ಕುಷ್ಟಗಿ: ಕಾಂಗ್ರೆಸ್ ಪಕ್ಷದ ಇಲ್ಲಿಯ ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ ಮತ್ತು ಹಸನ್ಸಾಬ್ ದೋಟಿಹಾಳ ನಡುವಿನ ತಿಕ್ಕಾಟದಿಂದಾಗಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರಿಗೆ ಪೀಕಲಾಟ ಶುರುವಾಗಿದೆ.

ಕೊಪ್ಪಳದಲ್ಲಿ ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಬಯ್ಯಾಪುರ ಬೆಂಬಲಿಗರು ಹಸನ್ಸಾಬ್ ವಿರುದ್ಧ ಬಹಿರಂಗವಾಗಿಯೇ ಸೆಡ್ಡುಹೊಡೆದಿದ್ದರಿಂದ ಗಲಿಬಿಲಿಗೊಂಡಿರುವ ಅಭ್ಯರ್ಥಿ ಬಸವರಾಜ ಹಿಟ್ನಾಳ ಮತ್ತು ಸಚಿವ ಶಿವರಾಜ ತಂಗಡಗಿ ಗುರುವಾರ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ ಅಸಮಾಧಾನಗೊಂಡಿರುವ ಕಾರ್ಯಕರ್ತರನ್ನು ಸಮಾಧಾನಪಡಿಸಿ ತೇಪೆ ಹಾಕುವ ಯತ್ನ ನಡೆಸಿದರು.

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಚಿವ ತಂಗಡಗಿ, ವಿಧಾನಸಭೆ ಚುನಾವಣೆಯಲ್ಲಿ ಬಯ್ಯಾಪುರ ಸೋಲಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಹಸನ್ಸಾಬ್ ದೋಟಿಹಾಳರ ಬಗ್ಗೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಕುರಿತು ಕೆಪಿಸಿಸಿಗೆ ಪತ್ರ ಬರೆದಿದ್ದು ಪಕ್ಷದ ಹಿರಿಯರು ಗೊಂದಲ ನಿವಾರಿಸುತ್ತಾರೆ ಎಂದರು.

ಯಾವುದೇ ಕಾರಣಕ್ಕೂ ಹಸನ್ಸಾಬ್ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ಬಯ್ಯಾಪುರ ಬೆಂಬಲಿಗರು ಪಟ್ಟು ಹಿಡಿದಿರುವುದು ಮತ್ತು ಪ್ರಚಾರದ ಸಂದರ್ಭದಲ್ಲಿ ಮಾಜಿ ಶಾಸಕರ ನಡುವಿನ ರಾಜಕೀಯ ವೈಮನಸ್ಸು ಅಭ್ಯರ್ಥಿಯ ಭವಿಷ್ಯಕ್ಕೆ ಮಾರಕ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ತಂಗಡಗಿ ಸ್ಪಷ್ಟ ಉತ್ತರ ನೀಡಲಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಇಂಥ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು. ಆದರೆ ಪಕ್ಷದಲ್ಲಿ ಶಿಸ್ತು ಮುಖ್ಯ, ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿ ಎಂದು ಹೇಳಿದ್ದು ಅಚ್ಚರಿ ಮೂಡಿಸಿತು.

ಚುನಾವಣೆ ಪ್ರಚಾರ ಕುರಿತು ಮಾತನಾಡಿದ ಸಚಿವ, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಾ. 21ರಿಂದ 23ರವರೆಗೆ ಕಾರ್ಯಕರ್ತರ ಸಭೆಗಳು ನಡೆಯಲಿವೆ. 25ರ ನಂತರ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಮತದಾರರ ಗಮನಸೆಳೆಯುತ್ತೇವೆ. ಅತಿ ಹೆಚ್ಚು ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಜೆಡಿಎಸ್, ಬಿಜೆಪಿ, ಬಿಎಸ್ಆರ್, ಕೆಜೆಪಿಯ ಅನೇಕ ಪ್ರಮುಖರು ಮಾ. 23ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಎಲ್.ಜಿ.ಕುಂಟಗೌಡ್ರ, ದೊಡ್ಡಯ್ಯ ಗದ್ದಡಕಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಾಲತಿ ನಾಯಕ್, ಸಂತೋಷ ಸರಗಣಾಚಾರ ಇತರರು ಇದ್ದರು.

ಬಯ್ಯಾಪುರ ಹೇಳಿಕೆ: ಈ ಮಧ್ಯೆ ಕೊಪ್ಪಳದಲ್ಲಿನ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ವಿಧಾನಸಭೆ ಚುನಾವಣೆಯಲ್ಲಿ ಹಸನ್ಸಾಬ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ನಿಜ ಅದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಇತ್ತು. ಆದರೆ ಹಿಂದಿನ ಘಟನೆಯನ್ನು ನಾವು ಮರೆತಿದ್ದರೂ ಹಸನ್ಸಾಬ್ ಪತ್ರಿಕೆಯಲ್ಲಿ ಮತ್ತೆ ತಮ್ಮ ವರಸೆ ಮುಂದುವರಿಸಿದ್ದಕ್ಕೆ ಕಾರ್ಯಕರ್ತರು ಸಹಜವಾಗಿ ಆಕ್ರೋಶ ಹೊರ ಹಾಕಿದ್ದಾರೆ ಎಂದರು.

ಆದರೆ ಕಾರ್ಯಕರ್ತರ ವರ್ತನೆ ಬಗ್ಗೆ ವಿಷಾದವಿದ್ದು, ಅವರ ಪರವಾಗಿ ಕ್ಷಮೆಯಾಚಿಸುತ್ತೇನೆ. ಅಲ್ಲದೇ ನಮಗೆ ಪಕ್ಷ ಮುಖ್ಯ ಮುಖ್ಯ ಹೊರತು ಹಸನ್ಸಾಬ್ನಂಥ ವ್ಯಕ್ತಿಗಳಲ್ಲ. ಪಕ್ಷದ ಆಂತರಿಕ ವಿಚಾರದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗಿಟ್ಟು ಅಭ್ಯರ್ಥಿ ಹಿಟ್ನಾಳ ಗೆಲುವಿಗೆ ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.