ಗದಗ: ಭಾರತೀಯ ಪ್ರಾಚೀನ ಕ್ರೀಡೆಗಳಾದ ಚಿನ್ನಿದಾಂಡು, ಕೋಲಾಟ, ಪಗಡೆ ಮೊದಲಾದ ಕ್ರೀಡೆಗಳು ನಶಿಸುತ್ತಿರುವಾಗ ಇಂತಹ ಪಗಡೆ ಸ್ಪರ್ಧೆಯನ್ನು ಏರ್ಪಡಿಸಿರುವುದು ಸ್ವಾಗತಾರ್ಹ. ಈ ಪ್ರಾಚೀನ ಕ್ರೀಡೆಗಳು ಬೆಳೆಯಲು ಸರಕಾರ, ಸಮುದಾಯದ ಪ್ರೋತ್ಸಾಹ ನೀಡುವುದು ಅವಶ್ಯ ಎಂದು ಜಂಗಣ್ಣವರ ಹೇಳಿದರು.

ಬೆಟಗೇರಿಯ ಉಸಗಿನಗಟ್ಟಿ ಓಣಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಪಗಡೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.

ಮಾಧವ ಗಣಾಚಾರಿ ಮಾತನಾಡಿ, ಪಗಡೆ ಅಲ್ಲದೇ ಕಬಡ್ಡಿ, ಚೌಕಾಬಾರ, ಚನ್ನೆಮನಿ, ಚದುರಂಗ ಮೊದಲಾದ ಆಟಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ ಕಾಪಾಡುವುದು ಅವಶ್ಯ ಎಂದು ಹೇಳಿದರು. ನಾಗರಾಜ ವನ್ನಾಲ, ಮಂಜುನಾಥ ಕಟ್ಟಿಮನಿ, ನಾಗರಾಜ ಮೇರವಾಡೆ, ವಿಶಾಲ ಶಿದ್ಲಿಂಗ, ಅರುಣಕುಮಾರ ಹೊಸಮನಿ, ಅನಂತರಾವ ಸುಲಾಖೆ, ಶೇಖಪ್ಪ ಮಾನೇದ, ಮಲ್ಲೇಶಪ್ಪ ಉಪಾಸಣ್ಣವರ ಹಾಜರಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಲಾಕರ ದಾನ ನೀಡಿದ ಮಹದೇವಪ್ಪ ಪಲ್ಲೇದ ಅವರನ್ನು ಸನ್ಮಾನಿಸಲಾಯಿತು.

ಪಗಡೆ ಸ್ಪರ್ಧೆಯಲ್ಲಿ ಬೆಟಗೇರಿ ಕನ್ಯಾಳ ಅಗಸಿಯ ಡೊಳ್ಳಿಕಟ್ಟಿ ಬಸವೇಶ್ವರ ಪಗಡೆ ತಂಡ (ಪ್ರಥಮ) ಹಾಗೂ ` 15,001 ನಗದು ಬಹುಮಾನ. ಧಾರವಾಡ ಜಿಲ್ಲೆಯ ಕರಡಿಗುಡ್ಡದ ಬಸವೇಶ್ವರ ಪಗಡೆ ತಂಡ (ದ್ವಿತೀಯ) ಹಾಗೂ ` 10,001 ನಗದು ಬಹುಮಾನ . ಗದುಗಿನ ಈಶ್ವರ ಅಲ್ಲಾ ಪಗಡೆ ತಂಡ (ತೃತೀಯ) ಹಾಗೂ ` 5001 ನಗದು ಬಹುಮಾನ ಪಡೆಯಿತು.

ಸ್ಪರ್ಧೆಯಲ್ಲಿ ಚಿಕ್ಕನರಗುಂದ, ರೋಣ, ಕರಡಿಗುಡ್ಡ, ಯಳವತ್ತಿ, ಮಾಸಿನಕಟ್ಟಿ, ಗುರಗುಳ್ಳಿ, ನಾಗಶೆಟ್ಟಿಕೊಪ್ಪ, ಹುಬ್ಬಳ್ಳಿ, ಡೋಣಿ, ಹುಯಿಲಗೋಳ ಸೇರಿದಂತೆ ಒಟ್ಟು 32 ತಂಡಗಳು ಭಾಗವಹಿಸಿದ್ದವು. ನಾಯ್ಕರ ಪ್ರಾರ್ಥಿಸಿದರು. ಕೆ.ಬಿ. ಹೆಳವಿ ಸ್ವಾಗತಿಸಿದರು. ಎಸ್.ಬಿ.ಹೋಳಿ ಪ್ರಾಸ್ತಾವಿಕ ಮಾತನಾಡಿದರು. ಮಲಕಾಜಪ್ಪ ಹೋಳಿ ನಿರೂಪಿಸಿದರು. ಅಂದಪ್ಪ ಮುಳ್ಳಾಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.