ಸೋಮವಾರ, ಜನವರಿ 27, 2020
15 °C

‘ರಾಜ್ಯಪಾಲರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ಯತ್ನ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯಪಾಲ ಎಚ್‌.ಆರ್‌.­ಭಾರದ್ವಾಜ್‌ ಅವರು ಅಗತ್ಯ ಸಂದರ್ಭ­ಗಳಲ್ಲಿ ಸರ್ಕಾರಕ್ಕೆ ಸಲಹೆ, ಸೂಚನೆ ನೀಡುತ್ತಾರೆ. ಅದನ್ನು ತಪ್ಪಾಗಿ ಅರ್ಥೈ­ಸುವ ಅಗತ್ಯವಿಲ್ಲ. ಅವರ ಜತೆ ಸರ್ಕಾರ ಸಂಘರ್ಷ ನಡೆಸುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೋಮ­ವಾರ ಇಲ್ಲಿ ಸ್ಪಷ್ಟಪಡಿಸಿದರು.ಪಕ್ಷದ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ರಾಜ್ಯ­ಪಾಲರನ್ನು ವರ್ಗಾವಣೆ ಮಾಡುವಂತೆ ಸಚಿವರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ ಎಂಬುದು ಕೇವಲ ವದಂತಿ. ಭಾರದ್ವಾಜ್‌ ಅವರ ಅವಧಿ ಇನ್ನು ಕೆಲವು ತಿಂಗಳಷ್ಟೇ ಇದೆ. ಈ ಸಂದರ್ಭದಲ್ಲಿ ಅವರ ವರ್ಗಾವಣೆಗೆ ಯಾರೂ ಪ್ರಯತ್ನ ನಡೆಸುವುದಿಲ್ಲ’ ಎಂದು ಹೇಳಿದರು.ಟಿಕೆಟ್‌ ಇಲ್ಲ: ಕ್ರಿಮಿನಲ್‌ ಹಿನ್ನೆಲೆ ಇರುವವರಿಗೆ ಮುಂಬರುವ ಲೋಕ­ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡುವುದಿಲ್ಲ ಎಂದು ಅವರು ಹೇಳಿದರು. ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿರುವ ಕುರಿತು ಪ್ರಶ್ನಿಸಿದಾಗ, ‘ಪಂಚ ರಾಜ್ಯಗಳ ಚುನಾವಣೆ ನಮಗೆ ಎಚ್ಚರಿಕೆ ಗಂಟೆ. ಆದ್ದರಿಂದ ಲೋಕಸಭಾ ಚುನಾವಣೆ ವೇಳೆ ಅಭ್ಯರ್ಥಿಗಳನ್ನು ಆಯ್ಕೆ ಮಾಡು­ವಾಗ ಹೆಚ್ಚು ಎಚ್ಚರಿಕೆ ವಹಿಸ­ಬೇಕಾಗುತ್ತದೆ’ ಎಂದರು.

ಪ್ರತಿಕ್ರಿಯಿಸಿ (+)