ಬುಧವಾರ, ಮಾರ್ಚ್ 3, 2021
23 °C

‘ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ’

ಯಲಹಂಕ: ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಋಣ ತೀರಿಸಬೇಕೆಂಬ ಮನಸ್ಸಿದ್ದು, ಈ ದಿಸೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೂ ನಮ್ಮೆಲ್ಲರ ಋಣವಾಗಿರಬೇಕು. ಇಲ್ಲದಿದ್ದರೆ ನಮ್ಮ ತಾಯಿಗೆ ದ್ರೋಹ ಬಗೆದಂತಾಗುತ್ತದೆ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.



ಹೆಬ್ಬಾಳ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ಪ್ರತಿಭಾನ ಕನ್ನಡ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ‘ನಿಮ್ಮ ಬದುಕಿನಲ್ಲಿ ಎದುರಾಗುವ ಅವಮಾನ ಮತ್ತು ಕಷ್ಟಗಳನ್ನು ಸ್ವಾಗತಿಸಿದರೆ, ಭವಿಷ್ಯದಲ್ಲಿ ಅವು ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತಾ ಹೋಗುತ್ತವೆ’  ಎಂದು ಸಲಹೆ ನೀಡಿದರು.



ಚಿಂತನೆ ಮತ್ತು ಪ್ರಶ್ನೆಮಾಡುವ ಗುಣಗಳನ್ನು ಬೆಳೆಸಿ­ಕೊಳ್ಳುವುದರಿಂದ ಬೇರೆಬೇರೆ ಸಾಧ್ಯತೆಗಳು ಹಾಗೂ ಮಗ್ಗುಲುಗಳ ಬಗ್ಗೆ ಹೊಳೆಯುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಅಂತಹ ಗುಣಗಳನ್ನು ರೂಪಿಸಿಕೊಳ್ಳ ಬೇಕು ಎಂದರು. ಕವಿಗೋಷ್ಠಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.