ಶುಕ್ರವಾರ, ಮಾರ್ಚ್ 5, 2021
27 °C

‘ಸಂಕ್ರಾಂತಿ ಸಂಭ್ರಮ 2016’ ಲಲಿತ ಪ್ರಬಂಧ ಸ್ಪರ್ಧೆ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಕ್ರಾಂತಿ ಸಂಭ್ರಮ 2016’ ಲಲಿತ ಪ್ರಬಂಧ ಸ್ಪರ್ಧೆ ಫಲಿತಾಂಶ

ಬೆಂಗಳೂರು: ಭೂಮಿಕಾ ಪುರವಣಿಯು ಮಹಿಳೆಯರಿಗಾಗಿ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ 2016 ಲಲಿತ ಪ್ರಬಂಧ ಸ್ಪರ್ಧೆಯು ಈ ಸಲವೂ ವೈವಿಧ್ಯಮಯವಾಗಿತ್ತು. ಎಸ್‌.ಎಫ್‌. ಯೋಗಪ್ಪನವರ್‌ ಹಾಗೂ  ಎಚ್‌. ನಾಗವೇಣಿ ಅವರು ತೀರ್ಪುಗಾರರಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿಯೇ ತೀರ್ಪು ನೀಡಿದ್ದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು.ಪ್ರತಿ ವರ್ಷವೂ ಹೊಸತನ, ವೈವಿಧ್ಯಮಯ ವಿಷಯ ಹಾಗೂ ಅಭಿವ್ಯಕ್ತಿಯ   ಮಾಧ್ಯಮ ಪ್ರತಿ ವರ್ಷವೂ ಪ್ರಬಲ ಸ್ಪರ್ಧೆ ಒಡ್ಡುವ ಗುಣಗಳಾಗಿವೆ. ನಾಡಿನುದ್ದಗಲದಿಂದಷ್ಟೇ ಅಲ್ಲ, ಸಾಗರೋತ್ತರ ಸ್ಪರ್ಧಿಗಳೂ ಭಾಗವಹಿಸಿ ವಿಜೇತರಾಗಿರುವುದು ಈ ವರ್ಷದ ವಿಶೇಷ.ಮೆಚ್ಚುಗೆ ಪಡೆದ ಪ್ರಬಂಧಗಳು:

1) ದುರಸ್ತಿಯೆಂಬುದು ಬೇಕು ತಂದುರಸ್ತಿಯ ಬದುಕಿಗೆ:
ವೈಶಾಲಿ ಹೆಗಡೆ (ಬಾಸ್ಟನ್, ಯು.ಎಸ್.ಎ.)

2) ಸಮರಸವೇ ಜೀವನ: ಜಯಂತಿ ಅಮೃತೇಶ್‌ (ಮೈಸೂರು)

3) ಹಾವಿನ ಸುತ್ತ ಭಾವಗಳ ಹುತ್ತ: ಮಾಲತಿ ಹೆಗಡೆ (ಧಾರವಾಡ)

4) ಕಳೆಯದ ಬಳೆಯ ನಿನಾದ: ಲಲಿತಾ ಕೆ ಹೊಸಪ್ಯಾಟಿ (ಬಾಗಲಕೋಟೆ)ತೀರ್ಪುಗಾರರ ಮಾತು ಹಾಗೂ ಬಹುಮಾನಿತ ಪ್ರಬಂಧಗಳನ್ನು ‘ಭೂಮಿಕಾ’ ಪುರವಣಿಯಲ್ಲಿ ಪ್ರಕಟಿಸಲಾಗುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.