ಗುರುವಾರ , ಜೂನ್ 17, 2021
22 °C

‘ನಾನಿರುವುದೇ ನಿಮಗಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಯೂರ’ ಸಿನಿಮಾದಲ್ಲಿ ಡಾ.ರಾಜಕುಮಾರ್ ಹಾಡಿ, ನಟಿಸಿರುವ ‘ನಾನಿರುವುದೇ ನಿಮಗಾಗಿ, ನಾಡಿರುವುದೇ ನಮಗಾಗಿ’ ಹಾಡನ್ನು ನರೇಂದ್ರ ಮೋದಿ ಸಾಧನೆಗಳೊಟ್ಟಿಗೆ ಜೋಡಿಸಿದ್ದುದು ನೆರೆದವರನ್ನು ರಂಜಿಸಿತು. ‘ಸಿಂಗಂ’ ಸಿನಿಮಾದ ಟೈಟಲ್‌ ಹಾಡಿಗೆ ನರೇಂದ್ರ ಮೋದಿಯ ವಿವಿಧ ಭಂಗಿಗಳ ಚಿತ್ರಗಳನ್ನು ಅಳವಡಿಸಿದ್ದು ಹಾಗೂ ಮೋದಿ ಭಾವಚಿತ್ರ ತೋರಿಸುವಾಗ ಸಿಂಹದ ಘರ್ಜನೆ ಮೊಳಗಿದ್ದು ವಿಶೇಷವಾಗಿತ್ತು. ತುಂಬಲು ನೆರವಾಯಿತು.ರ್‍ಯಾಲಿ ನಡೆದ ಮೈದಾನಕ್ಕೆ ‘ಸಿದ್ಧಾರೂಢರ ನಗರ’ ಎಂದು ಹೆಸರಿಟ್ಟಿದ್ದು, ಕೆಲವರ ಆಕ್ಷೇಪಕ್ಕೆ ಕಾರಣವಾಯಿತು. ಅದನ್ನು ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಮುಂದಾಗಿದ್ದ ಗುಂಪೊಂದು ಧಾರವಾಡದಲ್ಲಿ ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿತು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಕೊನೆಯ ಗಳಿಗೆಯಲ್ಲಿ ತನ್ನ ನಿರ್ಧಾರ ಕೈ ಬಿಟ್ಟಿತು. ಮುಖ್ಯ ವೇದಿಕೆಗೆ ಜಗನ್ನಾಥರಾವ್ ಜೋಶಿ ವೇದಿಕೆ ಎಂದು ಹೆಸರಿಡಲಾಗಿತ್ತು. ಉಳಿದ ಎರಡು ವೇದಿಕೆಗಳಿಗೆ ಸದಾಶಿವಶೆಟ್ಟರ್ ಹಾಗೂ ಎಂ.ಜೆ.ಜರತಾರಘರ ಅವರ ಹೆಸರನ್ನು ಇಡಲಾಗಿತ್ತು.*ವಂದೇ ಮಾತರಂ ಗೀತೆಯೊಂದಿಗೆ ಸಮಾರಂಭ ಆರಂಭವಾಯಿತು. ಈ ಸಂದರ್ಭದಲ್ಲಿ ಮುಖ್ಯ ವೇದಿಕೆಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಬಲೂನುಗಳು ಹಾರಾಡಿದವು. ಅಪರಿಚಿತರು ಹಾರಿಬಿಟ್ಟ ಬಲೂನುಗಳು ಕೆಲ ಕಾಲ ಸಂಘಟಕರನ್ನು ಗಲಿಬಿಲಿಗೊಳಿಸಿದವು.* ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸುತ್ತಿದ್ದಂತೆಯೇ ವೇದಿಕೆಯ ಮೇಲಿದ್ದ ಗಣ್ಯರು ಹಾಗೂ ರ್‍ಯಾಲಿಯಲ್ಲಿ ಪಾಲ್ಗೊಂಡವರು ಒಂದು ಕೈ ಮೇಲೆತ್ತಿ ಬೆಂಬಲ ವ್ಯಕ್ತಪಡಿಸಿದರೆ,  ಗಣ್ಯರ ಸಾಲಿನಲ್ಲಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎರಡೂ ಕೈ ಎತ್ತಿ ಬೆಂಬಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.