್ಯಮ ಅದಕ್ಕಿಂತ ಭಿನ್ನ ಮತ್ತು ಚಲನಶೀಲ ಎನ್ನುವ ನಂಬಿಕೆಯನ್ನು ಎನ್ಡಿಟಿವಿ ಪ್ರಕರಣ ಹುಸಿಗೊಳಿಸುತ್ತಿದೆದೆ. ಜಾಲತಾಣದಲ್ಲೇನೋ ತಕ್ಷಣವೇ ತಿದ್ದುಪಡಿ ಮಾಡಲಾಯಿತು. ಸುದ್ದಿಯ ಹಂಚಿಕೆಗಾಗಿ ತಾಣ ಅವಲಂಬಿಸಿರುವ ಸಾಮಾಜಿಕ ತಾಣಗಳಲ್ಲಿ ಇದು ಉಳಿದೇಬಿಟ್ಟಿತು. ಈ ಸುದ್ದಿಯ ಸ್ಕ್ರೀನ್ಶಾಟ್ಗಳೂ ಬಹಳಷ್ಟು ಮಂದಿಯ ಬಳಿ ಇರುವುದರಿಂದ ಇದೂ ಒಂದು ರೀತಿಯಲ್ಲಿ ‘ಷಿಕಾಗೋ ಡೈಲ್ ಟ್ರಿಬ್ಯೂನ್’ ಅಚಾತುರ್ಯದಂತೆಯೇ ಶಾಶ್ವತವಾಗಿ ಉಳಿಯಲಿದೆ. ಕರೋಲಿನಾ ಕೂಡಾ ಈ ಸುದ್ದಿಯ ಎಎಂಪಿ ಅಥವಾ ಇನ್ಸ್ಟಂಟ್ ಆರ್ಟಿಕಲ್ ಪುಟವನ್ನು ತಮ್ಮ ಫೋನ್ನಲ್ಲಿ ತೆರೆದಿಟ್ಟು ಫೋಟೋ ತೆಗೆಸಿಕೊಳ್ಳಬಹುದು!

1948ರಲ್ಲಿ ಷಿಕಾಗೊ ಡೈಲಿ ಟ್ರಿಬ್ಯೂನ್ ಹೀಗೊಂದು ಸುದ್ದಿ ಪ್ರಕಟಿಸಲು ನಿರ್ಧರಿಸಿದ್ದಕ್ಕೆ ತಂತ್ರಜ್ಞಾನದ ಮಿತಿ ಕಾರಣವಾಗಿತ್ತು. ಅಧ್ಯಕ್ಷೀಯ ಚುನಾವಣೆಗೆ ಸುಮಾರು ಒಂದು ವರ್ಷ ಮೊದಲು ಲೈನೋಟೈಪ್ ಎಂದು ಕರೆಯಲಾಗುತ್ತಿದ್ದ ಮುದ್ರಣ ಯಂತ್ರದಲ್ಲಿ ಆಗ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು. ಇದೇ ಹೊತ್ತಿಗೆ ಜಾರಿಯಾದ ಕಾನೂನೊಂದು ಕಾರ್ಮಿಕ ಸಂಘಟನೆಗಳ ಶಕ್ತಿಯನ್ನು ಕುಂದಿಸುತ್ತಿತ್ತು. ಇದರ ವಿರುದ್ಧ ಮುದ್ರಣಾಲಯದ ಕಾರ್ಮಿಕರು ಮುಷ್ಕರ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಆಫ್ಸೆಟ್ ಮುದ್ರಣ ತಂತ್ರಜ್ಞಾನದ ಆದಿಮ ರೂಪವೊಂದನ್ನು ಷಿಕಾಗೊ ಡೈಲಿ ಟ್ರಿಬ್ಯೂನ್ ಬಳಸುತ್ತಿತ್ತು. ಬೆರಳಚ್ಚು ಯಂತ್ರಗಳಲ್ಲಿ ಸುದ್ದಿಗಳನ್ನು ಮುದ್ರಿಸಿ ಅದನ್ನು ಮುದ್ರಣ ಫಲಕಗಳ ಮೂಡಿಸುವ ಕ್ರಿಯೆ ಇದು. ಇದಕ್ಕಾಗಿ ಮಾಮೂಲಿಗಿಂತ ಹಲವು ಗಂಟೆಗಳ ಮೊದಲೇ ಪುಟಗಳನ್ನು ಸಿದ್ಧಪಡಿಸಬೇಕಾಗುತ್ತಿತ್ತು.

ಈ ಮಿತಿಯಿಂದಾಗಿ ಫಲಿತಾಂಶ ಪ್ರಕಟವಾಗುವ ಮೊದಲೇ ಪತ್ರಿಕೆಯನ್ನು ಮುದ್ರಣಕ್ಕೆ ಸಿದ್ಧಪಡಿಸುವ ಸವಾಲನ್ನು ನಿರ್ವಹಿಸುವುದಕ್ಕೆ ಪತ್ರಿಕೆಯ ಸಂಪಾದಕರು ಪತ್ರಕರ್ತರ ಊಹೆಯ ಮೊರೆಹೊಕ್ಕರು. ಹಿಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ಸರಿಯಾಗಿ ಊಹಿಸಿದ್ದ ಹಿರಿಯ ವರದಿಗಾರ ಮತ್ತು ರಾಜಕೀಯ ವಿಶ್ಲೇಷಕ ಆರ್ಥರ್ ಸಿಯರ್ಸ್ ಹೆನ್ನಿಂಗ್ ಅವರ ಮಾತಿನಂತೆ ಟ್ರೂಮನ್ ಸೋಲನ್ನು ಘೋಷಿಸಲು ನಿರ್ಧರಿಸಲಾಯಿತು. ಆ ದಿನದ ಪತ್ರಿಕೆಯ ಮೊದಲ ಆವೃತ್ತಿ ‘Dewey Defeats Truman’ ಎಂಬ ಬೃಹದಾಕಾರದ ಶೀರ್ಷಿಕೆಯೊಂದಿಗೆ ಹೊರಬಂತು.

ಎನ್ಡಿಟಿವಿ ಜಾಲತಾಣಕ್ಕೆ ‘ಷಿಕಾಗೊ ಡೈಲಿ ಟ್ರಿಬ್ಯೂನ್’ಗೆ ಇದ್ದ ಯಾವ ಮಿತಿಗಳೂ ಇರಲಿಲ್ಲ. ಆದರೆ ಸುದ್ದಿ ಮಾಧ್ಯಮಗಳ ನಡುವಣ ಸ್ಪರ್ಧೆಯ ಒತ್ತಡವಿತ್ತು. ಸಿಂಧು ಗೆದ್ದ ಕ್ಷಣದಲ್ಲೇ ಸುದ್ದಿ ಪ್ರಕಟವಾಗಿಬಿಡಬೇಕೆಂಬ ಆತುರವಿತ್ತು. ಪರಿಣಾಮವಾಗಿ ‘ಸಿಂಧು ಚಿನ್ನ ಗೆದ್ದರು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.