ಇತಿ ಆಚಾರ್ಯ ಕನ್ನಡ ಚಿತ್ರರಂಗದ ಅಂಗಳದಲ್ಲಿ ಅರಳಿರುವ ಹೊಸ ಹೂವು. ಬಳಕುವ ನೀಳಕಾಯ ಹಾಗೂ ಆಕರ್ಷಕ ಮೈಮಾಟದ ಇತಿ ಕಳೆದ ವಾರ ಬಿಡುಗಡೆಯಾದ ‘ಡೀಲ್ರಾಜ್’ ಚಿತ್ರದ ನಾಯಕಿ. ಅಂದಹಾಗೆ, ಈ ಈಕೆ ರಾಜಸ್ತಾನ ಮೂಲದ ಚೆಲುವೆ.

ತಮ್ಮ ಬಾಲ್ಯವನ್ನು ಹುಟ್ಟೂರು ಜೈಪುರದಲ್ಲಿ ಕಳೆದಿರುವ ಇತಿ, ನಂತರ ಬೆಳೆದು ಓದಿದ್ದು ಚಂಡೀಗಢದಲ್ಲಿ. ಉದ್ಯೋಗದಲ್ಲಿದ್ದ ಅಪ್ಪನ ವರ್ಗಾವಣೆಯೇ ಇದಕ್ಕೆ ಕಾರಣ. ಈ ಅವಧಿಯಲ್ಲಿ ಮಾಡೆಲಿಂಗ್ ಮೋಹಕ್ಕೆ ಬಿದ್ದ ಅವರು, ಫ್ಯಾಷನ್ ಡಿಸೈನಿಂಗ್ ಕೋರ್ಸ್ಗಾಗಿ ಬೆಂಗಳೂರಿನತ್ತ ಮುಖ ಮಾಡಿದರು. ಕಾಲೇಜು ಜೊತೆಗೆ, ಫ್ಯಾಷನ್ ರ್ಯಾಂಪ್ನಲ್ಲಿ ಹೆಜ್ಜೆಯನ್ನೂ ಹಾಕತೊಡಗಿದರು.

ರಂಗಭೂಮಿಯಲ್ಲೂ ತೊಡಗಿಸಿಕೊಂಡ ಇತಿ, ಅಲ್ಲಿ ಬಣ್ಣ ಹಚ್ಚಿ ನಟನೆ ಕಲಿತರು. ಅಲ್ಲದೆ, ಕಥಕ್, ಜಾನಪದ ಹಾಗೂ ಫಿಲ್ಮಿ ನೃತ್ಯವನ್ನು ಸಹ ಕಲಿತು ಸಿನಿಮಾ ನಟನೆಗೆ ತಯಾರಿ ನಡೆಸಿದರು.

ಬೆಂಗಳೂರಿನ ಮೋಹ
ನಾಲ್ಕು ರಾಜ್ಯಗಳನ್ನು ಸುತ್ತಾಡಿ ಬಂದಿರುವ ಇತಿ ಅವರಿಗೆ ಬೆಂಗಳೂರಿನ ವಾತಾವರಣ ಬಲು ಇಷ್ಟ. ‘ಇಲ್ಲಿನ ಹವೆಯಷ್ಟೆ ಅಲ್ಲ. ಭಾಷೆಯೂ ಚೆನ್ನಾಗಿದೆ. ಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ತೊಡಗಿದಾಗಿನಿಂದ ಸೆಟ್ನಲ್ಲಿದ್ದವರ ಜತೆ ಮಾತನಾಡುತ್ತಲೇ ಮ್ಯಾನೇಜ್ ಮಾಡುವಷ್ಟು ಕನ್ನಡ ಕಲಿತಿದ್ದೇನೆ. ಇಲ್ಲಿನ ಇಡ್ಲಿ–ಸಾಂಬಾರ್ ನನಗೆ ತುಂಬಾ ಇಷ್ಟ’ ಎನ್ನುವ ಅವರಿಗೆ ಇಲ್ಲಿಯೇ ನೆಲೆಸಬೇಕು ಎಂಬ ಇರಾದೆಯೂ ಇದೆ.

ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ‘ತಿಥಿ’, ‘ಕರ್ವ’, ‘ಯು ಟರ್ನ್’ ಚಿತ್ರಗಳನ್ನು ನೋಡಿರುವ ಅವರು, ತಮಗೆ ಇಷ್ಟವಾದ ಚಿತ್ರಗಳ ನಿರ್ದೇಶಕರನ್ನು ಭೇಟಿ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅಂದಹಾಗೆ, ಕನ್ನಡದಲ್ಲಿ ಆರಂಭವಾಗಿರುವ ‘ಟ್ರೆಂಡಿ ಸಿನಿಮಾ’ ಶಕೆಯನ್ನು ಮೆಚ್ಚಿಕೊಳ್ಳುವ ಅವರು, ‘ಟ್ರೆಂಡಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡಿಕೊಳ್ಳುವುದಿಲ್ಲ’ ಎನ್ನುತ್ತಾರೆ.

‘ನನ್ನಿಷ್ಟದ ನಟ–ನಟಿಯರ ಪಟ್ಟಿ ದೊಡ್ಡದಿದೆ. ನಟನೆಯ ವಿಷಯದಲ್ಲಿ ನನಗೆ ಇವರೇ ಸ್ಫೂರ್ತಿ ಎಂದು ಒಬ್ಬರ ಹೆಸರನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ರಾಧಿಕಾ ಆಪ್ಟೆ, ಕಲ್ಕಿ ಕೊಚ್ಚಿನ್ ಅವರುಗಳಿಗೆ ಸಿಕ್ಕಂತಹ ವಿಭಿನ್ನ ಪಾತ್ರಗಳು ನನಗೂ ಸಿಗಬೇಕು ಎಂದು ಬಯಸುತ್ತೇನೆ’ ಎಂದು ಹೇಳುತ್ತಾರೆ.

ಬಿಂಕವಿಲ್ಲದ ನಟಿ
‘ಜನರಿಗೆ ಹತ್ತಿರವಾಗುವ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಪಾಲಿಸಿ’ ಎನ್ನುವ ಇತಿ, ಗ್ಲಾಮರಸ್ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲವಂತೆ.

‘ಕಥೆ ಉತ್ತಮವಾಗಿದ್ದರೆ ಎಂತಹ ಪಾತ್ರವನ್ನೂ ಒಪ್ಪಿಕೊಂಡು ಅಭಿನಯಿಸುತ್ತೇನೆ. ಕಿರುಚಿತ್ರಗಳ ಮೂಲಕ ಹೊಸ ಸಾಹಸಕ್ಕೆ ಯತ್ನಿಸುವ ಸಿನಿಮಾ ವಿದ್ಯಾರ್ಥಿಗಳು ಕರೆದರೂ ಯಾವುದೇ ಧಿಮಾಕು ತೋರದೆ ಹೋಗುತ್ತೇನೆ’ ಎಂದು ತಮ್ಮ ನಟನಾ ಬದ್ಧತೆಯನ್ನು ಪ್ರದರ್ಶಿಸುತ್ತಾರೆ.

ಬಿಡುವಾದಾಗ ವಿಶ್ವದ ಹಲವು ಭಾಷೆಗಳ ಚಿತ್ರಗಳನ್ನು ವೀಕ್ಷಿಸುವ ಇತಿ, ಅವುಗಳಿಂದ ತಮ್ಮ ನಟನೆಯನ್ನು ಸುಧಾರಿಸಿಕೊಳ್ಳಲು ಹಲವು ಟಿಪ್ಸ್ಗಳು ಸಿಗುತ್ತವೆ ಎನ್ನುತ್ತಾರೆ. ‘ಡ್ಯಾನ್ಸ್ ಮೈ ಫ್ಯಾಷನ್’ ಎನ್ನುವ ಅವರಿಗೆ ಸುತ್ತಾಟವೂ ಇಷ್ಟವಂತೆ.

