ಗುರುವಾರ , ಮಾರ್ಚ್ 4, 2021
18 °C
ಪಂಚರಂಗಿ

‘ಜನರ ನೋಟ ಬದಲಾಗುತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜನರ ನೋಟ ಬದಲಾಗುತ್ತಿದೆ’

‘ಭಾರತದ ಸಮಾಜದಲ್ಲಿ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ’ ಎಂದು ಜನಪ್ರಿಯ ಗಾಯಕ ಸೋನು ನಿಗಮ್‌ ಅವರಿಗೆ ಅನಿಸಿದೆ.‘6 ಪ್ಯಾಕ್‌ ಬ್ಯಾಂಡ್‌’ ಎಂಬ ತೃತೀಯ ಲಿಂಗಿಗಳ ಸಂಗೀತ ತಂಡವೊಂದರ ಸಹಯೋಗದಲ್ಲಿ ಒಂದು ಹಾಡನ್ನೂ ಹಾಡಿರುವ ಸೋನು, ಆ ಹಾಡಿಗೆ ಜನರಿಂದ ಸಿಕ್ಕಿರುವ ಉತ್ತಮ ಸ್ಪಂದನದಿಂದ ಖುಷಿಕೊಂಡಿದ್ದಾರೆ.‘ಜನರು ತೃತೀಯ ಲಿಂಗಿಗಳ ಕುರಿತಾದ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಇದರರ್ಥ ಸಮಾಜ ಆ ಸಮುದಾಯವನ್ನು ಸ್ವೀಕರಿಸಲು ಸಿದ್ಧವಾಗಿದೆ. ನಾವು ನಡೆಸಿದ ಮೊದಲ ಪತ್ರಿಕಾಗೋಷ್ಠಿಯಿಂದ ಹಿಡಿದು ಇಂದಿನವರೆಗೂ ಯಾರೂ ನಾವು ಮಾಡುತ್ತಿರುವ ಕೆಲಸದ ಬಗ್ಗೆ ಮುಖ ಗಂಟಿಕ್ಕಿಲ್ಲ. ಎಲ್ಲರೂ ತೃತೀಯ ಲಿಂಗಿಗಳನ್ನು ಗೌರವಯುತವಾಗಿಯೇ ನೋಡುತ್ತಿದ್ದಾರೆ’ ಎಂದು ಸೋನು ನಿಗಮ್‌ ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.‘ಈಗ ಪರಿಸ್ಥಿತಿ ಬದಲಾಗಿದೆ. ತೃತೀಯ ಲಿಂಗಿಗಳ ಕುರಿತಾಗಿ ಉಪದೇಶ ಮಾಡುವುದು ಅಥವಾ ಧ್ವಜ ಹಿಡಿದುಕೊಂಡು ತಿರುಗುವುದರ ಬದಲಾಗಿ ಅವರೊಂದಿಗೆ ಸೇರಿಕೊಂಡು ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಅವರನ್ನು ನಮ್ಮ ವ್ಯವಹಾರದ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕಿದೆ. ಅದರಿಂದಲೇ ಅವರು ಪ್ರಗತಿ ಹೊಂದಲು ಸಾಧ್ಯವಿದೆ’ ಎಂಬುದು ಅವರ ಖಚಿತ ಅಭಿಪ್ರಾಯ.‘6 ಪ್ಯಾಕ್‌ ಬ್ಯಾಂಡ್‌’ ತನ್ನ ಮೊದಲ ಹಾಡು ‘ಹಮ್‌ ಹೈ ಹ್ಯಾಪಿ’ ಬಿಡುಗಡೆ ಮಾಡಿದಾಗ ಸೋನು ನಿಗಮ್‌ ಆ ತಂಡಕ್ಕೆ ಬೆಂಬಲ ನೀಡಿದ್ದರು. ಇದೀಗ ಅವರೇ ‘ಸಬ್‌ ರಬ್‌ ದೆ ಬಂದೇ’ ಎಂಬ ಹಾಡನ್ನು ಹಾಡಿದ್ದು, ತೃತೀಯ ಲಿಂಗಿ ಸಮುದಾಯ ಕುರಿತ ತಾರತಮ್ಯವನ್ನು ಬಿಂಬಿಸುವ ಗೀತೆ ಅದಾಗಿದೆ.

ಈ ಸಂಗೀತ ತಂಡವು ಆಶೀಶ್‌ ಪಾಟೀಲ್‌ ಮತ್ತು ಸಂಗೀತ ಸಂಯೋಜಕ ಶಮೀರ್‌ ಟಂಡನ್‌ ಅವರ ಕನಸಿನ ಕೂಸು. ಆರು ಜನ ತೃತಿಯ ಲಿಂಗಿಗಳನ್ನು ಸೇರಿಸಿಕೊಂಡು ಅವರು ಈ ಸಂಗೀತ ತಂಡವನ್ನು ಕಟ್ಟಿದ್ದಾರೆ.ಈ ತಂಡದ ಸದಸ್ಯರ ಪ್ರತಿಭೆಯನ್ನೂ ಸೋನು ಮುಕ್ತವಾಗಿ ಹೊಗಳಿದ್ದಾರೆ. ‘ಅವರೆಲ್ಲರೂ ತುಂಬ ಸತ್ವಶಾಲಿ ಪ್ರತಿಭೆಯನ್ನು ಹೊಂದಿದ್ದಾರೆ. ಅವರಿಗಿರುವ ವಿವೇಕ ಮತ್ತು ಔಚಿತ್ಯಪ್ರಜ್ಞೆಯೂ ಅಗಾಧವಾದದ್ದು’ ಎನ್ನುವುದು ಸೋನು ವಿಶ್ಲೇಷಣೆ.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.