ಬೆಂಗಳೂರು: ‘ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿಯನ್ನು ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದ ಪ್ರಧಾನ ಮಂತ್ರಿಗಳ ಸಲಹೆಗಾರ ಸ್ಯಾಮ್ ಪಿತ್ರೊಡಾ, ‘ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕ ಸ್ಥಾನಗಳನ್ನು ಜಯಿಸಿ ಅಧಿಕಾರಕ್ಕೆ ಮರಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
‘ನಾನು ವೈಯಕ್ತಿಕವಾಗಿ ಮೋದಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆದರೆ, ಅವರ ಅಭಿವೃದ್ಧಿ ಮಾದರಿಯನ್ನು ಒಪ್ಪುವುದಿಲ್ಲ. ನನ್ನ ಅಭಿವೃದ್ಧಿ ಮಾದರಿ ವಿಭಿನ್ನವಾದುದು’ ಎಂದು ಅವರು ಸ್ಪಷ್ಟಪಡಿಸಿದರು.

‘2004ರಲ್ಲಿ ಬಿಜೆಪಿ 280 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಧಿಕಾರಕ್ಕೆ ಬಂದುದು ಯುಪಿಎ ಸರ್ಕಾರ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಇಂದು ಸುಳ್ಳು ಚೆನ್ನಾಗಿ ಮಾರಾಟ ಆಗುತ್ತಿದೆ. ಹೀಗಾಗಿ ಅಭಿವೃದ್ಧಿ ಚಟುವಟಿಕೆಗಳ ಹೆಚ್ಚು ಪ್ರಚಾರ ಆಗಿಲ್ಲ. ಅಲ್ಲದೆ ಅಭಿವೃದ್ಧಿಯ ಬಗ್ಗೆ ಸಮರ್ಪಕ ಸಂವಹನ ನಡೆಸುವಲ್ಲೂ ನಾವು ವಿಫಲರಾಗಿದ್ದೇವೆ’ ಎಂದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಿತ್ತು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭ್ರಷ್ಟಾಚಾರ ಇಂದು ಜೀವನದ ಭಾಗ ಆಗಿದೆ. ಉದ್ಯಮಿಗಳು, ವೈದ್ಯರು, ಶಿಕ್ಷಕರು ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದಾರೆ. ಅದರ ವ್ಯಾಪಕತೆ ಕಳವಳ ಉಂಟು ಮಾಡುತ್ತಿದೆ. ಏಕಾಏಕಿ ಎಲ್ಲವನ್ನೂ ನಿಲ್ಲಿಸಲು ಸಾಧ್ಯ ಇಲ್ಲ. ವಾಸ್ತವವಾಗಿ ಚಿಂತಿಸಿ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು. ಭ್ರಷ್ಟಾಚಾರದ ನಿಯಂತ್ರಣಕ್ಕೆ ನಾವೆಲ್ಲ ಮುಂದಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

‘ದೇಶದ ಜನಕ್ಕೆ ತಮ್ಮ ಕೆಲಸದ ಬಗ್ಗೆ ಗೊತ್ತಿಲ್ಲದಿದ್ದರೂ ಪ್ರಧಾನಿಯ ಕೆಲಸದ ಬಗ್ಗೆ ಗೊತ್ತು’ ಎಂದು ಅವರು ವ್ಯಂಗ್ಯವಾಡಿದರು.
‘ರಾಷ್ಟ್ರೀಯ ಜ್ಞಾನ ಜಾಲದ ಬಗ್ಗೆ ದೇಶದ ಜನರಿಗೆ ಮಾಹಿತಿಯೇ ಇಲ್ಲ. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. 60 ಕೋಟಿ ಜನರಿಗೆ ಆಧಾರ್ ನೀಡಲಾಗಿದೆ. ಕೋರ್ಟ್, ಜೈಲು, ಪೊಲೀಸ್ ವ್ಯವಸ್ಥೆ ಕಂಪ್ಯೂಟರೀಕರಣ ಆಗಿದೆ. ಜನರಿಗೆ ಆಸಕ್ತಿ ಇರುವುದು ಕ್ರಿಕೆಟ್, ಬಾಲಿವುಡ್, ಗಾಸಿಪ್ ಬಗ್ಗೆ ಮಾತ್ರ. ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಈ ಬೆಳವಣಿಗೆ ಕಳವಳಕಾರಿ’ ಎಂದು ಅವರು ಅಭಿಪ್ರಾಯಪಟ್ಟರು.

‘ಯುವಜನರು ದೇಶದ ಶಕ್ತಿ. ಯುವಜನರನ್ನು ಸಮರ್ಪಕವಾಗಿ ಬಳಸಿಕೊಂಡರೆ ಮಾದರಿ ರಾಷ್ಟ್ರ ನಿರ್ಮಿಸಲು ಸಾಧ್ಯ. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯುವಜನರು ಮುಖ್ಯವಾಹಿನಿಗೆ ಬರಬೇಕು. 35–40ರ ಹರೆಯದ ಪ್ರತಿಭಾವಂತರು ವಿವಿಗಳ ಕುಲಪತಿಗಳಾಗಬೇಕು. ಈಗ 65 ವರ್ಷ ವಯಸ್ಸಿನವರು ಕುಲಪತಿಗಳಾಗುತ್ತಿದ್ದಾರೆ. ಆದರೆ, ವಿವಿಗಳ ಗ್ರಾಹಕರು 17– 18 ವರ್ಷದವರು’ ಎಂದು ಅವರು ಬೇಸರದಿಂದ ನುಡಿದರು.

‘ಜ್ಞಾನ ಆಯೋಗವು ಕೇಂದ್ರ ಸರ್ಕಾರಕ್ಕೆ ಈ ವರೆಗೆ 100 ವರದಿ ಸಲ್ಲಿಸಿದೆ. ವರದಿ ಸಲ್ಲಿಸಿದ ವಿಷಯವನ್ನು ಮಾತ್ರ ಮಾಧ್ಯಮಗಳು ವರದಿ ಮಾಡಿದವು. ಈ ವರದಿಗಳ ಬಗ್ಗೆ ಚರ್ಚೆ ಮಾಡಿಲ್ಲ. ಚುನಾವಣಾ ಟಿಕೆಟ್ ವಿತರಣೆಯ ಬಗ್ಗೆಯೇ ಮಾಧ್ಯಮಗಳಿಗೆ ಹೆಚ್ಚಿನ ಆಸಕ್ತಿ’ ಎಂದು ಅವರು ಟೀಕಿಸಿದರು.

* ನಾನು ಭ್ರಷ್ಟ ಅಲ್ಲ. ಆದರೆ, ಹೆಂಡತಿ, ಮಕ್ಕಳ ಬಗ್ಗೆ ಈ ಮಾತು ಹೇಳಲಾರೆ

* ದೇಶದ ಬಹುತೇಕ ಕುಲಪತಿಗಳು ಜ್ಞಾನ ಆಯೋಗದ ವರದಿಯನ್ನೇ ಓದಿಲ್ಲ

* ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ಇವತ್ತಿನ ವಿಶ್ವವಿದ್ಯಾಲಯಗಳ ಸ್ವರೂಪಕ್ಕಿಂತ ನಾಳಿನ ವಿವಿಗಳ ಸ್ವರೂಪ ವಿಭಿನ್ನ ಆಗಿರಲಿದೆ

* ನಾನು ವೃದ್ಧ. ಅವಕಾಶ ನೀಡಿದರೆ ನೇಪಥ್ಯದಲ್ಲಿ ನಿಲ್ಲಲು ಸಿದ್ಧ. ಯುವಜನರು ಮುಂದೆ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.