ಬುಧವಾರ, ಫೆಬ್ರವರಿ 24, 2021
23 °C

‘ಪುಟಾಣಿ ಪಂಟ್ರು’ ಎರಡನೇ ಆವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪುಟಾಣಿ ಪಂಟ್ರು’ ಎರಡನೇ ಆವೃತ್ತಿ

ಸ್ಟಾರ್ ನೆಟ್‌ವರ್ಕ್‌ನ ಕನ್ನಡ ಮನರಂಜನಾ ವಾಹಿನಿಯಾದ ಸುವರ್ಣ ವಾಹಿನಿ ಈ ಮುಂಚೆ ‘ಪುಟಾಣಿ ಪಂಟ್ರು’ ಎಂಬ ಮಕ್ಕಳ ಪ್ರತಿಭೆ ಹುಡುಕುವ ರಿಯಾಲಿಟಿ ಷೋವೊಂದನ್ನು ಆಯೋಜಿಸಿ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿಂದೆಯೇ ಈಗ ‘ಪುಟಾಣಿ ಪಂಟ್ರು ಸೀಸನ್‌– 2’ ಆರಂಭಿಸಿದೆ. ಜೂನ್‌ 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.  5 ವರ್ಷದಿಂದ 13 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಷೋನಲ್ಲಿ ಭಾಗವಹಿಸಲು ಅವಕಾಶವಿದ್ದು, ನಾಡಿನಾದ್ಯಂತ ಆಡಿಷನ್‌ ನಡೆಸಿ 15 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಕರ್ನಾಟಕದ ಜನರಿಗೆ ತೋರಿಸುವ ಬೃಹತ್ ವೇದಿಕೆ ಇದಾಗಿದ್ದು, ಅನೇಕ ವಿಷಯಗಳನ್ನು ವಿಭಿನ್ನ ಪ್ರಕಾರದ ನೃತ್ಯ ಶೈಲಿ ಬಳಸಿ ಜನರಿಗೆ ಸಂದೇಶ ರವಾನಿಸುವ ಉದ್ದೇಶವನ್ನೂ ಈ ಷೋ ಹೊಂದಿದೆ.ನಟಿ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್‌, ಡಾನ್ಸಿಂಗ್‌ ಕಿಂಗ್‌ ಪ್ರಭುದೇವ ಅವರ ತಂದೆ ಹಾಗೂ ಹಿರಿಯ ನೃತ್ಯ ಸಂಯೋಜಕ ಮೂಗೂರು ಸುಂದರಂ ಮತ್ತು ನಿರ್ದೇಶಕ ಗುರುಪ್ರಸಾಸ್‌ ‘ಪುಟಾಣಿ ಪಂಟ್ರು ಸೀಸನ್‌ 2’ನ ತೀರ್ಪುಗಾರರಾಗಿ ಮಕ್ಕಳ ಪ್ರದರ್ಶನಗಳಿಗೆ ಅಂಕ ನೀಡಲಿದ್ದಾರೆ.ನಿರಂಜನ್ ದೇಶಪಾಂಡೆ ಹಾಗೂ ಅಮೃತ ವರ್ಷಿಣಿ ಧಾರಾವಾಹಿಯ ನಟಿ ರಜಿನಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.