ಗುರುವಾರ , ಜೂನ್ 24, 2021
24 °C
ಆನೇಕಲ್‌ನಲ್ಲಿ ಮಹಿಳೆಯರ ಬೈಕ್‌ ರ‍್ಯಾಲಿ

‘ಬದಲಾವಣೆಗೆ ನಾಂದಿ ಹಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್‌:  ಬರಲಿರುವ ಲೋಕಸಭಾ ಚುನಾ­ವಣೆಯಲ್ಲಿ ಮಹಿಳೆಯರು ದಿಟ್ಟ ತೀರ್ಮಾನ­ವನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿಯನ್ನು ಬೆಂಬಲಿಸ­ಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ತುಳಸಿ ಮುನಿರಾಜು ನುಡಿದರು.ಪಟ್ಟಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಯೋಜಿ­ಸಿದ್ದ ಮಹಿಳೆಯರ ಬೈಕ್‌ ರ‍್ಯಾಯಲ್ಲಿ ಪಾಲ್ಗೊಂಡು ಅವರು ಮಾತನಾಡಿ­ದರು.ಒಂದು ಕುಟುಂಬವನ್ನು ವ್ಯವಸ್ಥಿತ­ಗೊಳಿಸುವಲ್ಲಿ ಮಹಿಳೆಯ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡು­ವಲ್ಲಿಯೂ ಮಹಿಯರ ಪಾತ್ರ ಪ್ರಮುಖ­ವಾಗಿದೆ ಎಂದರು.ಮಾಜಿ ಸಚಿವ ಎ.ನಾರಾಯಣ­ಸ್ವಾಮಿ ಮಾತನಾಡಿ, ‘ಮಹಿಳೆ­ಯರು ಇನ್ನಷ್ಟು ಸಬಲೀಕರಣವಾಗಬೇಕಾಗಿದೆ’ ಎಂದರು.

ಯುಪಿಎ ಸರ್ಕಾರದ ಹಗರಣ­ಗಳಿಂದಾಗಿ ಬೆಲೆ ಏರಿಕೆ, ಭ್ರಷ್ಟಾಚಾರ ಹೆಚ್ಚಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಭವ್ಯ ಭಾರತದ ನಿರ್ಮಾಣಕ್ಕಾಗಿ ಮುಂಬರುವ ಲೋಕ­ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು. ಮಹಿಳೆಯರು ಮನೆಮನೆಗಳಿಗೆ ತೆರಳಿ ಬಿಜೆಪಿ ಪರವಾಗಿ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ಪ್ರಧಾನ ಕಾರ್ಯ­ದರ್ಶಿ ಎಂ.ರಾಮಕೃಷ್ಣ, ಜಿಲ್ಲಾ ಉಪಾ­ಧ್ಯಕ್ಷೆ ಡಾ.ಸುಲೋಚನಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಮ್ಮ, ಎಪಿ­ಎಂಸಿ ಮಾಜಿ ನಿರ್ದೇಶಕಿ ಹೇಮಲತಾ ಆಂಜಿನಪ್ಪ, ಪುರಸಭಾ ಮಾಜಿ ಅಧ್ಯಕ್ಷೆ ಸುಜಾತ ರಾಜಣ್ಣ, ಸುಧಾಮಣಿ, ಯುವ ಮೋರ್ಚಾ ಅಧ್ಯಕ್ಷ ಮಂಜು­ನಾಥ­ರೆಡ್ಡಿ, ಶ್ರೀಕಾಂತ್‌, ಬಳ್ಳೂರು ವಸಂತ್‌ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.