ಸೋಮವಾರ, ಮಾರ್ಚ್ 8, 2021
19 °C
ಕಾಪು ಹೋಬಳಿ ವ್ಯಾಪ್ತಿಯಲ್ಲಿ ಐಟಿಐ ಕಾಲೇಜು

‘ತಾಂತ್ರಿಕ ಶಿಕ್ಷಣದಿಂದ ಬದುಕು ಹಸನು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಾಂತ್ರಿಕ ಶಿಕ್ಷಣದಿಂದ ಬದುಕು ಹಸನು’

ಉಡುಪಿ: ಮಕ್ಕಳು ಭವಿಷ್ಯ ರೂಪಿಸಿ ಕೊಳ್ಳಲು ಸಹಕಾರಿಯಾಗುವ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಕಾಪು ಹೋಬಳಿ ವ್ಯಾಪ್ತಿಯಲ್ಲಿ ಮೂರು ಐಟಿಐ ಕಾಲೇಜು ಆರಂಭಿಸಲಾಗುವುದು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.ಉದ್ಯಾವರದ ಬೋಳಾರಗುಡ್ಡೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿವಾಗಿ ಮುಂದಿದೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಬೆಳ ಪುವಿನಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಈಗಾಗಲೇ ₹5 ಕೋಟಿ ಅನುದಾನ ಬಿಡುಗಡೆ ಯಾಗಿದೆ ಎಂದರು.ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂಬ ಭ್ರಮೆ ಪೋಷಕರಲ್ಲಿದೆ. ಇದರಿಂದ ಅವರು ಹೊರಬರಬೇಕು. ಸರ್ಕಾರಿ ಶಾಲೆ ಗಳಲ್ಲಿಯೂ ಈಗ ಎಲ್ಲ ರೀತಿ ಸೌಲಭ್ಯ ಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತು ವಾರಿ ಸಮಿತಿ ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಚಿತ ಸಮವಸ್ತ್ರ, ಶೂ ಮತ್ತು ಗುರುತುಚೀಟಿ ವಿತರಿಸಲಾಯಿತು. ಶಾಲಾ ಕೈಪಿಡಿಯ ದಾನಿಗಳಾದ ಗ್ರಾಮ ಪಂಚಾ ಯಿತಿ ಸದಸ್ಯ ಕಿರಣ್ ಕುಮಾರ್, ತಿಲಕ ರಾಜ ಸಾಲಿಯಾನ್‌ ಮತ್ತು ಹೆನ್ರಿ ಡಿಸೋಜ ಅವರನ್ನು ಅಭಿನಂದಿಸ ಲಾಯಿತು. ಪಿಯುಸಿ ಮತ್ತು ಎಸ್ಎಸ್ ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿವಿಯನ್ ಡಿಸೋಜ ಮತ್ತು ದಿವ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯಶಿ ಕ್ಷಕಿಯಾಗಿ ಸೇವೆಸಲ್ಲಿಸಿ ಹನುಮಂತ ನಗರದ ಶಾಲೆಗೆ ವರ್ಗಾವಣೆಗೊಂಡಿದ್ದ ಶಿಕ್ಷಕಿ ದಯಾವತಿ ಅವರನ್ನು ಅಭಿ ನಂದಿಸಲಾಯಿತು. ಶಿಕ್ಷಕಿ ಜಯಾ ತಂತ್ರಿ ಸನ್ಮಾನಿತರನ್ನು ಸಭೆಗೆ  ಪರಿಚಯಿಸಿದರು. ಪಿ.ಯು.ಸಿ.ವಿಭಾಗದ  ಮಧ್ಯಾಹ್ನದ ಬಿಸಿ ಯೂಟ ಪ್ರಾರಂಭಿಸಲು ಉದ್ಯಾವರ ಫ್ರೆಂಡ್ಸ್ ಕ್ಲಬ್‌ನವರು ₹20 ಸಾವಿರ ದೇಣಿಗೆಯನ್ನು ಘೋಷಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್‌, ತಾಲ್ಲೂಕು ಪಂಚಾ ಯಿತಿ ಸದಸ್ಯೆ ರಜನಿ ಅಂಚನ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಿಯಾಜ್‌ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿ ಕಾರದ ಸದಸ್ಯ ಗಿರೀಶ್ ಕುಮಾರ್, ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ವಾಮನ ಬಂಗೇರ, ಪೋಷಕ ಹಾಗೂ ಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.ಪ್ರಾಂಶುಪಾಲ ಮಹೇಂದ್ರ ಎನ್. ಶರ್ಮ ಸ್ವಾಗತಿಸಿದರು. ಉಪನ್ಯಾಸಕ ಎಸ್. ಕಿಶೋರ್ ಕುಮಾರ್ ನಿರೂಪಿಸಿದರು.  ಮುಖ್ಯ ಶಿಕ್ಷಕಿ ಮೂಕಾಂಬೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.