ಭಾನುವಾರ, ಜನವರಿ 19, 2020
27 °C

‘ಬಾಲ್ಯ ವಿವಾಹ ಸಾಮಾಜಿಕ ಪಿಡುಗು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಾಲ್ಯ ವಿವಾಹ  ಪದ್ದತಿಯು ಸಾಮಾಜಿಕ ಪಿಡುಗಾಗಿದೆ, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕಯರು ಸೇರಿದಂತೆ ಸಾರ್ವಜನಿಕರು   ಈ  ಬಗ್ಗೆ ಹೆಚ್ಚಿನ ಗಮನ  ಹರಿಸಿದರೆ ಖಂಡಿತ ವಾಗಿ ಬಾಲ್ಯ ವಿವಾಹ  ಎಂಬ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾದ್ಯ ಎಂದು ಜಿಲ್ಲಾಧಿಕಾರಿ ಎನ್. ಎಸ್.ಪ್ರಸನ್ನಕುಮಾರ ಹೇಳಿದರು.ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ “ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಬೃಹತ್ ಆಂದೋಲನ” ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯವಿವಾಹದಿಂದ ಹುಟ್ಟುವ ಮಗು ಕಡಿಮೆ ತೂಕ ಹೊಂದಿ ಹಾಗೂ ಅಪೌಷ್ಟಿಕಾಂಶದಿಂದ ಬಳ ಲುವ ಸಾಧ್ಯ್ಯತೆ ಇರುತ್ತದೆ. ವಯಸ್ಸಿನ ಅಂತರದಿಂದ ಯೌವ್ವನದಲ್ಲಿಯೆ ವಿಧವೆ ಪಟ್ಟ ಹೆಣ್ಣಿಗೆ ದೊರೆಯುತ್ತದೆ. ಸಮಾಜ ದಲ್ಲಿ ವಿಧವಾ ಹೆಣ್ಣಿಗೆ ನೀಡುವ ಗೌರವ ವನ್ನು ನಾವೆಲ್ಲರೂ ಅವಲೋಕಿಸಬೇಕು. ಸಾರ್ವಜನಿಕ ವಲಯದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳ ಬಗ್ಗೆ  ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರುಮರಿ ಮಾತನಾಡಿ, ಮದುವೆ ಎನ್ನುವುದು ಸಾಮಾಜಿಕ ಕರ್ತವ್ಯ ಪಾಲಕರು ಅದನ್ನು ಹೊರೆ ಎಂದು ಭಾವಿಸಬಾರದು. ಬಾಲ್ಯ ವಿವಾಹದ ನಂತರ ಸಮಸ್ಯೆಗಳನ್ನು ಅನುಭವಿಸುವ ಹೆಣ್ಣು ಮಕ್ಕಳ  ದೈಹಿಕ ಬೆಳವಣಿಗೆ ಕುಂಠಿತಕೊಂಡು, ಕುಟುಂಬದವ ರೊಂದಿಗೆ ಹೊಸ ವಾತಾವರಣದಲ್ಲಿ ಭಯಬೀತರಾಗಿ ಕೆಲಸ ಮಾಡುವ ಅನಿ ವಾರ್ಯ ಅವಳಿಗಿರುತ್ತದೆ.

  ಪಾಲಕರು ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಅವಸರ ಮಾಡದೇ ಮಗುವಿನ ದೈಹಿಕ ಸಾಮರ್ಥ್ಯ, ವಯಸ್ಸಿನ ಅಂತರ, ಮನಸ್ಸಿನ ಭಾವನೆಗಳನ್ನು ಅರ್ಥೈಸಿ ಕೊಂಡು  ಹೆಣ್ಣು ಮಗುವಿಗೆ ಕನಿಷ್ಠ 18 ವಯಸ್ಸಿನ ನಂತರ ಮದುವೆ ಮಾಡ ಬೇಕು. ಬಾಲ್ಯ ವಿವಾಹ ಮಾಡುವವರ ವಿರುದ್ಧ  ಕಾನೂನಿನಲ್ಲಿ ಕಠಿಣ ಕ್ರಮಗಳಿವೆ ಇಂತಹ ಕೃತ್ಯಗಳನ್ನು ತಡೆ ಗಟ್ಟಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಪಿ.ಶರಣಪ್ಪ ಮಾತನಾಡಿ, ಪಾಲಕರಿಗೆ ಹೆಣ್ಣು ಹೊರೆ, ಬಡತನ ಎಂಬ ಭಾವನೆ ಸೇರಿದಂತೆ ಕೆಲವು ಅವೈಜ್ಞಾನಿಕ ಕಾರಣಗಳಿಂದಾಗಿ ಬಾಲ್ಯ ವಿವಾಹ ಪದ್ದತಿ ಮುಂದುವರೆದಿದೆ.  16-18 ವರೆಗಿನ ವಯಸ್ಸಿನ ಬಾಲಾಪರಾ ದಿಗಳಲ್ಲಿ ಶೇ 22 % ರಷ್ಠು ಬಾಲ್ಯ ವಿವಾಹಿತರು ಇದ್ದಾರೆ. ಭಾರತ  ಸೇರಿದಂತೆ ಇತರೇ ದೇಶಗಳಲ್ಲಿ ಬಾಲ್ಯ ವಿವಾಹ ಪದ್ದತಿ ಇದೆ. ಸ್ವಾತಂತ್ರ್ಯದ ಮೊದಲು ಈ ಪದ್ದತಿ ಆಚರಣೆಯಲ್ಲಿತ್ತು ಈಗಲೂ ಕೆಲವು ಗ್ರಾಮೀಣ ಭಾಗಗಳಲ್ಲಿ ಅನಿಷ್ಠ ಪದ್ದತಿ ಮುಂದುವರೆದಿದೆ. 

ಸ್ವಾಸ್ತ್ಯ, ಸಮೃದ್ಧವಾದ  ಸಮಾಜ ನಿರ್ಮಾಣ ಮಾಡಲು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಅಗತ್ಯವಿದೆ.  ಮಕ್ಕಳ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ  ಮಕ್ಕಳ ಸಹಾಯ ವಾಣಿ 1098 ಗೆ ಕರೆ ಮಾಡಬಹುದು ಪ್ರಸಕ್ತ ವರ್ಷದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ಲಕ್ಷ್ಮೇಶ್ವರ ಹಾಗೂ ಗೋಗೇರಿ ಗ್ರಾಮ ದಲ್ಲಿ ಬಾಲ್ಯ ವಿವಾಹ ತಡೆದು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಉಪನಿರ್ದೆಶಕ ಎಚ್. ಎಸ್. ಪರಮೇಶ್ವರಪ್ಪ, ಯುನಿಸೆಪ್ ನ ಸುಚಿತ್ರಾರಾವ್, ಕೊಪ್ಪಳ ಎಸ್.ಜಿ. ಪಿಯು ಘಟಕದ ಸೋಮಶೇಖರ ಹಾಜರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು,   ಅಂಗನ ವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂತಾದವರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೊನ್ನಗೌಡರ ಸ್ವಾಗತಿಸಿದರು. ಎಸ್.ಎಸ್.ಗೌಡರ ನಿರೂಪಿಸಿದರು. ಆರ್.ಎಸ್.ಬುರಡಿ ವಂದಿಸಿದರು.

ಪ್ರತಿಕ್ರಿಯಿಸಿ (+)