ಕುಷ್ಟಗಿ: ರೈತರು ಮತ್ತು ಭೂ ಮಾಲೀಕರ ತಕರಾರಿನಿಂದ ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ ಕಾಮಗಾರಿ ಕುಂಠಿಗೊಂಡಿರುವುದು ಕಂಡುಬಂದಿದೆ.

2013–14ನೇ ಆರ್ಥಿಕ ವರ್ಷದಲ್ಲಿ ₨ 10.70 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯ 30 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾರ್ಗಸೂಚಿಯಂತೆ ಸದರಿ ರಸ್ತೆಗಳ ಗುಣಮಟ್ಟ ಕಾಪಾಡಲಾಗುತ್ತಿದೆ.

ಅದರಂತೆ ಈ ತಾಲ್ಲೂಕಿನ ಸಿಂಧನೂರು ನರಗುಂದ (ಎಸ್.ಎನ್) ರಾಜ್ಯ ಹೆದ್ದಾರಿಯಿಂದ ಚಿಕ್ಕನಂದಿಹಾಳ ಮತ್ತು ಕನಕೊಪ್ಪ ಹಾಗೂ ತಳುವಗೇರಿ–ವಣಗೇರಿ ಈ 3 ರಸ್ತೆಗಳ ಕೆಲಸ ಕೈಗೆತ್ತಿಕೊಂಡಿದ್ದು ಅಲ್ಲಲ್ಲಿ ರೈತರ ಅಸಹಕಾರದಿಂದಾಗಿ ಕೆಲಸದ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕೋಪಯೋಗಿ ಇಲಾಖೆಗೆ ಹೊರತುಪಡಿಸಿದ ಜಿಲ್ಲಾ ಮಟ್ಟದ ರಸ್ತೆಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೇ ಬೇರೆ ಬೇರೆ ಯೋಜನೆಗಳಲ್ಲಿ ನಿರ್ಮಾಣಗೊಂಡಿರುವ ಹಳೆಯ ರಸ್ತೆಗಳನ್ನೇ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಸದರಿ ರಸ್ತೆಗಳು ರೈತರ ಜಮೀನಿನಲ್ಲಿಯೇ ಬರುವುದರಿಂದ ಈಚಿನ ದಿನಗಳಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸುತ್ತಿರುವ ರೈತರು ಕೆಲಸ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ.

ಕೆಲ ಪ್ರಕರಣಗಳಲ್ಲಿ ತಕರಾರು ತೆಗೆದ ರೈತರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಭೂ ಒಡೆತನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ರೈತರ ಹೆಸರುಗಳಲ್ಲಿಯೇ ಇದೆ, ರಸ್ತೆಗೆ ಬಳಸಿಕೊಂಡಿರುವ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟಿಲ್ಲ. ಹಾಗಾಗಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ರೈತರು, ಗ್ರಾಮಸ್ಥರ ಸಹಕಾರ ಇರುವಕಡೆ ಮಾತ್ರ ಕೆಲಸ ನಡೆಸಿ ಇಲ್ಲದಿದ್ದರೆ ಅದರ ಉಸಾಬರಿಯೇ ಬೇಡ ಎಂದು ಮೇಲಧಿಕಾರಿಗಳು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾಗಿ ಅಡೆತಡೆ ಇರದ ಕಡೆಗಳಲ್ಲಿ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಕೆಲವೆಡೆ ರೈತರ ಕಿರಿಕಿರಿಯಿಂದ ಬೇಸರವಾಗಿದೆ, ಜನರ ಸಹಕಾರ ದೊರೆಯದ ಕಾರಣ ಎಷ್ಟೋ ಕಡೆ ರಸ್ತೆಕಿರಿದಾಗಿದೆ ಎಂದೆ ಅಧಿಕಾರಿಯೊಬ್ಬರು ವಿವರಿಸಿದರು.

ಈ ಕುರಿತು ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಂಜಿಎಸ್ವೈ ಕೊಪ್ಪಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಾಲಚಂದ್ರಯ್ಯ, ಕೆಲವು ಕಡೆ ಜನರ ಮನ ಒಲಿಸಿ ಕೆಲಸ ಪೂರ್ಣಗೊಳಿಸಿದ್ದೇವೆ, ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಮತ್ತು ಚಿಕ್ಕನಂದಿಹಾಳ ಬಳಿಯ 293 ಮೀಟರ್ ಕೆಲಸ ಬಾಕಿ ಉಳಿದಿದೆ. ಕೈಗೆತ್ತಿಕೊಂಡಿರುವ ಎಲ್ಲ ರಸ್ತೆ ಕಾಮಗಾರಿ ಬರುವ ಮೇ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.

ಪಿಎಂಜಿಎಸ್ವೈನಲ್ಲಿ 2011–12ರಲ್ಲಿ ಕೈಗೆತ್ತಿಕೊಂಡಿದ್ದ ಜಿ.ಬೆಂಚಮಟ್ಟಿ–ತಳುವಗೇರಿ ರಸ್ತೆಯಲ್ಲಿ ಕೆಲಸ ಬಾಕಿ ಉಳಿದಿದ್ದು ರೈತರ ತಕರಾರಿನಿಂದಾಗಿ ಅದನ್ನು ಕೈಬಿಟ್ಟಿರುವುದಾಗಿ.

ಗುಣಮಟ್ಟದ ರಸ್ತೆಗಳು; ಸಿದ್ದಪ್ಪ ನಿರ್ವಾನಿ
ತಾಲ್ಲೂಕಿನಲ್ಲಿ ನಡೆಯುತ್ತಿರುವ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಕಾಮಗಾರಿಗಳು ಗುಣಮಟ್ಟವನ್ನು ಜಿಲ್ಲಾ ಕ್ವಾಲಿಟಿ ಮಾನಿಟರ್ (ಡಿ.ಕ್ಯೂ.ಎಂ) ಸಿದ್ದಪ್ಪ ನಿರ್ವಾನಿ ಭಾನುವಾರ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ರಸ್ತೆಗಳ ಗುಣಮಟ್ಟ ಪರೀಕ್ಷೆ ಆಯಾ ಹಂತಗಳಿಗೆ ಅನುಗುಣವಾಗಿ ಐದು ಪ್ರತ್ಯೇಕ ತಜ್ಞರ ತಂಡಗಳಿಂದ ನಡೆಯುತ್ತದೆ. ಅಲ್ಲದೇ ಕೆಲಸ ಮುಗಿದ 5 ವರ್ಷಗಳವರೆಗಿನ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರಿಗೆ ಸೇರಿರುತ್ತದೆ. ಹಾಗಾಗಿ ಗುಣಮಟ್ಟದಲ್ಲಿ ಲೋಪಕಾಣಿಸಿಕೊಂಡಿಲ್ಲ. ಗುಣಮಟ್ಟದ ವಿಷಯದಲ್ಲಿ ಹೊಂದಾಣಿಕೆ ಮಾತೇ ಇಲ್ಲ ಎಂದರು. ಎ.ಇ.ಇ ಬಾಲಚಂದ್ರಯ್ಯ, ಎಂಜಿನಿಯರ್ಗಳಾದ ವೀರಣ್ಣ, ಕೃಷ್ಣಮೂರ್ತಿ, ಗುತ್ತಿಗೆದಾರ ಡಿ.ಎಸ್.ಕಂದಕೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.