ಸೋಮವಾರ, ಜನವರಿ 20, 2020
27 °C
ಸಿರಿ ಮಹಿಳಾ ಒಕ್ಕೂಟದ ವಾರ್ಷಿಕೋತ್ಸವ

‘ಸಂಘಟನೆ ಅಭಿವೃದ್ಧಿಗೆ ಸಹಕಾರವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ:  ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಆರ್ಥಿಕ ಭದ್ರತೆಯ ಅಭಿವೃದ್ದಿಗೆ ಸಹಕಾರಿಯಾಗಲಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬಿ.ಎನ್‌.­ರಾಮಕೃಷ್ಣಶೆಟ್ಟಿ ಅಭಿಪ್ರಾಯ­ಪಟ್ಟರು. ಪಟ್ಟಣದ ಛತ್ರಮೈದಾನದಲ್ಲಿರುವ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸಿರಿ ಮಹಿಳಾ ಒಕ್ಕೂಟದ ವಾರ್ಷಿ­ಕೋತ್ಸವವನ್ನು ಉದ್ಘಾಟಿಸಿ ಮಾತ­ನಾಡಿದರು.

ಮಹಿಳೆಯರು ಸ್ವಾವ­ಲಂಬಿ­ಯಾಗಲು ಸಂಘಟನೆಗಳು ಸಹಕಾರಿ­ಯಾಗಿದ್ದು, ಸಂಘಟನೆಗಳಲ್ಲಿ ಆರ್ಥಿಕ ಚಟು­ವಟಿಕೆಗಳನ್ನು ಸಮರ್ಥವಾಗಿ ನಡೆಸುವ ಮೂಲಕ, ಮಹಿಳೆಯರು ಆರ್ಥಿಕ ಅಭಿವೃದ್ಧಿಯತ್ತ ಸಾಗಲು ಸಂಘಟನೆಗಳು ಸಹಕಾರಿಯಾಗಬೇಕು, ಸಂಘಟನೆಗಳಿಗೆ ಯುವ ಸಮೂಹವನ್ನು ಸೇರಿಸಿಕೊಂಡಾಗ ಸಂಘಟನೆ ಇನ್ನಷ್ಟು ಬಲಹೊಂದಲು ಸಹಾಯಕವಾಗುತ್ತದೆ ಜೊತೆಗೆ ಯುವ ಜನತೆಗೆ ಸಂಘಟನೆಯ ಲಾಭ ದೊರಕಿದಂತಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿ­ದಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕ ಬಾಬುರಾವ್‌ ಮಾತನಾಡಿ, ಮಹಿಳಾ ಸಂಘಟನೆಗಳು ಸಮಾಜದ ಬಲಾಯುತ ಚಕ್ರಗಳಾ­ಗಿದ್ದು, ಸಮಾಜವನ್ನು ಸರಿಯಾದ ದಾರಿ­ಯಲ್ಲಿ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ, ಸಂಘಟನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯ ನಡೆಯ­ಬೇಕಿದೆ ಜೊತೆಗೆ ಮಹಿಳೆಯರು ಸಂಘಟ­ನೆಯ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದರು.ಸಂಘದ ಅಧ್ಯಕ್ಷೆ ಐರಿ ಡಿಸೋಜಾ ಮಾತನಾಡಿ, ಒಂದು ಘಟಕದಿಂದ ಸ್ಥಾಪನೆ­­ಯಾದ ಸಂಘ, ಇದೀಗ ಪಟ್ಟ­ಣದ ನಾನಾ ವಲಯದಗಳಲ್ಲಿ 20 ಘಟಕ­­ಗಳನ್ನು ಹೊಂದಿದ್ದು, ಇನ್ನೂರೈ­ವತ್ತಕ್ಕೂ ಹೆಚ್ಚು ಸದಸ್ಯರಿದ್ದು, ಆರ್ಥಿಕ ಚಟುವಟಿಕೆಗಳು ಲಾಭದತ್ತ ಸಾಗುತ್ತಿವೆ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಿಗೆ ಕ್ರೀಡೆ, ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಕರವೇ ಯ ಶಾರದ, ಪ.ಪಂ. ಮಾಜಿ ಅಧ್ಯಕ್ಷೆ ಜಯಮ್ಮ ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)