ಭಾನುವಾರ, ಜೂನ್ 13, 2021
21 °C

‘ಚುನಾವಣೆ: ನೋಡಲ್ ಅಧಿಕಾರಿ ನೇಮಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಲೋಕಸಭಾ ಚುನಾವಣೆ­ಗಳ ಕಾರ್ಯ ವೀಕ್ಷಣೆಗಾಗಿ ವಿವಿಧ ಭಾಗಗಳ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ತಿಳಿಸಿದ್ದಾರೆ.ಮಾನವ ಸಂಪನ್ಮೂಲ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇ­ಶಕ ಶರಣಬಸವರಾಜ (9886­775415), ಮತಯಂತ್ರ ವ್ಯವಸ್ಥಾಪಕ ವಿಭಾಗಕ್ಕೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಬಸವ (9448565179), ಸಾರಿಗೆ ವ್ಯವಸ್ಥೆ ವಿಭಾಗಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ಧಲಿಂಗಯ್ಯ (98459­11­218),ತರಬೇತಿ ವ್ಯವಸ್ಥೆ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಟಿ ರೋಣಿ(9448024244), ಸಾಮಗ್ರಿ ನಿರ್ವಹಣೆ ವಿಭಾಗಕ್ಕೆ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್ ಗದ್ದನಕೇರಿ(9886­2­40148), ಮಾದರಿ ನೀತಿ ಸಂಹಿತೆ ಜಾರಿ ವಿಭಾಗ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾ­ಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ(94808­74000),ಚುನಾವಣಾ ವೆಚ್ಚಗಳ ನಿರ್ವಹಣೆ ವಿಭಾಗಕ್ಕೆ ಲೋಕೋಪ­ಯೋಗಿ ಇಲಾಖೆ ಎಂಜಿನಿಯರ್ ಕೆ.ವಿ ಶಂಕ್ರಪ್ಪ(9448­12495), ಚುನಾ­ವಣಾ ವೀಕ್ಷಕ ವಿಭಾಗ ಅಧಿಕಾರಿ­ಯಾಗಿ ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಆರ್ ಸಂದೀಪ್(94497­06163), ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ (94808­74001), ಮತಪತ್ರ ವಿಭಾಗಕ್ಕೆ ಯರಮರಸ್ ಡಯಟ್‌ ಸಂಸ್ಥೆಯ ಪ್ರಾಚಾರ್ಯ ಎನ್ ಕೆಂಚನಗೌಡ( 9448999378), ಮಾಧ್ಯಮ ವಿಭಾಗ ಅಧಿಕಾರಿಯಾಗಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ ಕನು­ಮಪ್ಪ(9480343592), ಕಂಪ್ಯೂಟರ್ ವಿಭಾಗ ಅಧಿಕಾರಿಯಾಗಿ ಯರಮರಸ್ ಸರ್ಕಾರಿ ಎಂಜಿನಿ­ಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವಿರೇಶ(944824­02763),ಸ್ವೀಪ್ ಕಮಿಟಿ ವಿಭಾಗ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ­ನಿರ್ದೇಶಕ ರಾಮಾಂಜ­ನೇಯ(9449­9350), ಸಹಾಯವಾಣಿ ಮತ್ತು ದೂರು ಸ್ವೀಕಾರ ವಿಭಾಗ ಅಧಿಕಾರಿ­ಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ(9482­192025), ಎಸ್‌ಎಂಎಸ್ ನಿರ್ವಹಣೆ ಮತ್ತು ಸಂಪರ್ಕ ಯೋಜನೆ ವಿಭಾಗಕ್ಕೆ ಬಿಎಸ್ಎನ್‌ಎಲ್ ಉಪ ವ್ಯವಸ್ಥಾಪಕ ಬಸವರಾಜ ವೈ.ಬಿ(9449851444) ಅವರನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.