‘ನಿರ್ದೇಶಕರು ಹೇಳಿದರೆ ಮರದ ತುಂಡಿಗೂ ಕಿಸ್ ಮಾಡಬೇಕಾಗುತ್ತದೆ. ಇದು ನಟನೆಯ ಒಂದು ಭಾಗ. ನಾವು ಮಾಡಲ್ಲ ಎಂದು ಹೇಳಲು ಆಗುವುದಿಲ್ಲ. ಎಲ್ಲದಕ್ಕೂ ನಾವು ರೆಡಿ ಇರಬೇಕು. ಇದು ಅನಿವಾರ್ಯ...’

ಹೀಗೆಂದು ಮುತ್ತಿನ ಬಗ್ಗೆ ಹೇಳಿದ್ದು ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ. ಅಷ್ಟಕ್ಕೂ ಈ 32ರ ಬೆಡಗಿ ಮುತ್ತಿನ ಬಗ್ಗೆ ಇಷ್ಟೆಲ್ಲಾ ಹೇಳಿರುವುದಕ್ಕೆ ಕಾರಣ, ಧಾರಾವಾಹಿ ಒಂದಕ್ಕಾಗಿ ನಟ ಅನಿಲ್ ಕಪೂರ್ ಅವರ ತುಟಿಗೆ ಸುದೀರ್ಘ ಚುಂಬನ ಕೊಡಬೇಕಾದ ಅನಿವಾರ್ಯ ಉಂಟಾದಕ್ಕೆ.

ಕಲರ್ಸ್ (ಹಿಂದಿ) ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುತ್ತಿರುವ ‘24– ಸೀಜನ್ 2’ ಧಾರಾವಾಹಿಯಲ್ಲಿ ಈಕೆ ಅನಿಲ್ ಅವರನ್ನು ಚುಂಬಿಸುವ ದೃಶ್ಯವಿದೆ. ಕಳೆದ ವಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅವರ ಮುಂದೆ ಈ ಚುಂಬನದ ದೃಶ್ಯದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದರು.

ಆಗ ಸುರ್ವೀನ್, ‘ನಾನು ತೆರೆ ಮೇಲೆ ಅನೇಕ ನಟರ ಜೊತೆ ‘ಲಿಪ್ ಲಾಕ್’ ಮಾಡಿದ್ದೇನೆ. ಅವರೆಲ್ಲರೂ ನನ್ನ ಸಮಾನ ವಯಸ್ಕರು. ಆದರೆ ಅನಿಲ್ ಕಪೂರ್ ಅವರು ಹಾಗಲ್ಲ. ಅವರಿಗೆ ಈಗ 59 ವರ್ಷ. ಇಷ್ಟು ವಯಸ್ಸಾದರೂ ಅವರು ಸದಾ ‘ಹಾಟೆಸ್ಟ್ ನಟ’ ಎಂದು ನಾನು ನಾಚಿಕೆ ಬಿಟ್ಟೇ ಹೇಳುತ್ತೇನೆ.

ಆದರೆ ಅವರು ನನ್ನ ಅಪ್ಪನ ವಯಸ್ಸಿನವರು. ಅದಕ್ಕಾಗಿಯೇ ‘ಲಿಪ್ ಲಾಕ್’ ಮಾಡುವಾಗ ತುಂಬಾ ಮುಜುಗರ ಉಂಟಾಯಿತು. ಆ ದೃಶ್ಯದ ಚಿತ್ರೀಕರಣದ ಮುಂಚೆ ಸುಮಾರು 10–15 ನಿಮಿಷ ಸಾಕಷ್ಟು ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಅನಿವಾರ್ಯ ಉಂಟಾಯಿತು.

ಆದರೂ ಹೆದರಿಕೆ ಹೋಗಲಿಲ್ಲ. ಒಂದು ಹಂತದಲ್ಲಿ ಈ ದೃಶ್ಯ ಮಾಡುವುದಿಲ್ಲ ಎಂದೂ ನಾನು ನಿರ್ದೇಶಕರಿಗೆ ಹೇಳಿದೆ. ಆದರೆ ಆ ದೃಶ್ಯ ಈ ಧಾರಾವಾಹಿಯ ಅತಿಮುಖ್ಯ ಭಾಗವಾಗಿದ್ದರಿಂದ ಅದನ್ನು ನಾನು ಮಾಡಲೇಬೇಕಿತ್ತು. ನಿರ್ದೇಶಕರು ಹೇಳಿದಂತೆ ಕೇಳುವುದು ನಟರ ಕರ್ತವ್ಯ. ಅದಕ್ಕಾಗಿ ಮಾಡಿದೆ’ ಎಂದಿದ್ದಾರೆ.

ಈ ಧಾರಾವಾಹಿಯಲ್ಲಿ ಎರಡು ಮಕ್ಕಳ ತಂದೆ ಅನಿಲ್ ಅವರ ಪ್ರೇಯಸಿಯಾಗಿ ಸುರ್ವೀನ್ ನಟಿಸಿದ್ದಾರೆ. ಈ ಪಾತ್ರದ ಬಗ್ಗೆ ಅವರಿಗೆ ಕೇಳಿದಾಗ, ‘ಇದು ತುಂಬಾ ಸಸ್ಪೆನ್ಸ್ ಇರುವ ಪಾತ್ರ. ಅದರ ಬಗ್ಗೆ ಈಗಲೇ ನಾನು ಹೇಳಿಬಿಟ್ಟರೆ ಏನೂ ಸ್ವಾರಸ್ಯ ಇರುವುದಿಲ್ಲ. ನೀವು ಧಾರಾವಾಹಿ ನೋಡುತ್ತಾ ಹೋಗಿ...’ ಎಂದು ಚಾಲಾಕಿ ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.