ಉಡುಪಿ: ‘ಹುಟ್ಟಿನಿಂದ ಯಾರೂ ಅಪರಾಧಿ ಆಗಿರುವುದಿಲ್ಲ. ಮನಸ್ಥಿತಿಯ ಹತೋಟಿಯನ್ನು ಕಳೆದುಕೊಂಡು ಸಿಟ್ಟಿನ ಬರದಲ್ಲಿ ಮಾಡುವ ಕೃತ್ಯಗ ಳಿಂದ ಅಪರಾಧಿಯಾಗುತ್ತಾರೆ. ಶಿಕ್ಷೆಗೆ ಒಳಪಟ್ಟ ವ್ಯಕ್ತಿಗಳನ್ನು ಕೆಟ್ಟ ದೃಷ್ಟಿ ಯಿಂದ ನೋಡದೇ ಅವರಿಗೂ ಸಮಾಜದಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು’ ಎಂದು ಜೈಲಿನ ಅಧಿಕಾರಿ ಜೆ.ಸೌಮ್ಯಾ ಹೇಳಿದರು.

ಉಡುಪಿ ಜಯಂಟ್ಸ್ ಗ್ರೂಪ್ನ ಆಶ್ರಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಮನಃ ಪರಿವರ್ತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ಮನೋ ಸ್ಥೈರ್ಯ ಹೆಚ್ಚಿಸುವ ವ್ಯಕ್ತಿಗ ಳೊಂದಿಗೆ ಬೇರೆಯಬೇಕು. ಯಾರಿಂದಲೂ ಯಾವುದನ್ನೂ ನಿರೀಕ್ಷಿಸದೆ ಸ್ನೇಹಿತ ರೊಡನೆ, ಅಧಿಕಾರಿಗಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು. ಇನ್ನೊಮ್ಮೆ ತಪ್ಪು ಮಾಡಿ ಇಲ್ಲಿಗೆ ಬರುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದರು.

ಉಡುಪಿ ಜಯಂಟ್ಸ್ ಗ್ರೂಪ್ನ ಅಧ್ಯಕ್ಷ ದೇವದಾಸ್ ಕಾಮತ್, ಕಾರ್ಯದರ್ಶಿ ಗಣೇಶ್ ಉರಾಳ್, ಉಡುಪಿ ಯು ಚಾನಲ್ನ ನಿರ್ದೇಶಕ ಶಿವಪ್ರಸಾದ್ ರಾವ್, ಜಯಂಟ್ಸ್ ಗ್ರೂಪ್ನ ಸದಸ್ಯ ಜಗದೀಶ್ ಅಮೀನ್, ವಿನ್ಸೆಂಟ್ ಸಲ್ದಾನ, ವಿಶ್ವನಾಥ ಶೆಣೈ, ಸುಭಾಷಿತ್ ಕುಮಾರ್, ಚಂದ್ರಕಲಾ ಕಾಮತ್ ಉಪಸ್ಥಿತರಿದ್ದರು.

ಯು ಚಾನಲ್ನ ವತಿಯಿಂದ ಕಾರಾ ಗೃಹದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ಗಳನ್ನು ವಿತರಣೆ ಮಾಡ ಲಾಯಿತು. ಜಯಂಟ್ಸ್ ವತಿಯಿಂದ ಸರ್ವ ಸದಸ್ಯರಿಗೆ ಹಣ್ಣು ಹಂಪಲು ಗಳನ್ನು ನೀಡಲಾಯಿತು.
ಸಂದೀಪ್ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯದರ್ಶಿ ಗಣೇಶ್ ಉರಾಳ್ ಧನ್ಯವಾದ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.