ಬೆಂಗಳೂರು:  ‘ಎಷ್ಟೇ ಒತ್ತಡದ ಸಂದರ್ಭವಿದ್ದರೂ ತಾಳ್ಮೆಯಿಂದ ಮತ್ತು ಅಷ್ಟೇ ಅಬ್ಬರದಿಂದ ಆಡುವ ಕೌಶಲ ಮನೀಷ್ಗೆ ಕರಗತವಾಗಿದೆ. ಆತನಿಗೆ ಒತ್ತಡವೆಂದರೆ ಇಷ್ಟ. ಆಸ್ಟ್ರೇಲಿಯಾ ಎದುರು ಆಡಿದ ಆಟ ನೋಡಿ ನನಗೆ ಅಚ್ಚರಿಯೇನೂ ಆಗಲಿಲ್ಲ’ ಎಂದು ಜವಾನ್ಸ್ ಕ್ರಿಕೆಟ್ ಕ್ಲಬ್ನ ತರಬೇತುದಾರ ಇರ್ಫಾನ್ ಸೇಠ್ ಹೇಳಿದರು.

ಮನೀಷ್ ಎಂಟು ವರ್ಷದವರಾಗಿ ದ್ದಾಗಿನಿಂದಲೇ ಜವಾನ್ಸ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ಕ್ಲಬ್ ಆಟಗಾರನ ಅದ್ಭುತ ಬ್ಯಾಟಿಂಗ್ ಬಗ್ಗೆ ಇರ್ಫಾನ್ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

‘ಪಂದ್ಯವನ್ನು ಸುಲಭವಾಗಿ ಗೆಲ್ಲುವ ಅವಕಾಶವಿದ್ದ ಸಂದರ್ಭಗಳಿಗಿಂತ ಒತ್ತಡ ವನ್ನು ಮೆಟ್ಟಿನಿಂತು ಆಡುವುದು ಇಷ್ಟ. ಮನೀಷ್ ಎದುರಿಸಿದ ಪ್ರತಿ ಎಸೆತವನ್ನೂ ನೋಡಿದ್ದೇನೆ. ಅಗತ್ಯ ಸಂದರ್ಭದಲ್ಲಿ ವೇಗವಾಗಿ ರನ್ ಗಳಿಸುವುದು ಆತನಿಗೆ ಗೊತ್ತು. ಆದರೆ ಏಕದಿನ ಸರಣಿಯ ಎಲ್ಲಾ ಪಂದ್ಯಗಳಿಗೂ ಅವಕಾಶ ಕೊಡಬೇಕಿತ್ತು’ ಎಂದೂ ಅವರು ಅಭಿಪ್ರಾಯಪಟ್ಟರು.

26 ವರ್ಷದ ಮನೀಷ್ 2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಹೋದ ವರ್ಷ ಜಿಂಬಾಬ್ವೆ ಎದುರು ಚೊಚ್ಚಲ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯದಲ್ಲಿ ಆಡಿದ್ದರು. ಐಪಿಎಲ್ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರ ಎನ್ನುವ ಕೀರ್ತಿಯೂ ಮನೀಷ್ ಹೆಸರಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.