ಲೇಜು ವಿದ್ಯಾಭ್ಯಾಸಕ್ಕಾಗಿ ಕರ್ನಾಟಕಕ್ಕೆ ಬಂದಾಗಿನಿಂದ ಸ್ನೇಹಿತರ ದಂಡು ಕಟ್ಟಕೊಂಡು ಹಲವು ಸ್ಥಳಗಳಿಗೆ ಸುತ್ತಿರುವ ಅವರಿಗೆ ಸಕಲೇಶಪುರ ಮತ್ತು ಮಡಿಕೇರಿ ನೆಚ್ಚಿನ ಸ್ಥಳಗಳು.

ಚತುರ್ಭಾಷೆಯಲ್ಲಿ ನಟನೆ
ರೂಪದರ್ಶಿಯಾಗಿ ಸ್ಟಿಲ್ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಿದ್ದ ಇತಿ, ಮೂರು ವರ್ಷಗಳ ಹಿಂದೆ ಮಲೆಯಾಳಂನಲ್ಲಿ ತೆರೆಕಂಡ ‘ಕೇರಳ ಟುಡೆ’ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣ ಆರಂಭಿಸಿದರು.

ಮಕ್ಬುಲ್ ಸಲ್ಮಾನ್ ಜೊತೆಗಿನ ನಟನೆಯಲ್ಲಿ ಗಮನ ಸೆಳೆದಿದ್ದ ಅವರಿಗೆ, ಅದಾದ ಬಳಿಕ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶವೂ ಒಲಿದು ಬಂತು.

ಮಲೆಯಾಳಂನಿಂದ ಇತಿ ಸಿನಿಮಾ ಪಯಣ ತಿರುವು ಪಡೆದದ್ದು ಕನ್ನಡ ಚಿತ್ರರಂಗದತ್ತ. ‘ಛತ್ರಪತಿ’ ಅವರ ಅಭಿನಯದ ಮೊದಲ ಕನ್ನಡ ಸಿನಿಮಾ. ನಂತರ ಕಿಚ್ಚ ಪ್ರೊಡಕ್ಷನ್ನ ‘ಗೆಸ್ಟ್ಹೌಸ್’ ಚಿತ್ರದಲ್ಲಿ ಕಾಣಿಸಿಕೊಂಡ ಅವರು, ಸಾಧುಕೋಕಿಲಾ ಅವರ ‘ಪಂಗನಾಮ’ದ ನಾಯಕಿಯಾಗಿಯೂ ಮಿಂಚಿದರು.

ಗ್ಲ್ಯಾಮರ್–ಮಸಾಲೆ ಮಿಶ್ರಣವಾದ ಆ ಪಾತ್ರ ಅವರಿಗೆ ‘ಮಸಾಲೆ ಡಾಲ್’ ಎಂಬ ಹೆಸರು ತಂದುಕೊಟ್ಟಿತು. ಸದ್ಯ ಇತಿ ಅಭಿನಯದ ‘ಬದ್ಮಾಶ್’, ‘ಸಾಯಿಬಾಬಾ’ ಹಾಗೂ ‘ಪೋರ’ ಚಿತ್ರಗಳು ತೆರೆ ಕಾಣಬೇಕಿದೆ.

ಈ ಮಧ್ಯೆ ಮುಂಬೈಗೆ ಪ್ರಯಾಣ ಬೆಳೆಸಿದ ಇತಿ, ‘ಸತ್ಯವತಿ’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ‘ಅಥರ್ವ’ ಎನ್ನುವ ತೆರೆಗೆ ಸಿದ್ಧವಾಗಿರುವ ತಮಿಳು ಚಿತ್ರದಲ್ಲೂ ನಟಿಸುವ ಮೂಲಕ ಅವರೀಗ ಚತುರ್ಭಾಷಾ ತಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.