ಗುರುವಾರ , ಜೂನ್ 17, 2021
28 °C

‘ಮಠಗಳು ಒಗ್ಗಟ್ಟಿನ ಮಂತ್ರ ಜಪಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರೂ ಸಾಮರಸ್ಯದೊಂದಿಗೆ ಜೀವಿಸಬೇಕು. ಮಠ– ಮಾನ್ಯಗಳ ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಲಹೆ ನೀಡಿದರು.ನಗರದ ರಾಘವ ಕಲಾಮಂದಿರದಲ್ಲಿ ಸೋಮವಾರ ಸಂಜೆ ಪುಟ್ಟರಾಜ ಕವಿ-ಗವಾಯಿಯವರ ಸೇವಾ ಸಂಘ ಆಯೋಜಿಸಿದ್ದ ಹಾನಗಲ್ಲ ಕುಮಾರಸ್ವಾಮೀಜಿ,  ಪಂ. ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜ ಕವಿ-ಗವಾಯಿಯವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ಕುಮಾರಸ್ವಾಮೀಜಿ, ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜ ಗವಾಯಿಯವರು ಸಾಮರಸ್ಯದಿಂದ ಜೀವಿಸುವಂತೆ ಜಗತ್ತಿಗೆ ಸಾರಿದ ತ್ರಿಮೂರ್ತಿಗಳು. ಅವರ ತತ್ಆದರ್ಶಗಳು ಎಲ್ಲರಿಗೂ ಆದರ್ಶವಾಗಬೇಕು ಎಂದರು.

ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿರೂಪಾಕ್ಷಯ್ಯ ಸ್ವಾಮಿ, ಸುಭದ್ರಮ್ಮ ಮನ್ಸೂರ್‌ ಹಾಗೂ ಬುರ್ರಕಥಾ ಕಲಾವಿದೆ ದರೋಜಿ ಈರಮ್ಮ ಅವರನ್ನು ಇದೇ ಸಂದರ್ಭ ಸತ್ಕರಿಸಲಾಯಿತು.ಉರವಕೊಂಡ ಮಠದ ಕರಿಬಸವ ರಾಜೇಂದ್ರ ಸ್ವಾಮೀಜಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಹರಗಿನಡೋಣಿ ಮಠದ ಸಿದ್ಧಲಿಂಗ ಸ್ವಾಮೀಜಿ, ಎನ್.ತಿಪ್ಪಣ್ಣ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕೆ.ಎ. ರಾಮಲಿಂಗಪ್ಪ ಅವರು ‘ನಡೆದಾಡುವ ದೇವರು ಶ್ರೀ ಪುಟ್ಟರಾಜ ಗವಾಯಿ’ ಗ್ರಂಥ ಬಿಡುಗಡೆ ಮಾಡಿದರು.ಹರ್ಷ ಮತ್ತು ಅಮೃತವರ್ಷಿಣಿ ಉಪ್ಪಾರ ಅವರಿಂದ ವಚನ ಗಾಯನ ನಡೆಯಿತು. ಸಂಘದ ಅಧ್ಯಕ್ಷ ಅಧ್ಯಕ್ಷ ಬಂಡ್ರಾಳು ಎಂ.ಮೃತ್ಯುಂಜಯ­ಸ್ವಾಮಿ ಸ್ವಾಗತಿಸಿದರು, ತಿಮ್ಮನಗೌಡ ಕಾರ್ಯಕ್ರಮ ನಿರೂಪಿಸಿದರು.ರವಿಚಂದ್ರನ್, ಮಹೇಶ್ ಬಣಕಾರ, ಎಚ್.ಎಂ. ಅಮರೇಶ, ಕಿರಣಕುಮಾರ್,  ಜೆ.ಎಂ.ಬಸವರಾಜಸ್ವಾಮಿ ಉಪಸ್ಥಿತರಿದ್ದರು. ನಂತರ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘದ ವತಿಯಿಂದ, ಪುಟ್ಟರಾಜ -ಗವಾಯಿ ರಚಿಸಿದ ‘ಅಕ್ಕ ಮಹಾದೇವಿ’  ನಾಟಕ ಪ್ರದರ್ಶನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.