ಸೋಮವಾರ, ಮಾರ್ಚ್ 1, 2021
20 °C
ಕಾಮಗಾರಿ ವೀಕ್ಷಿಸಿದ ಸಚಿವ ರೋಷನ್‌ ಬೇಗ್‌

‘ತುಂಬೆ ಅಣೆಕಟ್ಟೆ ನಿರ್ಮಾಣ ಪೂರ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತುಂಬೆ ಅಣೆಕಟ್ಟೆ ನಿರ್ಮಾಣ ಪೂರ್ಣ’

ಮಂಗಳೂರು: ನಗರಕ್ಕೆ ನೀರು ಪೂರೈ ಸುವ ತುಂಬೆ ಕಿಂಡಿ ಅಣೆಕಟ್ಟೆಯ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯು ತ್‌ ಸಂಪರ್ಕ ಹಾಗೂ ಬಣ್ಣ ಬಳಿಯುವ ಕಾಮಗಾರಿ ಮಾತ್ರ ಬಾಕಿ ಇದೆ. ಮಳೆ ಗಾಲದ ನಂತರ ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ ಬೇಗ್‌ ಹೇಳಿದರು.ಗುರುವಾರ ತುಂಬೆ ಅಣೆಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾ ಡಿದರು. ಮಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರಿಗಾಗಿ ಲಕ್ಯಾ ಜಲಾಶ ಯವನ್ನು ಅವಲಂಬಿಸಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿ ಗಾಗಿ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು, ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಲಕ್ಯಾ ಜಲಾಶಯದ ನೀರನ್ನು ಸುರ ತ್ಕಲ್ ಭಾಗಕ್ಕೆ ಪೂರೈಕೆ ಮಾಡಲಾಗು ತ್ತಿದೆ. ಇದರಿಂದ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.ಪೌರ ಕಾರ್ಮಿಕರಿಗಾಗಿ ರಾಜೀವ್‌ ಗಾಂಧಿ ವಸತಿ ನಿಗಮದಿಂದ ನಗರದ ಕುಲಶೇಖರದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಅಂ ದಾಜು ವೆಚ್ಚ, ಕ್ರಿಯಾ ಯೋಜನೆ ಸಿದ್ಧಪ ಡಿಸಲಾಗಿದ್ದು, ಮೂರು ಮಹಡಿಯ ಕಟ್ಟಡಗಳ ನಿರ್ಮಾಣ ಮಾಡಲಾಗು ವುದು ಎಂದು ತಿಳಿಸಿದರು.ಎಡಿಬಿ ಎರಡನೇ ಹಂತದ ಯೋಜ ನೆಯಡಿ ನಿರಂತರ ನೀರಿಗಾಗಿ ಮಂಗ ಳೂರು ನಗರಕ್ಕೆ ಈಗಾಗಲೇ ₹160 ಕೋಟಿ ಮಂಜೂರು ಮಾಡಲಾಗಿದೆ. ಒಳಚರಂಡಿ ಯೋಜನೆಗೂ ₹120 ಕೋಟಿ ನೀಡಲಾಗಿದೆ. ಅಟಲ್ ಮಿಷನ್‌ ಯೋಜನೆಯಡಿ ₹160 ಕೋಟಿ ಅನು ದಾನ ಮಂಗಳೂರಿಗೆ ಮಂಜೂರಾಗಿದ್ದು, ಇದರಲ್ಲಿ ₹154 ಕೋಟಿಯನ್ನು ಒಳಚ ರಂಡಿ ಯೋಜನೆಗೆ ಬಳಕೆ ಮಾಡಲಾ ಗುವುದು. ಅಲ್ಲದೇ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ ₹4 ಕೋಟಿ ನೀಡಲಾಗಿದ್ದು, ಉದ್ಯಾನಗಳ ಅಭಿವೃದ್ಧಿಗೆ ₹2ಕೋಟಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.ವಸತಿಗೃಹ ನಿರ್ಮಾಣಕ್ಕೆ ಶಿಲಾನ್ಯಾಸ: ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮಹಾಕಾಳಿಪಡ್ಪು (₹2. 40 ಕೋಟಿ), ಬಿ.ವಿ. ರೋಡ್‌ (₹1.80 ಕೋಟಿ), ಗಣಪತಿ ಹೈಸ್ಕೂಲ್‌ ರೋಡ್‌ (₹1.50 ಕೋಟಿ)ಗಳಲ್ಲಿ ನಿರ್ಮಿಸಲಾಗು ತ್ತಿರುವ ವಸತಿ ಗೃಹಗಳಿಗೆ ಸಚಿವ ರೋಷನ್‌ ಬೇಗ್‌ ಶಿಲಾನ್ಯಾಸ ನೆರವೇರಿಸಿದರು.ಮಹಾಕಾಳಿಪಡ್ಪು ಬಳಿ 8 ಮಹಡಿಯ ಕಟ್ಟಡ ನಿರ್ಮಿಸಲಾಗು ತ್ತಿದ್ದು, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿ ಸಿರುವ 32 ಕಾಯಂ ಪೌರಕಾರ್ಮಿಕರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗಿದೆ. 400 ಚದರ ಅಡಿ ವಿಸ್ತಾರದ ಮನೆ ಇದಾಗಿದ್ದು, ವೆಚ್ಚದ ಶೇ 20 (₹1.5 ಲಕ್ಷ) ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗಿದೆ.ಶಾಸಕರಾದ ಜೆ.ಆರ್‌. ಲೋಬೊ, ಬಿ.ಎ. ಮೊಯಿದ್ದೀನ್‌ ಬಾವ, ಮೇಯರ್‌ ಹರಿನಾಥ, ಉಪಮೇಯರ್‌ ಸುಮಿತ್ರ ಕೆ, ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂ ಗೇರ, ಪಾಲಿಕೆ ಸದಸ್ಯರಾದ ಎಂ. ಶಶಿ ಧರ್ ಹೆಗ್ಡೆ, ಶೈಲಜಾ, ಆಯುಕ್ತ ಮುಹ ಮ್ಮದ್‌ ನಜೀರ್‌  ಹಾಜರಿದ್ದರು.ಪ್ರತಿಭಟನೆಯ ಬಿಸಿ

ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಕಾಯಂ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪೌರ ಕಾರ್ಮಿಕರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.

ಮಹಾಕಾಳಿಪಡ್ಪು ಬಳಿ ಗೃಹಭಾಗ್ಯ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಸಚಿವ ರೋಷನ್‌ ಬೇಗ್‌ ಅವರಿಗೆ ಮನವಿ ಸಲ್ಲಿಸಿದ ಕುಟುಂಬದ ಸದಸ್ಯರು, ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಬೇಗ್‌, ಆದಷ್ಟು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.