‘ಕುಚ್ ಕುಚ್ ಹೋತಾ ಹೈ’, ‘ಕಲ್ ಹೋ ನ ಹೋ’ ಮುಂತಾದ ರೊಮ್ಯಾಂಟಿಕ್ ಸಿನಿಮಾಗಳನ್ನು ನೀಡಿರುವ ಕರಣ್ ಜೋಹರ್, ಇದೀಗ ಪ್ರೀತಿಭರಿತ ಸ್ಕ್ರಿಪ್ಟ್ ಬರೆಯುವ ಮುಗ್ಧತೆಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದೂ ಅಲ್ಲದೆ ಪ್ರೇಮ ಪ್ರಣಯದ ಸಿನಿಮಾಗಳಲ್ಲಿ ಅವರಿಗೆ ಆಸಕ್ತಿಯೂ ಕಡಿಮೆಯಾಗುತ್ತಿದೆಯಂತೆ.

‘ಹಸೀ ತೋ ಫಸಿ’ ಎಂಬ ನೂತನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಕರಣ್ ‘ಪ್ರೇಮಕಥೆ ರಚಿಸಲು ಬೇಕಾದ ಸೊಗಸುಗಾರಿಕೆಯನ್ನು ನಾನು ಕಳೆದುಕೊಂಡಿದ್ದೇನೆ. ಕುಚ್ ಕುಚ್ ಹೋತಾ ಹೈ ಹಾಗೂ ಕಲ್ ಹೋ ನ ಹೋ ಸಿನಿಮಾ ಕಥೆ ಬರೆಯುವಾಗಿನ ಮುಗ್ಧತೆ ನನಗೀಗಿಲ್ಲ’ ಎಂದು ನೂತನ ಸಿನಿಮಾದ ಟ್ರೇಲರ್ ಅನಾವರಣ ಮಾಡುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಹೊಸದಾಗಿ ತೆರೆಕಾಣಲಿರುವ ‘ಹಸೀ ತೋ ಫಸಿ’ ಸಿನಿಮಾ ಒಂದು ಹಾಸ್ಯಭರಿತ ಪ್ರೇಮಕಥಾನಕವಾಗಿದ್ದು, ಅದನ್ನು ಜೋಹರ್ ಅವರ ಧರ್ಮ ಪ್ರೊಡಕ್ಷನ್ ಹಾಗೂ ಅನುರಾಗ್ ಕಶ್ಯಪ್ ಅವರ ಫಾಂತೋಮ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ವಿನಿಲ್ ಮ್ಯಾಥ್ಯೂ ಅವರ ನಿರ್ದೇಶನವಿದೆ. ‘ಸ್ಕ್ರಿಪ್ಟ್ ಓದುತ್ತದ್ದಂತೆ ಇಷ್ಟವಾಯಿತು. ಆದರೆ ಈ ಸಿನಿಮಾವನ್ನು ನಾನು ನಿರ್ದೇಶಿಸಬೇಕು ಎನಿಸಲೇ ಇಲ್ಲ.

ನಿರ್ದೇಶಕ ಮ್ಯಾಥ್ಯೂ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೇಕ ನಿರ್ಮಾಪಕರು ಸೇರಿ ಸಿನಿಮಾ ಮಾಡುವುದು ಭಾರತಕ್ಕೆ ಹೊಸದಿರಬಹುದು. ಆದರೆ ಪಾಶ್ಚಾತ್ಯ ದೇಶದಲ್ಲಿ ಒಂದು ಸಿನಿಮಾ ನಿರ್ಮಾಣಕ್ಕಾಗಿ ನೂರಾರು ಜನರು ಒಗ್ಗೂಡುತ್ತಾರೆ’ ಎಂದು ತಮ್ಮ ನೂತನ ಯೋಜನೆಯನ್ನು ಕರಣ್ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.