ದೊಡ್ಡಬಳ್ಳಾಪುರ: ‘ಸರ್ಕಾರ ಸಣ್ಣ ಪುಟ್ಟ ರಾಜ್ಯಗಳಿಂದ ಅಕ್ಕಿಯನ್ನು ಆಮದು ಮಾಡಿಕೊಂಡು ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕೃಷಿಕರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ’ ಎಂದು ಸಾವಯವ ಕೃಷಿ ತಜ್ಞ ಹಾಗೂ ನಾಡೋಜ ಎಲ್.ನಾರಾಯಣ ರೆಡ್ಡಿ ವಿಷಾದಿಸಿದರು.

ಕೊಂಗಾಡಿಯಪ್ಪ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಎಲ್.ನಾರಾಯಣ ರೆಡ್ಡಿ ಅವರ ತೋಟದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ‘ತೋಟದ ಅಂಗಳದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಭಾರತ ಸಂಪದ್ಭರಿತ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದೆ. ಪ್ರಪಂಚದ ಯಾವ ದೇಶಕ್ಕೂ ಇಂಥ ಭಾಗ್ಯವಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಅಗತ್ಯ ಇರುವುದಕ್ಕಿಂತಲೂ ಹೆಚ್ಚು ಮಳೆ ಬೀಳುತ್ತಿದೆ. ಆದರೆ ನೀರು ಸಂಗ್ರಹಣೆಯ ಜಾಣ್ಮೆ ತಿಳಿಯದೆ ನೀರು ಪೋಲಾಗುತ್ತಿದೆ’ ಎಂದು ವಿಷಾದಿಸಿದರು.

‘ಕೃಷಿ ವಿಜ್ಞಾನಿಗಳು ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡಲು ರಾಸಾಯನಿಕಗಳ ಬಳಕೆ ಮಾಡಿ ಹೈಬ್ರಿಡ್ ಬೆಳೆ ಬೆಳೆಯವುದೇ ಉತ್ತಮ ಮಾರ್ಗವೆಂದು ಹೇಳುತ್ತಿದ್ದಾರೆ. ಇರುವಷ್ಟು ಭೂಮಿಯಲ್ಲೇ ಸರಿಯಾದ ಕ್ರಮದಲ್ಲಿ ಬೆವರು ಸುರಿಸಿ ದುಡಿದರೆ ನಮ್ಮ ದೇಶದ ಆಹಾರ ಉತ್ಪಾದನೆಯನ್ನು ಪರದೇಶಗಳಿಗೆ ರಪ್ತು ಮಾಡಬಹುದು’ ಎಂದು ರೆಡ್ಡಿ ತಿಳಿಸಿದರು.

‘ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಯಾವ ಹಾಹಾಕಾರವೂ ಉಂಟಾಗುವುದಿಲ್ಲ ಎಂಬುದಕ್ಕೆ ನಮ್ಮ ಈ ತೋಟವೇ ಸಾಕ್ಷಿ. ತೋಟದ ನಾಲ್ಕು ಎಕರೆ ಜಾಗದಲ್ಲಿ ಏಳನೂರಾ ಐವತ್ತಕ್ಕೂ ಮಿಗಿಲಾದ ಮರಗಿಡಗಳು ಇವೆ, ಇದರಿಂದ ಭೂಮಿ ಸದಾ ತಂಪಾಗಿರುತ್ತದೆ. ಪಕ್ಕದ ಒಣ ಭೂಮಿಯಲ್ಲಿ ಸಾವಿರದ ಐದುನೂರು ಅಡಿಗಳಷ್ಟು ಕೊಳವೆ ಬಾವಿ ಕೊರೆದರೂ ನೀರು ಲಭ್ಯವಿಲ್ಲ.

ಆದರೆ ಈ ತೋಟದಲ್ಲಿ ಕೇವಲ ಐದುನೂರು ಅಡಿಗಳಿಗೆ ನೀರು ಸಿಗುತ್ತದೆ. ದೇಶದ ಜನ ನೀರನ್ನಷ್ಟೇ ಅಲ್ಲ. ನಿಸರ್ಗದ ಪ್ರತಿಯೊಂದು ಸಂಪನ್ಮೂಲಗಳನ್ನೂ ಸದ್ಬಳಕೆ ಮಾಡಿಕೊಂಡರೆ ಯಾವ ಅಭಾವವೂ ಬರುವುದಿಲ್ಲ’ ಎಂದರು.

‘ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವುದರಿಂದ ಮತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯಲ್ಲಿ ವಾಸ ಮಾಡುವ ಸೂಕ್ಷ್ಮ ಜೀವಿಗಳು ಸಾಯುತ್ತಿದ್ದು, ಭೂಮಿ ಕ್ರಮೇಣ ಬಂಜೆಯಾಗುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಕೃಷಿ ಬದುಕಿಗಿಂತ ನೆಮ್ಮದಿಯ ಬದುಕು ಮತ್ತೊಂದಿಲ್ಲ. ರೈತರು ಸರಿಯಾದ ಪೂರ್ವ ಸಿದ್ಧತೆಗಳಿಲ್ಲದೆ ಕೃಷಿ ಉತ್ಪಾದನೆಗೆ ಮುಂದಾಗುವುದರಿಂದ ಅನಾಹುತ ಮಾಡಿಕೊಳ್ಳುತ್ತಾರೆ. ಬುದ್ಧಿವಂತಿಕೆಯಿಂದ ಮತ್ತು ಸಹಜ ಕೃಷಿ ಪದ್ಧತಿಯಲ್ಲಿ ಶ್ರಮಪಟ್ಟು ದುಡಿದರೆ ರೈತ ಚೆನ್ನಾಗಿ ಬದುಕಬಹುದು’ ಎಂದು ಅವರು ಕಿವಿಮಾತು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರದ ಮುಖಂಡರಾದ ಹನುಮಂತಪ್ಪ, ಹಣಬೆ ಗ್ರಾಮ ಪಂಚಾಯತಿ ಸದಸ್ಯರಾದ ಉಗ್ರೇಗೌಡ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆಂಪಣ್ಣ, ಸರೋಜಮ್ಮ, ಕೃಷಿಕ ಸಾಯಣ್ಣ, ಎನ್ಎಸ್ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಡಾ. ಬಿ. ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.