ಸೋಮವಾರ, ಜೂನ್ 21, 2021
20 °C
ರೂ 245 ಕೋಟಿ ಮೌಲ್ಯದ ಚಿನ್ನ ವಶಕ್ಕೆ

‘ನಿರ್ಬಂಧದಿಂದ ಕಳ್ಳಸಾಗಣೆ ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಚಿನ್ನ ಆಮದಿನ ಮೇಲೆ ಹೇರಿರುವ ನಿರ್ಬಂಧ ತೆಗೆದು­ಹಾಕುವ ಕುರಿತು ಸಹಮತ ವ್ಯಕ್ತಪಡಿಸಿ­ರುವ ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ, ನಿರ್ಬಂಧ ಮುಂದುವರಿಸು­ವುದರಿಂದ ಚಿನ್ನ ಕಳ್ಳಸಾಗಣೆಗೆ ದಾರಿ ಮಾಡಿ­ಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.‘ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣ ನೀಯವಾಗಿ ತಗ್ಗಿರುವ ಹಿನ್ನೆಲೆ­ಯಲ್ಲಿ ಆಮದು ನಿರ್ಬಂಧ ಸಡಿಲಗೊ­ಳಿಸುವ ಕುರಿತು ಚಿಂತಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಈ ನಿಟ್ಟಿ ನಲ್ಲಿ ಸಮ­ತೋಲಿತ ನಿರ್ಧಾರ ತೆಗೆದು ಕೊಳ್ಳಬೇಕು’ ಎಂದು ಅವರು ಗಮನ ಸೆಳೆದರು.ಚಿನ್ನ ಆಮದು ನಿರ್ಬಂಧ ಇರು­ವುದ ರಿಂದ ಚಿನ್ನಾಭರಣ ರಫ್ತು ವಹಿ­ವಾಟು ಫೆಬ್ರುವರಿಯಲ್ಲಿ ಶೇ 4.18­ರಷ್ಟು ಕುಸಿ ದಿದ್ದು 359 ಕೋಟಿ ಡಾಲರ್‌­ಗಳಿಗೆ (₨22258 ಕೋಟಿ) ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಒಟ್ಟಾರೆ ಚಿನ್ನಾಭರಣ ರಫ್ತು ಶೇ 7.15ರಷ್ಟು ಕುಸಿದಿದ್ದು 3573 ಕೋಟಿ ಡಾಲರ್‌­ಗಳಿಗೆ (₨2.21 ಲಕ್ಷ ಕೋಟಿ) ಇಳಿದಿದೆ.ಚಿನ್ನ ಮತ್ತು ಬೆಳ್ಳಿ ಆಮದು ಕೂಡ ಫೆಬ್ರುವರಿಯಲ್ಲಿ ಶೇ 71ರಷ್ಟು ತಗ್ಗಿದ್ದು 163 ಕೋಟಿ ಡಾಲರ್‌ಗಳಿಗೆ (10,106 ಕೋಟಿ) ಇಳಿಕೆ ಕಂಡಿದೆ.1,074 ಕೆ.ಜಿ ಬಂಗಾರ ವಶಕ್ಕೆ

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಅಕ್ರಮ­ವಾಗಿ ಸಾಗಿಸುತ್ತಿದ್ದ ಒಟ್ಟು 1,074.41 ಕೆ.­ಜಿಗಳಷ್ಟು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದು­ಕೊಂಡಿದ್ದಾರೆ. 2012–13ನೇ ಸಾಲಿ­ನಲ್ಲಿ ಇದು ಕೇವಲ 326.23 ಕೆ.ಜಿಯಷ್ಟಿತ್ತು ಎಂಬುದು ಗಮನಾರ್ಹ.

ಕಳೆದ ಒಂದು ವರ್ಷದಲ್ಲಿ ವಿವಿಧ ದೇಶಗಳಿಂದ­ ಅಕ್ರಮವಾಗಿ ತಂದ ₨245 ಕೋಟಿ ಮೌಲ್ಯದ ಚಿನ್ನವನ್ನು ಸೀಮಾ ಸುಂಕ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ. 2013–14ನೇ ಸಾಲಿನಲ್ಲಿ ಈವರೆಗೆ ಚಿನ್ನ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ  ಒಟ್ಟಾರೆ 700 ಪ್ರಕರಣಗಳು ದಾಖಲಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.