‘ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ’

ಗದಗ: ಪುಣ್ಯ ಎಂದರೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸುವುದು ಎಂದರ್ಥ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.
ನಗರದ ವಿದ್ಯಾಶ್ರಮದಲ್ಲಿ ಶುಕ್ರವಾರ ನಡೆದ ಸತ್ಸಂಗ ಸಮ್ಮೇಳನ, ಆದಿಶಕ್ತಿ ರಥೋತ್ಸವ, ಸದಾಶಿವಾನಂದ ಗುರುಗಳ 117 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಪರೋಪಕಾರ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಾಗೂ ಸಕಲ ಜೀವಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಮಾನವೀಯತೆ ಇಲ್ಲದ ವ್ಯಕ್ತಿ ಮನುಷ್ಯ ಎನಿಸಿಕೊಳ್ಳುವುದಿಲ್ಲ.
ಮಾನವೀಯತೆಯ ಮೂಲಕ ಮನುಷ್ಯತ್ವದ ಗುಣಗಳು ಅನಾವರಣಗೊಳ್ಳಬೇಕು. ಮನಸ್ಸಿನ ಕೊಳೆ ತೊಳೆದುಕೊಳ್ಳಲು ಸತ್ಸಂಗ ಅವಶ್ಯ. ಸಮಾಜದಲ್ಲಿ ಇಂದು ಧರ್ಮ ಜಾಗೃತಗೊಳ್ಳುವ ಮೂಲಕ ಜನರು ಜಾಗೃತರಾಗಬೇಕು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸುಣಧೋಳಿಯ ಜಡಿಸಿದ್ಧೇಶ್ವರಮಠದ ಅಭಿನವ ಶಿವಾನಂದ ಸ್ವಾಮಿ, ತುಪ್ಪದಕುರಹಟ್ಟಿಯ ವಾಗೀಶ ಪಂಡಿತರಾಧ್ಯ ದೇವರು ಭೂಸನೂರಮಠ ಹಾಜರಿದ್ದರು. ಅಧ್ಯಕ್ಷತೆಯನ್ನು ಇಮ್ರಾಹಿಂಪೂರದ ಶಿವಾನಂದಮಠದ ಸಂಪೂರ್ಣಾನಂದ ಸ್ವಾಮಿ ವಹಿಸಿದ್ದರು.
ಶಿವಾನಂದ ಮಠದ ದಯಾನಂದ ಮಹಾಸ್ವಾಮಿ, ಕೆ.ಐ.ಗುದಗಿ, ನಗರಸಭಾ ಸದಸ್ಯ ಅನೀಲ ಗರಗ ಭಾಗವಹಿಸಿದ್ದರು ಸಮಾರಂಭದಲ್ಲಿ ಎ.ಎಸ್.ಬ್ಯಾಳಿ ಹಾಗೂ ಬಸವರಾಜ ಶಾಬಾದಿಮಠ ಅವರನ್ನು ಸನ್ಮಾನಿಸಲಾಯಿತು.
ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯಿಂದ ಪ್ರಾರ್ಥನೆ ನಡೆಯಿತು. ಮಾಜಿ ಶಾಸಕ ಡಿ.ಆರ್.ಪಾಟೀಲ ಸ್ವಾಗತಿಸಿದರು, ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅವರು ಶರಣು ಸರ್ಮಪಿಸಿದರು, ಎಸ್.ಬಿ.ದೊಡ್ಡಣ್ಣವರ ನಿರೂಪಿಸಿದರು, ಎಸ್.ಬಿ.ಹೂಗಾರ ವಂದಿಸಿದರು.
ಸಂಜೆ ಶ್ರೀದೇವಿ ರಥೋತ್ಸವ ಮತ್ತು ಮುತ್ತೈದೆಯರಿಂದ ತನಾರತಿ ಸೇವೆ ಭಕ್ತಿ ಭಾವದೊಂದಿಗೆ ಜರುಗಿತು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಹಾಗೂ ಅನುಭಾವ ಚಿಂತನಗೋಷ್ಠಿ ನಡೆಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.