ಸೋಮವಾರ, ಮಾರ್ಚ್ 1, 2021
30 °C

‘ಪದೇ ಪದೇ ಮದ್ವೆ ಮಾತೇಕೆ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪದೇ ಪದೇ ಮದ್ವೆ ಮಾತೇಕೆ?’

‘ನಾನು ಬಾರ್ಬಿ ಗೊಂಬೆ ಅಲ್ಲ. ಸಾಮಾನ್ಯ ಮನುಷ್ಯಳೇ. ನನಗೂ ಬೇಕಾದಷ್ಟು ಕೆಲಸಗಳಿವೆ, ಬೇಕಾದಷ್ಟು ಸಮಸ್ಯೆಗಳಿವೆ...’ ಹೀಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬಾಲಿವುಡ್‌ ಬೆಡಗಿ ಇಲಿಯಾನಾ ಡಿಕ್ರೂಜ್.28 ವರ್ಷದ ಈ ಚೆಲುವೆ ತಮ್ಮ ಮುಂದಿನ ಚಿತ್ರಕ್ಕಾಗಿ ಪ್ರಮೋಷನ್‌ಗೆ ಹೋದಾಗ ‘ನಿಮ್ಮ ಮದುವೆ ಯಾವಾಗ’ ಎಂದು ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟು ಮಾಡಿಕೊಂಡ ಇಲಿಯಾನಾ, ‘ನಾನು ಈಗ ತುಂಬಾ ಬಿಝಿ ಇದ್ದೇನೆ. ಮದುವೆ–ಗಿದುವೆ ಎಂದೆಲ್ಲಾ ತಲೆ ಕೆಡಿಸಿಕೊಳ್ಳುವಷ್ಟು ಪುರುಸೊತ್ತು ಇಲ್ಲ. ನನಗೂ ನನ್ನದೇ ಆದ ಸಮಸ್ಯೆಗಳು ಇರುತ್ತವೆ, ಇಂಥ ಪ್ರಶ್ನೆ ಎಲ್ಲಾ ಕೇಳುತ್ತಾ ಇರಬೇಡಿ’ ಎಂದರಂತೆ.ಅಷ್ಟಕ್ಕೂ ಇವರಿಗೆ ಮದುವೆಯ ಪ್ರಶ್ನೆ ಕೇಳಿರುವುದಕ್ಕೂ, ಅದಕ್ಕೆ ಇಲಿಯಾನಾ ಸಿಟ್ಟು ಮಾಡಿಕೊಂಡಿರುವುದಕ್ಕೂ ಕಾರಣ ಇದೆ. ಅದೇನೆಂದರೆ, ಆಸ್ಟ್ರೇಲಿಯಾದ ನಟ ಆ್ಯಂಡ್ರೂ ನೀಬೋನ್‌ ಜೊತೆ ಇಲಿಯಾನಾ ಅವರ ಓಡಾಟ ತುಸು ಹೆಚ್ಚಾಗಿಯೇ ಇದೆಯಂತೆ. ಇವರಿಬ್ಬರೂ ಜೊತೆಯಲ್ಲಿರುವ ಬಗೆಬಗೆ ಫೋಟೊಗಳು  ಎಲ್ಲೆಡೆ ಹರಿದಾಡುತ್ತಿರುವ ಕಾರಣ, ಅವರಿಗೆ ಈ ಪ್ರಶ್ನೆ ಕೇಳಿದ್ದಾರೆ. ಇದೇ ಉದ್ದೇಶ ಇಟ್ಟುಕೊಂಡು ಪ್ರಶ್ನೆ ಕೇಳಿದ್ದು ಎಂದು ತಿಳಿದೇ ಇಲಿಯಾನಾ ಸಿಟ್ಟುಗೊಂಡಿದ್ದಾರೆ.‘ನಾನು ನನ್ನ ವೈಯಕ್ತಿಕ ಬದುಕಿನ ಯಾವುದೇ ವಿಷಯ ಮಾಧ್ಯಮದವರಿಗಾಗಲೀ, ಯಾರಿಂದಲೇ ಆಗಲಿ ಮುಚ್ಚಿಟ್ಟಿಲ್ಲ. ಹೀಗಿರುವಾಗ ಮದುವೆಯ ಬಗ್ಗೆ ಪದೇ ಪದೇ ಕೇಳುವುದು ನನಗೆ ಇಷ್ಟವಿಲ್ಲ. ನಾನೇನು ಗೊಂಬೆಯಲ್ಲ. ಮನುಷ್ಯಳೇ. ಪದೇ ಪದೇ ಒಂದೇ ಪ್ರಶ್ನೆ ಕೇಳುತ್ತಿದ್ದರೆ ನನಗೂ ನೋವಾಗುತ್ತದೆ. ಸಮಯ ಬಂದಾಗ ನೀವು ಕೇಳದಿದ್ದರೂ ನಾನೇ ಮದುವೆ ಸೇರಿದಂತೆ ಎಲ್ಲ ವಿಷಯಗಳನ್ನೂ ಹೇಳುತ್ತೇನೆ’ ಎನ್ನುವ ಮೂಲಕ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದಾರೆ.ಈ ಪ್ರಶ್ನೆಯಿಂದ ‘ಗರಂ’ ಆಗಿದ್ದ ಹಾಟ್‌ ತಾರೆ, ತಣ್ಣಗಾಗಿದ್ದು ಅವರ ಸೌಂದರ್ಯದ ಬಗ್ಗೆ ಪ್ರಶ್ನೆ ಕೇಳಿದಾಗ! ‘ನನ್ನ ಸೌಂದರ್ಯದ ಗುಟ್ಟು ಯೋಗ. ನಾನು ಯೋಗ ಪಟು. ಎಷ್ಟೇ ಬಿಝಿ ಇದ್ದರೂ ಯೋಗಕ್ಕೆ ಸ್ವಲ್ಪ ಸಮಯ ಮೀಸಲು ಇಡುತ್ತೇನೆ. ಇದರಿಂದಾಗಿಯೇ ಆರೋಗ್ಯಕರ ದೇಹವನ್ನು ಹೊಂದಿದ್ದೇನೆ’ ಎಂದಿದ್ದಾರೆ. ಅಂದಹಾಗೆ, ಇಲಿಯಾನಾ ಹಿಂದಿ ಮಾತ್ರವಲ್ಲದೇ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ 2013ರಲ್ಲಿ ತೆರೆ ಕಂಡ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ತುಂಟ ತುಂಟಿ’ ಕನ್ನಡ ಚಿತ್ರದಲ್ಲಿಯೂ ಒಂದು ಹಾಡಿಗೆ ಇವರು ನರ್ತಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.