‘ಪ್ರಜಾವಾಣಿ’ ಟ್ರೈನಿ ಉಪಸಂಪಾದಕ ಗಣೇಶ ವೈದ್ಯಗೆ 6 ಚಿನ್ನ

ಧಾರವಾಡ: ‘ಪ್ರಜಾವಾಣಿ’ಯ ಬೆಂಗಳೂರು ಕಚೇರಿಯಲ್ಲಿ ಟ್ರೈನಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವೈದ್ಯಹೆಗ್ಗಾರ ಗ್ರಾಮದ ಗಣೇಶ ಶಿವರಾಮ ವೈದ್ಯ ಅವರಿಗೆ ಕರ್ನಾಟಕ ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆರು ಚಿನ್ನದ ಪದಕಗಳು ಲಭಿಸಿವೆ.
ಮಂಗಳವಾರ ನಡೆದ ವಿ.ವಿ. ಘಟಿಕೋತ್ಸವದಲ್ಲಿ ಪದಕಗಳನ್ನು ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಪ್ರದಾನ ಮಾಡಿದರು.
‘ಪ್ರಜಾವಾಣಿಯಂತಹ ಪ್ರತಿಷ್ಠಿತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ. ಇದೇ ವೃತ್ತಿಯಲ್ಲಿ ಮುಂದುವರಿಯುತ್ತೇನೆ’ ಎಂದು ವೈದ್ಯ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.