ಬುಧವಾರ, ಜೂನ್ 16, 2021
28 °C

‘ಸರ್ಕಾರಿ ಯೋಜನೆ ಸದುಪಯೋಗಪಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಬಡ ಜನರ ಅಭಿವೃದ್ಧಿ ಗಾಗಿ ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳನ್ನು  ಪ.ಜಾ. ಪ.ಪಂಗಡ ದವರು  ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.ಇಲ್ಲಿನ ನಗರಸಭೆ ಆವರಣದಲ್ಲಿ 2013–14 ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಮತ್ತು ನಗರಸಭೆ ಆದಾಯದ ಶೇ.22.75ರ ಕಾಯ್ದಿರಿಸಿದ ನಿಧಿಯ ಅಡಿಯಲ್ಲಿ ಪ.ಜಾ., ಪಂಗಡದ ಜನರ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಡ ಜನತೆ ಮಧ್ಯವರ್ತಿಗಳನ್ನು ಕರೆದುಕೊಂಡು ಬರದೇ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗಳ ಲಾಭ ಪಡೆಯಬೇಕು ಎಂದು ಶಾಸಕರು ಸಲಹೆ ನೀಡಿದರು.ವೈಯಕ್ತಿಕ ಶೌಚಾಯಲ ನಿರ್ಮಾಣ, ಗ್ಯಾಸ್‌ ಸಿಲಿಂಡರ್‌, ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌, ಅಂಗವಿಕ ಸ್ವಯಂ ಉದ್ಯೋಗ ಮಾಡಲು ಸಹಾಯಧನದ ಆದೇಶ ಪತ್ರಗಳನ್ನು ವಿತರಣೆ ಮಾಡಿದರು.2013–14 ನೇ ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಹಾಗೂ ನಗರಸಭೆ ಆಧಾಯದ ಶೇ.22.75, 7.25 ಹಾಗೂ ಶೇ.3 ರಡಿ ಕಾಯ್ದಿರಿಸಿದ ಅನುದಾನದಲ್ಲಿ ಒಟ್ಟು ₨ 1.74 ಕೋಟಿ ರೂಪಾಯಿಗಳ ಅನುದಾನದ ಪರಿಹಾರದ ಆದೇಶ ಪತ್ರಗಳನ್ನು ಶಾಸಕರು ವಿತರಣೆ ಮಾಡಿದರು.ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುಲ್ಲಾ ಖಾಜಿ ಹಾಗೂ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ರತ್ನಾಪುನೀತ, ಸುರೇಶ ಕಲಾಲ, ಸೈಯದ್‌ ಬಾಷಾ , ಪ್ರಕಾಶ ಜೈನ, ಪ್ರಭು ಸ್ವಾಮಿ  , ರಾಘವೇಂದ್ರ ಚಿನ್ನಿಕಟ್ಟಿ, ಬಸವರಾಜ ಹುಚಗೊಂಡರ, ಆಯೂಬ್‌ ಖಾನ್‌ ಮತ್ತು ಸಹಾಯಕ ಎಂಜಿನಿಯರ್‌ ಬಿ.ಎಸ್‌.ಪಾಟೀಲ, ಸುರೇಶ ಚಲುವಾದಿ, ಮಧು ಕೋಳಿವಾಡ ಉಪಸ್ಥಿತರಿದ್ದರು.ರುದ್ರಮುನೀಶ್ವರ ಕಾರ್ಯಕ್ರಮ ನಿರೂಪಿಸಿದರು, ಪೌರಾಯಕ್ತ ಬಿ.ಎಸ್‌. ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಮುದಾಯ ಸಂಘಟನಾಧಿಕಾರಿ ಎನ್‌.ಕೆಂಚಪ್ಪ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.