ಕಡೂರು: ‘ಇತಿಹಾಸವನ್ನು ತಿಳಿಯ ದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಡಾ.ಅಂಬೇಡ್ಕರ್ ಅವರ ಪ್ರಸಿದ್ಧ ನಾಣ್ಣುಡಿಯನ್ನು ದಲಿತರು ಸದಾ ನೆನಪಿನಲ್ಲಿಡಬೇಕಾದ ಅಗತ್ಯವಿದೆ’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್.ವೆಂಕಟೇಶ್ ತಿಳಿಸಿದರು.

ಕಡೂರು ತಾಲ್ಲೂಕಿನ ಮುತ್ತಾಣಿ ಗೆರೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮಶಾಖೆಯನ್ನು ಸೋಮ ವಾರ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರು ತಮ್ಮ ಇತಿಹಾಸವನ್ನು ಮೊದಲು ತಿಳಿಯಬೇಕು. ಇತಿಹಾಸದ ತಪ್ಪುಗಳನ್ನು ಗುರುತಿಸಿ ಅದರಿಂದ ಪಾಠ ಕಲಿಯಬೇಕು. ಹಿಂದಿನಿಂದಲೂ ಶೋಷ ಣೆಗೊಳಗಾದ ದಲಿತರಿಗೆ ಮೀಸಲಾಗಿ ರುವ ಸರ್ಕಾರದ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು. ಸಂವಿಧಾನದತ್ತವಾದ ಮೀಸಲಾತಿ ಪ್ರಕಾರ ರಾಜಕೀಯ ಸ್ಥಾನ ಪಡೆದಾಗ ಅಭಿವೃದ್ಧಿ ಸಾದ್ಯವಾದೀತು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಸಮಾಜ ಕಲ್ಯಾಣಾ ಧಿಕಾರಿ ರುದ್ರಪ್ಪ ಮಾತನಾಡಿ, ವೇದಗಳ ಕಾಲದಿಂದಲೂ ತುಳಿತಕ್ಕೊಳಗಾಗಿರುವ ದಲಿತ ಜನಾಂಗ ಜಾಗೃತಗೊಳ್ಳಬೇಕು. ಕ್ರಾಂತಿಯೋಗಿ ಬಸವಣ್ಣ, ಬಾ ಫುಲೆ, ಡಾ.ಬಿ.ಆರ್.ಅಂಬೇಡ್ಕರ್, ಪ್ರೊ. ಕೃಷ್ಣಪ್ಪ ಮುಂತಾದವರು ಹೋರಾಟ ಗಳ ಮೂಲಕ ದಲಿತರ ಅಭಿವೃದ್ಧಿಗೆ ಶ್ರಮಿಸಿದರು. ಮುಂದೆಯೂ ಇಂತಹ ಜಾಗೃತಿ ಮೂಡಿದರೆ ಜಾತಿ ಪದ್ದತಿ ನಿರ್ಮೂಲನೆಯಾಗುತ್ತದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಮತ್ತು ಪ್ರೊ.ಕೃಷ್ಣಪ್ಪ ಅವರ ಸಾಧನೆಯ ಕಿರುನೋಟವನ್ನು ನೀಡಿದ ಯಗಟಿ ಹೋಬಳಿ ಸಂಚಾಲಕ ಕುಂಕಾನಾಡು ಮಂಜುನಾಥ್, ಅಂಬೇಡ್ಕರ್ ಅವರನ್ನು ಬೌದ್ಧ ಸನ್ಯಾಸಿಯೊಬ್ಬರು ನವಬುದ್ಧ ಎಂದು ಕರೆದಿದ್ದಾರೆ. ಭಾರತಕ್ಕೆ ಬುದ್ಧ ನಂತೆಯೇ ಬೆಳಕು ನೀಡಿದ ಮಹಾನ್ ಚೇತನ ಅಂಬೇಡ್ಕರ್ ಎಂದರು.

ದಸಂಸ ಮುಖಂಡ ಶೂದ್ರ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಮೇಲ್ಜಾತಿಯವರು ದಲಿತ ಸಮುದಾಯವನ್ನು ಪ್ರೀತಿ ವಿಶ್ವಾಸದಿಂದ ಮತ್ತು ಸಮಾನತೆಯಿಂದ ನೋಡಬೇಕು. ಅಗ ಸಮನ್ವಯದ ಜೀವನ ಸಾಧ್ಯ. ಭಗವದ್ಗೀತೆಯಲ್ಲಿ ದಲಿತ ವಿರೋಧಿ ಅಂಶಗಳಿವೆ ಎಂಬ ಪ್ರೊ.ಭಗವಾನ್ ಅವರ ಹೇಳಿಕೆಯನ್ನು ಸಮರ್ಥಿಸಿದರು. ನೂತನ ಗ್ರಾಮ ಶಾಖೆಯು ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಶಶಿಕಲಾ, ಜಿಲ್ಲಾ ಸದಸ್ಯ ರಾದ ಪಿ.ಜಿ.ಸಗನಪ್ಪ, ಆರ್. ರಾಮ ಸ್ವಾಮಿ, ಕೆ.ಟಿ.ಸುರೇಶ್, ಗೌರಮ್ಮ, ಎಂ.ಮಂಜು, ಎಂ.ಮಧು, ಸಂತೋಷ್, ಶಿವರಾಜ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.