ಮಂಗಳವಾರ, ಜೂನ್ 15, 2021
22 °C
ಆಟೊ ಚಾಲಕರಿಗೆ ಸಲಹೆ

‘ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿಯ ಬಾಂಧವ್ಯ ಟ್ರಸ್ಟ್‌, ಬೆಂಗಳೂರಿನ ಟಾಲಿಮ್ಯಾಟಿಕ್ಸ್ ಮತ್ತು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಆಟೊ ಚಾಲಕರಿಗೆ ವೃತ್ತಿ ಕೌಶಲ್ಯತೆ ಹೆಚ್ಚಿಸುವ, ಒತ್ತಡ ರಹಿತ ಜೀವನ ನಡೆಸುವ ಮತ್ತು ಪ್ರಯಾಣಿಕ ಸ್ನೇಹಿಯಾಗಿ ಸೇವೆ ನೀಡುವ ಕುರಿತು ತರಬೇತಿ ಕಾರ್ಯಕ್ರಮವನ್ನು ಉಡುಪಿಯ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾ­ಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಆಟೊ ಚಾಲಕರು ವೃತ್ತಿ ಕೌಶಲ್ಯ ಹೆಚ್ಚಿಸಿ ಗೌರವಯುತ ಜೀವನ ನಡೆಸಬೇಕು ಎಂದರು.ಬೆಂಗಳೂರಿನ ಬೋಯನ್ಸಿ ಸಂಸ್ಥೆಯ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ತರಬೇತುದಾರ ಅಜಿತ್ ಕಾಯ್ಕಿಣಿ ಆಟೊ ಚಾಲಕರಿಗೆ ವೃತ್ತಿಪರತೆ ಕುರಿತು ಮಾಹಿತಿ ನೀಡಿದರು. ಉಡುಪಿ ರಿಕ್ಷಾ ಯೂನಿ ಯನ್, ಶಾರದಾ ಆಟೋ ಯೂನಿಯನ್ ಮತ್ತು ಜಯಕರ್ನಾಟಕ ಆಟೋ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು. ಬಾಂಧವ್ಯ ಟ್ರಸ್ಟ್‌ನ ಕಾರ್ಯದರ್ಶಿ ಪಿ. ಲಕ್ಷ್ಮಣ್ ಶೆಣೈ ಸ್ವಾಗತಿಸಿದರು, ಕೋಶಾಧಿಕಾರಿ ಜನಾರ್ದನ ಭಂಡಾರ್ಕರ್ ವಂದಿಸಿದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.