ಭಾನುವಾರ, ಜನವರಿ 19, 2020
25 °C

‘ಶಾಂತಿ ಎಲ್ಲ ಧರ್ಮಗಳ ತಿರುಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಶಾಂತಿ ಹಾಗೂ ಸೌಹಾರ್ದ ಎಲ್ಲ ಧರ್ಮಗಳ ತಿರುಳಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಹೇಳಿದರು. ಕ್ರಿಸ್‌ಮಸ್ ನಿಮಿತ್ತ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಸಂಘಟನೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಹಾರ್ದಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರತಿಯೊಬ್ಬರೂ ಧರ್ಮಗಳ ಸಂದೇಶಗಳನ್ನು ಅರಿತು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಮುಂದಾಗ­ಬೇಕು ಎಂದರು. ಶಾಂತಿ ಸಂದೇಶ ಸಾರುವುದು ಹಬ್ಬಗಳ ಆಚರಣೆ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಪ್ರಾಂತೀಯ ಯುವ ಆಯೋಗದ ಕಾರ್ಯದರ್ಶಿ ಸ್ವಾಮಿ ಮರಿ ಜೋಸೆಫ್ ಹೇಳಿದರು.ಡಾ. ರಾಬರ್ಟ್ ಮೈಕಲ್ ಮಿರಾಂದ, ಗುರುದ್ವಾರದ ದರ್ಬಾರ್‌ಸಿಂಗ್, ಆಣದೂರಿನ ಭಂತೆ ವರಜ್ಯೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್, ಪ್ರಯಾವಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನುಪಮಾ ಏರೋಳಕರ್, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಜಿಲ್ಲಾ ಅಧ್ಯಕ್ಷ ಜಗದೀಶ್ ಬಿರಾದಾರ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)